ಹಾಸನ,: "ಮೋತಿ ಹೋಟೆಲ್" ಈ ಒಂದು ಹೆಸರು ಹಾಸನ ಜಿಲ್ಲೆಯಲ್ಲಿಯೆ ಪ್ರಖ್ಯಾತಿ ಪಡೆದಿತ್ತು... ನಗರದ ಹೃದಯ ಭಾಗದಲ್ಲಿನ `ರವಾ? ದೋಸೆ, ಮಸಾಲೆ ದೋಸೆ, ಅಪ್ಪಟ `ಕಾಫಿ?ರುಚಿಗೆ ಹೆಸರಾಗಿದ್ದ `ಮೋತಿ? ಹೋಟೆಲ್ ಇನ್ನು ನೆನಪು ಮಾತ್ರ!
47 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದ ಹೋಟೆಲ್ ವ್ಯಾಪಾರ ನಡೆಸಿಕೊಂಡು ಬಂದಿದ್ದ ನಾರಾಯಣರಾವ್ ಮಾಲೀಕತ್ವದ ಹೋಟೆಲ್ ಇದೀಗ ಬಂದ್ ಆಗುತ್ತಿದೆ;ವಿಚಾರ ತಿಳಿದ ನೂರಾರು ಗ್ರಾಹಕರು, ಹಿತೈಷಿಗಳು ಮತ್ತಿತರ ಸಾರ್ವಜನಿಕರಲ್ಲಿ ಬೇಸರ ತಂದಿದೆ.ಹಾಸನ ನಗರದ ಹೃದಯ ಬಾಗದಲ್ಲಿ, ಅದರಲ್ಲೂ ಬಸ್ ನಿಲ್ದಾಣಕ್ಕೆ ಕೈಗೆಟಕುವ ಅನತಿ ದೂರದಲ್ಲಿ, ಮುಖ್ಯ ಅಂಚೆ ಕಚೇರಿ ಪಕ್ಕದಲ್ಲೆ ಇರುವ `ಮೋತಿ? ಹೋಟೆಲ್ಎಂದರೇ ಬಹುತೇಜನರು ಪರಸ್ಪರ ಸ್ಪಂಧಿಸುತ್ತಿದ್ದ ಸ್ಥಳವಾಗಿತ್ತು.
1973 ಜೂನ್ 23 ರಂದು ಪ್ರಾರಂಭಿಸಿದ ಹೋಟೆಲ್ ಉದ್ಯಮವು ಇಂದಿಗೂ ಕೂಡ ಹಿಂದಿನ ರುಚಿಕರವಾದ ಬಗೆ ಬಗೆಯ ತಿಂಡಿಗಳನ್ನು ನೀಡುತ್ತಾ ತನ್ನ ಮಹತ್ವವನ್ನ ಉಳಿಸಿಕೊಂಡು ಬಂದಿತ್ತು... ಮದುವೆ ಜವಳಿ, ಮತಿ ?ತತರ ಮನೆ ಕಾರ್ಯಗಳಿಗೆ ಸಾಮಾನು ಸರಂಜಾಮುಗಳ ಖರೀದಿಗೆ ಬಂದವರು ಮೋತಿ ಹೋಟೆಲ್ ಒಳ ಹೊಕ್ಕದೆ ಬರುತ್ತಿರಲಿಲ್ಲ.
ಒಮ್ಮೊಮ್ಮೆ ಹೊಟೆಲ್ ಕಿಷ್ಕಿಂಧೆಯಾಗಿ ನಿಂತೆ ಕಾಫಿ, ಚಹಾ ಮತ್ತಿತರ ಲಘು ಆಹಾರ ಸೇವಿಸುತ್ತಿದ್ದವರು ಬಹಳಷ್ಟು ಮಂದಿ. ಉತ್ತಮ ಸೇವೆ ಮೂಲಕ ಜನರ ಆಕರ್ಷಣೆಗೊಳಗಾಗಿದ್ದ ಮೋತಿಯಲ್ಲಿನ ಕಾರ್ಮಿಕರೂ ಸಹ ಅಷ್ಟೇ ಸುದೀರ್ಘಕಾಲ ತಮ್ಮನ್ನು ಅಲ್ಲಿ ಸೇವೆಗೆ
ತೊಡಗಿಸಿಕೊಂಡಿದ್ದರು.
