ಅನನ್ಯ ಟ್ರಸ್ಟ್ ವತಿಯಿಂದ ಶಾಲ‌ ಮಕ್ಕಳಿಗೆ 1000 ಮಾಸ್ಕ್ ವಿತರಣೆ

ಹಾಸನ: ನಗರದ ಶ್ರೀ ಗಂಧದ ಕೋಠಿ ಆವರಣದಲ್ಲಿರುವ ಸರಕಾರಿ ವಿಭಜಿತ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನನ್ಯ ಟ್ರಸ್ಟ್ ವತಿಯಿಂದ ಒಂದು ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನು ಹಾಸನ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪ್ರಕಾಶ್ ರವರು ವಿತರಿಸಿದರು.
      ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರನ್ನು ಬಹಳ ಕಾಡಿದ ವರ್ಷ ಎಂದರೇ 2020ರ ವರ್ಷ. ಕೊರೋನಾ ಬಗ್ಗೆ ಎಚ್ಚರವಹಿಸಿದರೇ ಮಾತ್ರ ಅದರಿಂದ ದೂರ ಇರಬಹುದು. ನಿತ್ಯ ಜೀವನದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಆಗಾಗ್ಗೆ ಸೋಪಿನಿಂದ ಕೈಕಾಲು ಮುಖ ತೊಳೆಯಬೇಕು. ಮತ್ತು ಸ್ಯಾನಿಟೈಸರ್ ಬಳಸಿದರೇ ಕೊರೋನಾ ಸೋಂಕು ಕಡಿಮೆ ಮಾಡಲು ಸಾಧ್ಯ. ಸರಕಾರದ ನಿಯಮವನ್ನು ಪಾಲಿಸುವುದು ಅತಿ ಮುಖ್ಯವಾಗಿದೆ. ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಇದ್ದರೇ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಎಲ್ಲಾರು ಸಹಕರಿಸಬೇಕೆಂದು ಮನವಿ ಮಾಡಿದರು. ಕೊರೋನಾ ಈಗ ಕಡಿಮೆಯಾಗಿದೆ ಎಂದು ಉದಾಸೀನ ಬೇಡ. ಅದು ನಮ್ಮ ಮಧ್ಯೆ ಇದ್ದೆ ಇದೆ. ನಿಯಮ ಪಾಲಿಸದೆ ಹೋದರೇ ಮತ್ತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು. 
      ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್, ಸರಕಾರಿ ವಿಭಜಿತ ಪ್ರೌಢಶಾಲೆಯ ಪ್ರಾಂಶುಪಾಲ ಕೆ.ಪಿ. ಸುರೇಶ್, ಉಪ ಪ್ರಾಂಶುಪಾಲ ದೀಪಾ, ಅನನ್ಯ ಟ್ರಸ್ಟ್ ಅಧ್ಯಕ್ಷರಾದ ಕೆ.ಟಿ. ಜಯಶ್ರೀ, ನಿರ್ದೇಶಕರಾದ ಶಶಿಕಲಾ, ಪಂಕಜ ಇತರರು ಪಾಲ್ಗೊಂಡಿದ್ದರು.
;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;;;;;;;;;;;;;


