ತುಮಕೂರು : ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿ ವಿಭಿನ್ನ ಮತಯಾಚನೆ ಪತ್ರದೊಂದಿಗೆ ರಾಜ್ಯದಲ್ಲೇ ಸದ್ದು ಮಾಡಿದ್ದ ಗಂಡೆದೆ ಗಂಗಮ್ಮಗೆ ಬಿದ್ದ ಮತಗಳೆಷ್ಟು ಗೊತ್ತಾ ? ಚಪ್ಪಲಿ ಗುರುತಿನೊಂದಿಗೆ ಅಖಾಡಕ್ಕಿಳಿದಿದ್ದ ಇವರು ಪಡೆದ ಮತಗಳ ಸಂಖ್ಯೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ .
ತುಮಕೂರು ತಾಲೂಕಿನ ಹೆಣ್ಣೂರು ಗ್ರಾಪಂ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್ . ಗಂಗಮ್ಮ , ಚುನಾವಣಾ ಪ್ರತಾರಕ್ಕೆ ನೆಗೆಟಿವ್ ಇಮೋಷನ್ ದಾಳವಾಗಿ ಬಳಸಿಕೊಂಡಿದ್ದರು . ಗೆದ್ದರೆ ಏನು ಮಾಡಿವು ಎನ್ನುವುದಕ್ಕಿಂತ ಸೋತರೆ ಏನೇನು ಮಾಡಿಸುತ್ತೇನೆ ಎಂದು ಖಡಕ್ ವಾರ್ನಿಂಗ್ ಮಾಡುವ ಮೂಲಕ ಮತದಾರರಲ್ಲಿ ಭೀತಿ ಉಟ್ಟಿಸಿದ್ದರು . ಸೋತರೂ ಕೆಲಸ ಮಾಡುವುದಾಗಿ ಹೇಳಿದ್ದ ಗಂಗಮ್ಮ , ಸೋತರೆ ಸರ್ಕಾರಕ್ಕೆ ಸುಳ್ಳು ಮಾಹಿತಿಕೊಟ್ಟು ಮೈತ್ರಿ , ಮನಸ್ವಿನಿ , ವಿಧವಾ ವೇತನಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ 40 ಕುಟುಂಬಗಳ ಹಣವನ್ನು ನಿಲ್ಲಿಸುವೆ . 25 ಕುಟುಂಬಗಳು ಹೊಂದಿರುವ ಅನರ್ಹ ಪಡಿತರ ಚೀಟಿಗಳ ರದ್ದು , ಒತ್ತುವರಿ ಆಗಿರುವ ಗ್ರಾಮ ಠಾಣಾ ಜಮೀನು ತೆರವು ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದರು . ಗೆದ್ದರೆ ರಸ್ತೆ , ಚರಂಡಿ ನಿರ್ಮಾಣ ಸೇರಿದಂತೆ ಸರ್ವೇಸಾಮಾನ್ಯ ಭರವಸೆ ನೀಡಿದ್ದರು . ಈ ಮತಯಾಚನೆ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು .
Tags
ತುಮಕೂರು