ಆಲೂರು: ಗ್ರಾಮೀಣ ಮಟ್ಟದಲ್ಲಿ ಇರುವಂತಹ ಯುವ ಪ್ರತಿಭೆಗಳಿಗೆ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಅವರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸಗಳು ಪ್ರತಿಗ್ರಾಮದಲ್ಲಿ ಆಗಬೇಕು ಎಂದು ಆಲೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ವೆಂಕಟೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಕಣತೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮೊದಲ ವರ್ಷದ ಈಗಲ್ಸ್ ಕಪ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಣತೂರಿನ ಯುವಕರು ಈ ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಪಂದ್ಯಾವಳಿಯನ್ನು ಈ ಸುಂದರ ವಾತಾವರಣದಲ್ಲಿ ಆಯೋಜಿಸಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಟಗಾರರಿಗೆ ಕರೆಸಿ ಅವರ ಪ್ರತಿಭೆಗಳನ್ನು ಕೂಡ ಗುರುತಿಸುವ ಕೆಲಸ ಮಾಡುತ್ತಿರುವುದು ಅಭಿನಂದನೆಗಳು ಎಂದರು.
ನಂತರ ತಾಲ್ಲೂಕು ಪಂಚಾಯಿತಿ ಸದಸ್ಯ ನಟರಾಜ್ ನಾಕಲಗೂಡು ಮಾತನಾಡಿ ಕಳೆದ ಒಂದು ವಾರದಿಂದಲೂ ಕೂಡ ಕಣತೂರು ಈಗಲ್ಸ್ ಯುವಕರ ತಂಡ ಬಹಳ ಶ್ರಮಪಟ್ಟು ಮೊದಲ ವರ್ಷದ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡುವ ಮೂಲಕ ಇತರೆ ಗ್ರಾಮಗಳಿಗೆ ಕೂಡ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ತನ್ನದೇ ಆದಂತಹ ಮಹತ್ವವನ್ನು ಪಡೆದುಕೊಂಡಿದೆ ಕೇವಲ ಅವರು ಓದಿನೊಂದಿಗೆ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂಬಂತಹ ಸ್ಥಿತಿ ಈಗ ಇಲ್ಲ ಕ್ರೀಡೆಯಲ್ಲಿಯೂ ಕೂಡ ಉತ್ತಮ ಸಾಧನೆ ಮಾಡಿ ಇದು ರಾಜ್ಯ ಮತ್ತು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಕೀರ್ತಿ ಮತ್ತು ಗೌರವವನ್ನು ಸಂಪಾದಿಸುವ ಅಂತಹ ಕೆಲಸಗಳಾಗುತ್ತವೆ ಎಂದು ಹೇಳಿದರು.
ಪ್ರತಿ ಗ್ರಾಮದಲ್ಲಿಯೂ ಕೂಡ ಈ ರೀತಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಮೂಲಕ ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ಸೃಷ್ಟಿಸಿ ಅವರನ್ನು ಕೂಡ ಹೊರಜಗತ್ತಿಗೆ ಗುರುತಿಸುವ ಕೆಲಸ ಗಳಾಗುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ಊರಿನಲ್ಲಿ ಇನ್ನು ಹೆಚ್ಚೆಚ್ಚು ಕ್ರೀಡಾಕೂಟ ಮಾಡಲು ಸಹಕರಿಸುವುದಾಗಿ ತಿಳಿಸಿದರು
ನಂತರ ಮಾತನಾಡಿದ ಪತ್ರಕರ್ತ ಆದಿಲ್ ಅವರು ಈ ಕಬಡ್ಡಿ ಕ್ರೀಡೆ ಕೇವಲ ಗ್ರಾಮೀಣ ಮಟ್ಟದಲ್ಲಿ ಉಳಿದುಕೊಂಡಿಲ್ಲ ಇದೀಗ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಠದಲ್ಲಿ ಕೂಡ ವಿಶೇಷ ಸ್ಥಾನ ಪಡೆದುಕೊಂಡಿದೆ ಮುಂದಿನ ದಿನಗಳಲ್ಲಿ ಇದು ಒಲಂಪಿಕ್ ನಲ್ಲಿ ಕೂಡ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪುಷ್ಪ ನಾಗೇಶ್,ಲಿಂಗರಾಜ್, ಕೃಷ್ಣೇಗೌಡ ಮಾಜಿ ಸದಸ್ಯ ಜಗದೀಶ್ ಗ್ರಾಮದ ಮುಖಂಡರಾದ ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು
ಈ ಮೊದಲು ವರ್ಷದ ಈಗಲ್ಸ್ ಕಪ್ ಕಬ್ಬಡಿ ಪಂದ್ಯಾವಳಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ್ದ ತಂಡಗಳು ಹೊನಲು ಬೆಳಕಿನ ಪಂದ್ಯದಲ್ಲಿ ಸುಮಾರು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು ಸಾವಿರಾರು ಮಂದಿ ಪ್ರೇಕ್ಷಕರು ಪಾಲ್ಗೊಂಡು ರಾತ್ರಿಯ ವೇಳೆಯೂ ಕೂಡ ಕುಳಿತುಕೊಂಡು ಕಬ್ಬಡಿಯ ಪಂದ್ಯಾವಳಿಯ ರಸದೌತಣವನ್ನು ಸವಿದರು.
ಇದೇ ಸಂದರ್ಭದಲ್ಲಿ ಕಣತೂರು ಈಗಲ್ಸ್ ತಂಡದ ನಾಯಕನ ಆದಂತಹ ಪ್ರತೀಕ್ ಇತ್ತ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದರು ಅಲ್ಲದೆ ಪ್ರಸ್ತುತ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಿಂದ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು
ಸಂಜೆಯಿಂದ ನಡೆದಂತಹ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಸುಬ್ರಹ್ಮಣ್ಯ ತಂಡ, ದ್ವಿತೀಯ ಸ್ಥಾನವನ್ನು ಕಣತೂರು ಈಗಲ್ಸ್ ತಂಡ, ತೃತೀಯ ಸ್ಥಾನವನ್ನು ಹಾಸನಾಂಬ ತಂಡ ಹಾಗೂ ಸಮಾಧಾನಕರ ಬಹುಮಾನವನ್ನು ವಿನಾಯಕ ಸ್ಪೋರ್ಟ್ಸ್ ಕ್ಲಬ್ ಪಡೆದುಕೊಂಡರು