ವ್ಯಾಪಾರಿಗಳು-ಸ್ವಯಂ ಉದ್ಯೋಗಿಗಳ ಪಿಂಚಣಿ ಯೋಜನೆ
ಜಾಗೃತಿ ಮೂಡಿಸುವ ಬೀದಿ ನಾಟಕಕ್ಕೆ ಡಿಸಿ ಚಾಲನೆ
ಹಾಸನ: ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯು ಜಾರಿಗೆ ಬಂದಿದ್ದು, ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಅಸಂಘಟಿತ ವಲಯ ಕಾರ್ಮಿಕರಾದ ಪಿಂಚಣಿ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಬೀದಿ ನಾಟಕಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ರವರು ಹಸಿರು ಭಾವುಟ ಪ್ರದರ್ಶಿಸುವ ಮೂಲಕ ಚಾಲನೆ ಕೊಟ್ಟರು.
      ನಂತರ ಉದ್ದೇಶಿಸಿ ಮಾತನಾಡಿದ ಅವರು, ವ್ಯಾಪಾರಿಗಳ ಮತ್ತು ಸ್ವಯಂ ಉದ್ಯೋಗಿಗಳ ಭದ್ರತೆಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ವ್ಯಾಪಾರಿಗಳು, ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ನಿಶ್ಚಿತ ರೂ 3 ಸಾವಿರಗಳ ಪಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಭದ್ರತೆ ನೀಡುವ ಯೋಜನೆಯಾಗಿದೆ ಎಂದರು. ಈ ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದು, 18 ರಿಂದ 40 ವರ್ಷ ವರ್ಷದೊಳಗೆ ಇರಬೇಕು. ಅವರ ಮಾಸಿಕ ಆಧಾಯ 15 ಸಾವಿರ ಇಲ್ಲವೇ ಅದಕಿಂತ ಕಿಡಿಮ ಇರಬೇಕು. ಆಧಾಯ ತೆರಿಗೆ, ಇ.ಎಸ್.ಐ, ಪಿ.ಎಫ್. ಹಾಗೂ ಎನ್.ಪಿ.ಎಸ್. ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ ಸಂಖ್ಯೆ ಹೊಂದರಬೇಕು. ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಇದರ ಯೋಜನೆ ಲಾಭ ಪಡೆಯುವಂತೆ ಕರೆ ನೀಡಿದರು.
      ಪ್ರಶಸ್ತಿ ವಿಜೇತರಾದ ಬಿ.ಟಿ. ಮಾನವ ತಂಡದವರು ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಬಗ್ಗೆ ಬೀದಿ ನಾಟಕ ಪ್ರದರ್ಶನ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. 
     ಇದೆ ವೇಳೆ ವಾರ್ತಾಧಿಕಾರಿ ವಿನೋದ್ ಚಂದ್ರ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;;;;;;;;;;;;;;

ಶ್ರೀ ಜವೇನಹಳ್ಳಿ ಮಠದಲ್ಲಿ 
ತ್ರಿಮೂರ್ತಿ ಗದ್ದಿಗೆಗೆ ರುದ್ರಾಭಿಷೇಕ
ಹಾಸನ: ನಗರದ ಶ್ರೀ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಜವೇನಹಳ್ಳಿ ಮಠದಲ್ಲಿ ಶಾಂತವೀರ ಶಿವಯೋಗಿಗಳ ಆರಾಧಾನಾ ಮಹೋತ್ಸವ ಹಾಗೂ ದಾಸೋಹವು ಸೋಮವಾರದಂದು ಜರುಗಿತು.
      ಶ್ರೀ ಜವೇನಹಳ್ಳಿ ಮಠದಲ್ಲಿರುವ ತ್ರಿಮೂರ್ತಿ ಗದ್ದಿಗೆಗೆ ರುದ್ರಾಭೀಷೇಕ ಮಾಡಲಾಯಿತು. ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿಯವರು ಸಾನಿಧ್ಯವಹಿಸಿದ್ದರು. ಚೆಲುವ ಮಠದ ಶ್ರೀ ಜಯದೇವ ಸ್ವಾಮೀಜಿ, ಸಂಕಲಾಪುರ ಮಠದ ಶ್ರೀ ಧರ್ಮರಾಜೇಂದ್ರ ಸ್ವಾಮಿಜಿ, ತೋಂಟದಾರ್ಯ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹಾಗೂ ಸಮಾಜದ ಮುಖಂಡರಾದ ಹೆಚ್.ಎನ್. ನಾಗೇಶ್, ಧರ್ಮ, ಶೋಭನ್ ಬಾಬು, ಅವಿನಾಶ್, ಇತರರು ಪಾಲ್ಗೊಂಡಿದ್ದರು.
;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;;;;;;;;;;

