ಗಂಡನ ಕಿರುಕುಳಕ್ಕೆ ಹೆಂಡತಿ ಬಲಿ, ಗಂಡ ಮಾವ ನಾಪತ್ತೆ

ಅರಕಲಗೂಡು: ಮಲ್ಲಿಪಟ್ಟಣ ಹೋಬಳಿ ಪುಟ್ಟನಹೊಸಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ೨೪ ವರ್ಷದ ಗೃಹಿಣಿ ಸಾಕಮ್ಮ ಆತ್ಮಹತ್ಯೆ.

ಈಕೆಯ ಗಂಡ ಪ್ರವೀಣ್, ಮಾವ ರಂಗಸ್ವಾಮಿ ನಾಪತ್ತೆ. 
ಗಂಡನ ಕಿರುಕುಳಕ್ಕೆ ಬೇಸತ್ತು ಶುಕ್ರವಾರ ತಡರಾತ್ರಿ ನೇಣಿಗೆ ಶರಣಾದ ಮಹಿಳೆ, ಅರಕಲಗೂಡು ಪೊಲೀಸರು ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.
2 ವರ್ಷದ ಹಿಂದೆ ಅರಕಲಗೂಡು ತಾಲೂಕು ಇಬ್ಬಡಿ ಗ್ರಾಮದ  ಜವರಯ್ಯ ನ ಮಗಳು ಸಾಕಮ್ಮಳನ್ನು ಪುಟ್ಟನ ಹೊಸಹಳ್ಳಿ ಗ್ರಾಮದ.  ರಂಗಸ್ವಾಮಿ   ಮಗನಾದ ಪ್ರವೀಣ್ 27 ವರ್ಷ ಪರಿಶಿಷ್ಟ ಜಾತಿ ಈತನಿಗೆ ಮದುವೆ ಮಾಡಿಕೊಟ್ಟಿದ್ದು   7 ತಿಂಗಳ ಒಂದು ಗಂಡು ಮಗು ಇದ್ದು ,   ನಂತರ ಮದುವೆಯಾದ 6 ತಿಂಗಳ ನಂತರದಿಂದ ಸಾಕಮ್ಮನ ಶೀಲ ಶಂಕಿಸಿ ಗಂಡ ಸಂಸಾರದಲ್ಲಿ ಕಲಹ ಮಾಡುತ್ತಿದ್ದು,  ಹಲವಾರು ಬಾರಿ ಎರಡು ಸಂಸಾರದವರು ಬುದ್ದಿಹೇಳಿದ್ದರು. 
ಸಾಕಮ್ಮ ಈಗ್ಗೆ ಮೂರು ತಿಂಗಳಿನಿಂದ ತಂದೆಯ ಮನೆ ಇಬ್ಬಡಿಯಲ್ಲಿದ್ದು ನೆನ್ನೆ ಶುಕ್ರವಾರ ಬೆಳಗ್ಗೆ ಪುಟ್ಟನ ಹೊಸಳ್ಳಿಗೆ ಹೋಗಿದ್ದು  ಅತ್ತೆ,,ಮಾವ, ಗಂಡ  ಗಂಡನ ಅಕ್ಕ ಮಮತಾ ಮನೆಯಲ್ಲಿದ್ದು ಸಂಸಾರದ ವಿಷಯದಲ್ಲಿ ಜಗಳವಾಗಿದ್ದು ಗಂಡ ಮದ್ಯಪಾನ ವ್ಯಸನಿಯಾಗಿದ್ದು,  ಕುಡಿದು ಬಂದು ಹೆಂಡತಿ ಜೊತೆ ಜಗಳ ಮಾಡಿದ್ದು ರಾತ್ರಿ ಜಗಳವಾಗಿ ಹೆಂಡತಿ ಸಾಕಮ್ಮ ಮನೆಯ ಹಿಂದೆ ಇದ್ದ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು , ಗಂಡ ಮಾವ  ಓಡಿಹೋಗಿದ್ದು ಅನುಮಾನಕ್ಕೆ ಅಸ್ಪದವಾಗಿದ್ದು ಗಂಡ ಮತ್ತು ಮನೆಯವರು ನೇಣು ಹಾಕಿದ್ದಾನೆ ಎಂದು ಸಾಕಮ್ಮನ ತವರು ಮನೆಯವರು ದೂರಿದ್ದಾರೆ.

Post a Comment

Previous Post Next Post