ಇ-ಸಂಜೀವಿನಿ ಆ್ಯಪ್‌ಗೆ ಉತ್ತಮ ಪ್ರತಿಕ್ರಿಯೆ

 ಹಾಸನ: ಅನಾರೋಗ್ಯ ಸಮಸ್ಯೆಯಿದ್ದರೂ ಕರೋನಾ ಭೀತಿಯಿಂದ ಆಸ್ಪತ್ರೆಗೆ ಬಾರದಿರುವವರಿಗೆ ಇದ್ದಲ್ಲಿಗೆ ವೈದ್ಯರ ಸಲಹೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಜಾರಿಗೊಳಿಸಲಾದ ಇ-ಸಂಜೀವಿನಿ ಸೇವೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಾರದಲ್ಲಿ 537 ಜನರು ನೋಂದಣಿಯಾಗಿದ್ದಾರೆ.
ಕೇಂದ್ರ ಸರ್ಕಾರ ಮೂರು ತಿಂಗಳ ಹಿಂದೆ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಯು ರಾಷ್ಟ್ರೀಯ ದೂರವಾಣಿ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಸಾಮಾನ್ಯ ಜ್ವರ ಸೇರಿ ವಿವಿಧ ಬಗೆಯ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರು ಮೊಬೈಲ್ ಮೂಲಕವೇ ಪರಿಹಾರ ನೀಡುತ್ತಿದ್ದಾರೆ.

ಸ್ಮಾರ್ಟ್ ಫೋನ್ ಹೊಂದಿರುವ ಯಾರಾದರೂ ಪ್ಲೇ ಸ್ಟೋರ್ ಮೂಲಕ ಇ నేంజివిని ఆవా డౌనోలుండా మోడిపింళ్చబిణు. ఆవో ఇనోన్నాలో బళితే ಹೆಸರು, ವಿಳಾಸವನ್ನು ನಮೂದಿಸಬೇಕು. ಆ ಬಳಿಕ ಟೋಕನ್ ನಂಬರ್‌ನ ಸಂದೇಶ ಮೊಬೈಲ್‌ಗೆ ಬರುತ್ತದೆ. ಆಗ ಮತ್ತೆ ಆ್ಯಪ್‌ಗೆ ತೆರಳಿ ತಮಗಿರುವ ಆರೋಗ್ಯ ಸಮಸ್ಯೆ ಹಾಗೂ ಬೇಕಿರುವ ಪರಿಹಾರದ ಕುರಿತು ತಿಳಿಸಬೇಕು. ನಿಮ್ಮ ಮನವಿಯನ್ನು ಸ್ವೀಕರಿಸುವ ಆ್ಯಪ್ ಸಂಬಂಧಪಟ್ಟ ವೈದ್ಯರಿಗೆ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತದೆ.

ಈ ವೇಳೆ ವ್ಯಕ್ತಿಯು ಆನ್‌ಲೈನ್‌ನಲ್ಲೇ ಇರಬೇಕಾಗುತ್ತದೆ. ನೋಂದಣಿ ಹಾಗೂ ಕಾಯಿಲೆಯ ವಿವರ ಗೊತ್ತಾಗುತ್ತಿದ್ದಂತೆ ವೈದ್ಯರು ವಿಡಿಯೋ ಕಾಲ್ ಮೂಲಕ ತಮ್ಮೊಂದಿಗೆ ಮಾತನಾಡುತ್ತಾರೆ. ಆರೋಗ್ಯ ವೃದ್ಧಿಗೆ ತೆಗೆದುಕೊಳ್ಳಬೇಕಿರುವ ಅಗತ್ಯ ಮಾತ್ರೆ, ಔಷಧವನ್ನು ಹೇಳುತ್ತಾರೆ. ಆಸ್ಪತ್ರೆಗೆ ಭೇಟಿ ನೀಡಬೇಕಾದ ತುರ್ತು ಇದ್ದರೆ ಹಾಜರಾಗಬೇಕಿರುವ ದಿನಾಂಕವನ್ನು ತಿಳಿಸುತ್ತಾರೆ. ಸೋಮವಾರದಿಂದ ಶನಿವಾರದ చేరిగి బిళగి 9 ರಿಂದ ಸಂಜೆ 4.30ರ ವರೆಗೆ ಇ-ಸಂಜೀವಿನಿ ಆ್ಯಪ್‌ನಲ್ಲಿ ವೈದ್ಯರು ಲಭ್ಯರಿರುತ್ತಾರೆ.

ಜಿಲ್ಲೆಯ 37 ವೈದ್ಯರು ಕಾರ್ಯನಿರತ:

ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ 37 ವೈದ್ಯರು ಇ-ಸಂಜೀವಿನಿ ಆ್ಯಪ್ ಸೇವೆಯಲ್ಲಿ ತೊಡಗಿದ್ದಾರೆ. ಕಾರ್ಯಕ್ರಮ ಅನುಷ್ಠಾನ ಸಂಬಂಧ ಮೂರು ತಿಂಗಳ ಹಿಂದೆಯೇ ಆಸಕ್ತ ವೈದ್ಯರಿಂದ ಮಾಹಿತಿ ಪಡೆದಿತ್ತು. ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚಿದ್ದರಿಂದ ಆ್ಯಪ್ ಕಡೆಗೆ ಹಿಮ್ಸ್ ಗಮನ ಹರಿಸಿರಲಿಲ್ಲ. ಈಗ ಇ-ಸಂಜೀವಿನಿ ಬಳಕೆಗೆ ಪ್ರಾಶಸ್ತ್ರ ನೀಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Post a Comment

Previous Post Next Post