ಮುಂಜಾನೆ ಮಿತ್ರ ತಂಡದಿಂದ
ರೈತ ಮಹಿಳೆ ಸವಿತಾಗೆ ಸನ್ಮಾನ
ಹಾಸನ: ತಾಲೂಕಿನ ಸಾಲಗಾಮೆ ಹೋಬಳಿಯ ಆಲದಹಳ್ಳಿ ಕೊಪ್ಪಲಿನ ಪ್ರಗತಿಪರ ಯುವ ರೈತ ಮಹಿಳೆ, ಪ್ರಶಸ್ತಿ ಪುರಸ್ಕøತೆ ಸವಿತಾ ಸೋಮಣ್ಣನವರಿಗೆ ಹಾಸನ ಜಿಲ್ಲಾ ಕ್ರೀಡಾಂಗಣದ ಮುಂಜಾನೆ ಮಿತ್ರ ತಂಡದಿಂದ ಸನ್ಮಾನಿಸಿ ಅಭಿನಂದಿಸಿದರು.
      ಕಂದಲಿ ಕೃಷಿ ಕೇಂದ್ರ ಗುರುತಿಸಿದ್ದರಿಂದ ಸವಿತಾ ಸೋಮಣ್ಣನವರಿಗೆ ಈ ಪ್ರಶಸ್ತಿ ಲಭಿಸಿದ್ದು, ಈಕೆಯ ಸಾಧನೆಚಿiÀುನ್ನು ಗುರುತಿಸಿದ ಮುಂಜಾನೆ ಮಿತ್ರ ತಂಡ ಮತ್ತು ಹಾಸನದ ಲಯನ್ಸ್ ಕ್ಲಬ್ ಸೇರಿ ಸನ್ಮಾನವನ್ನು À ರೈತ ಮಹಿಳೆಚಿiÀು ಜಮಿನಿನಲ್ಲೆ ಕಾರ್ಯಕ್ರಮವನ್ನು ಆಯೋಜಿಸಿ ಸನ್ಮಾನಿಸುವ ಮೂಲಕ U್ಷರವಿಸಿದರು.   
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಜಾನೆ ಮಿತ್ರ ತಂಡದ ಅಧ್ಯಕ್ಷರಾದ ಸಿ.ಬಿ. ವೆಂಕಟೇಗೌಡ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೃಷಿ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಹೇಮ ಅನಚಿತರಾಜು, ಮಡಿಕೇರಿ ಆಕಾಶವಾಣಿಯ ವಿಜಯ ಅಂಗಡಿ, ರಾಮೇಗೌಡ ಸ್ಭೆರಿದಂತೆ ಇತರರು ಉಪಸ್ಥಿತರಿದ್ದರು.
;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;;;; ;;;;;;;;;;;;;;;;;;;;;;;;;;;;;;;;;;;;;

ಸೋಮವಾರದಂದು 16 ಕೊರೋನಾ ಪಾಸಿಟಿವ್ ಪತ್ತೆ
ಹಾಸನ: ಎಲ್ಲೆಡೆ ಆವರಿಸಿರುವ ಕೊರೋನಾ ಪಾಸಿಟಿವ್ ಹಾಸನ ಜಿಲ್ಲೆಯಲ್ಲಿ ಸೋಮವಾರದಂದು ತೀವ್ರ ಇಳಿಮುಖ ಕಂಡು ಬಂದಿದ್ದು, ಕೇವಲ 16 ಕೋವಿಡ್ ಪ್ರಕರಣ ದಾಖಲಾಗಿದ್ದು, ಯಾರು ಸಾವನಪ್ಪಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
       ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಬಿಡುಗಡೆಯಾದ ಪ್ರಕರಣದಲ್ಲಿ 16 ಜನರು ಪಾಸಿಟಿವ್ ಬಂದು ಚಿಕಿತ್ಸೆ ಪಡೆಯುತ್ತಿದ್ದರೇ, ಈವರೆಗೆ 27,618 ಮಂದಿ ಗುಣಮುಖರಾಗಿದ್ದಾರೆ. 157 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 9 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಸೋಂಕಿತರ ಸಂಖ್ಯೆ 28,239 ಕ್ಕೆ ಏರಿಕೆಯಾದರೇ ಮೃತರ ಸಂಖ್ಯೆ 464ಕ್ಕೆ ತಲುಪಿದೆ ಎಂದರು. 
      ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-0, ಅರಕಲಗೂಡು-3, ಅರಸೀಕೆರೆ-1, ಬೇಲೂರು-1, ಚನ್ನರಾಯಪಟ್ಟಣ-2, ಹಾಸನ-8,  ಹೊಳೆನರಸೀಪುರ 1, ಸಕಲೇಶಪುರ 0 ಸೇರಿ ಒಟ್ಟು 16 ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ಕೊರೋನಾ ಪ್ರಕರಣದ ಬಗ್ಗೆ ಅಂಕಿ-ಅಂಶ ನೀಡಿದರು.
     ಕೊರೋನಾ ಸೋಂಕು ಕಡಿಮೆ ಮಾಡಲು ಸರಕಾರದ ನಿಯಮವನ್ನು ಪಾಲಿಸುವುದು ಮುಖ್ಯವಾಗಿದೆ. ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಇದ್ದರೇ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಎಲ್ಲಾರು ಸಹಕರಿಸಬೇಕೆಂದು ಮನವಿ ಮಾಡಿದರು.

ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

Post a Comment

Previous Post Next Post