ಚುನಾವಣೆ ವೇಳೆ ಕೋವಿಡ್ ನಿಯಮ ಪಾಲಿಸಿ

ಆಲೂರು/ಸಕಲೇಶಪುರ: ಪ್ರತಿ ಹಂತದಲ್ಲೂ ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸುವ ಮೂಲಕ ಗ್ರಾಪಂ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸೂಚಿಸಿದರು.
ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಡೇಟಾಎಂಟ್ರಿ ಆಪರೇಟರ್,ಚುನಾವಣಾಧಿಕಾರಿಗಳು ಮತ್ತು ಸಹ ಚುನಾವಣಾ ಧಿಕಾರಿಗಳಿಗೆ ನಡೆದ ತರಬೇತಿ ಶಿಬಿರದಲ್ಲಿ ಮಾತನಾಡಿ, ಡಿ.11ರಂದು ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿ ಮತ್ತು ಸೂಚಕರು ಕೋವಿಡ್ ನಿಯಮಪಾಲನೆ ಮಾಡಬೇಕು. ಡಿ.11 ರಂದು ಚುನಾವಣೆ ನಡೆಸಲು ತಾಲೂಕು ಆಡಳಿತ ಸಜ್ಜಾಗಿದೆ. ಮತದಾರರು ಧೈರ್ಯವಾಗಿ, ಶಾಂತಿಯುತವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ತಹಶೀಲ್ದಾರ್ ಶಿರೀನ್‌ತಾಜ್ ಮಾತನಾಡಿ, ಹಂಚೂರು ಗ್ರಾಪಂ ಹೊರತುಪಡಿಸಿ ಉಳಿದ 14 ಪಂಚಾಯ್ತಿಗಳಿಗೆ ಎರಡನೇ ಹಂತದಲ್ಲಿ ನಡೆಯುವ ಚುನಾವಣೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಸನ್ನದ್ಧವಾಗಿದೆ ಎಂದು ವಿವರಿಸಿದರು. ತಾಲೂಕು ಅರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ, ಚುನಾವಣೆ ಪ್ರಕ್ರಿಯೆಗಳು ನಡೆಯುವ ಸಂದರ್ಭದಲ್ಲಿ ಕೋವಿಡ್‌ ಮುಂಜಾಗ್ರತೆ ಕ್ರಮಗಳಾದ ಸ್ಯಾನಿಟೈಸರ್, ಗೌಸ್, ಥರ್ಮಲ್ ಸ್ಕ್ಯಾನಿಂಗ್, ಅಂತರ ಕಾಪಾಡಿಕೊಳ್ಳುವುದು ಸೇರಿಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುವುದು, ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯೂ ಚುನಾವಣೆಗೆ ಸ್ಪರ್ಧಿಸಿ ಮತ ಚಲಾಯಿಸಬಹುದು. ಇವರಿಗೆ ಮತದಾನದ ದಿನ ಸಂಜೆ 5 ರಿಂದ 6 ರವರೆಗೆ ಪಿಪಿಇ ಕಿಟ್ ಧರಿಸಿ ಮತದಾನಕ್ಕೆ ಅವಕಾಶಕಲ್ಪಿಸಲಾಗುವುದು ಎಂದರು. ತಾಪಂ ಇಒ ಎಚ್.ಕೆ.ಸತೀಶ್ ಉಪಸ್ಥಿತರಿದ್ದರು.

Post a Comment

Previous Post Next Post