ಜಿಲ್ಲೆ ಅಲ್ಲದೆ ಹೊರ ಜಿಲ್ಲೆಗಳಿಂದಲೂ ಗ್ರಾಹಕರನ್ನು ತನ್ನತ್ತ ಸೆಳೆದಿದ್ದ ಮೋತಿ ಹೋಟೆಲ್ಸಾ ರ್ವಜನಿಕವಾಗಿ ಮನೆ ಮಾತಾಗಿತ್ತು ಎಂದರೆ ತಪ್ಪಲ್ಲ. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ ದೀರ್ಘಕಾಲದ ಬಾಡಿಗೆ ಕರಾರಿನ ಮೇಲೆ ನಡೆಯುತ್ತಿದ್ದ ಉದ್ಯಮ ದಿಢೀರ್ ಆಗಿ ಡಿಸೆಂಬರ್ 4ರ ಶುಕ್ರವಾರ ತನ್ನ ಕೊನೆಯ ವ್ಯವಹಾರ ಮುಗಿಸಿ ಬಾಗಿಲು ಬಂದ್ ಮಾಡಲಿದೆಯೆಂದು ವಿಷಯ
ತಿಳಿದವರು ತಮ್ಮ ಕೊನೆಯ ದಿನದ ರುಚಿ ಸವಿಯಲೆಂದು ಬಂದಿದ್ದರಿಂದ ಗ್ರಾಹಕರು ಹೋಟೆಲ್‍ನತ್ತ ಹೆಜ್ಜೆ ಇರಿಸಿದ್ದರಿಂದ ತುಸು ಜನಸಂದಣೀಯವೂ ಕಂಡುಂದಿತು.
ಹೋಟೆಲ್ ಮಾಲೀಕರು ಮಾಧ್ಯಮಗಳೊಂದಿಗೆ ತಮ್ಮ ಸೇವಾನುಭವ ಹಂಚಿಕೊಳ್ಳುತ್ತ, ಯಾವುದೇ ಆಗಿರಲಿ ಒಂದು ಉದ್ಯಮವನ್ನು ಯಶಸ್ವಿಯಾಗಿ ನಡೆಸುವುದು ತುಂಬ ಕಷ್ಟಕರವಾದ ಕೆಲಸವಾಗಿದೆ. ಅದರಲ್ಲೂ ಹೋಟೆಲ್ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿ ಕೊಂಡೊಯ್ಯುವುದು ಇನ್ನೂ ಕಷ್ಟಕರ ಎಂದರು. ಉದ್ಯಮದ ವೇಳೆ ದಿನ ಬೆಳಗಾದರೇ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತದೆ.
ನಮ್ಮ ಮೋತಿ ಹೋಟೆಲ್ 1973 ರಲ್ಲಿ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಗ್ರಾಹಕರು ಈ ಹೋಟೆಲ್ ಗೆ ಪ್ರೋತ್ಸಾಹ ಕೊಟ್ಟಿರುವುದಕ್ಕೆ ನಾವುಗಳು ಕೃತಜ್ಞರಾಗಿದ್ದೇವೆ. ಹೋಟೆಲ್ ಮುಚ್ಚುತ್ತಿರುವುದಕ್ಕೆ ನಮಗೆ ಬೇಸರವಾಗುತ್ತಿದೆ. ಇದುವರೆಗೂ ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ಅವಕಾಶ ಮಾಡಿಕೊಟ್ಟ ಎಂಟಿಎಸ್ ಆಡಳಿತ ಮಂಡಳಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು
Tags
ಹಾಸನ