ಹಾಸನ ಜ.4(ಹಾಸನ ಸೀಮೆ ನ್ಯೂಸ್);- ರಾಜ್ಯ ಸರ್ಕಾರದ ನಿರ್ದೇಶನದಂತೆ 1095 ಗ್ರಾಮಗಳಲ್ಲಿರುವ 4.16ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿರುವ ಹಿಂಗಾರು ಬೆಳೆ ಸಮೀಕ್ಷಾ ಕಾರ್ಯವನ್ನು ಜ.20 ರೊಳಗೆ ಪೂರ್ಣಗೊಳಿಸಬೇಕಾಗಿದ್ದು ರೈತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಬೆಳೆ ಸಮೀಕ್ಷೆ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಮುಂಗಾರು ಬೆಳೆಯ ಸರ್ವೆಗೆ ಬಳಸಿಕೊಂಡ ಖಾಸಗಿ ಪ್ರತಿನಿಧಿಗಳ ನೆರವು ಪಡೆದು ಹಿಂಗಾರು ಬೆಳೆ ಸಮೀಕ್ಷೆ ಕೈಗೊಳಲಾಗುವುದು ಕೃಷಿ,ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಪ್ರತಿ ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಗ್ರಾಮಲೆಕ್ಕಾಧಿಕಾರಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹೆಚ್ಚಾಗಿ ರಾಗಿ, ಮೆಕ್ಕೆಜೋಳ,ಹುರುಳಿ ಇತ್ಯಾದಿ ಬೆಳೆಗಳನ್ನು ಹಿಂಗಾರಿನಲ್ಲಿ ಬೆಳೆಯಲಾಗಿದೆ .
ಬೆಳೆ ಕಟಾವು ಆಗುವ ಮುನ್ನ ಸರ್ವೆ ಮಾಡಬೇಕಾಗಿರುವುದರಿಂದ ರೈತರು ಸಹ ಆ್ಯಪ್ ಮೂಲಕ ನೇರವಾಗಿ ಸರ್ವೆ ಮಾಡಿ ನಮೂದಿಸಬಹುದಾಗಿದೆ ರೈತರಿಗೆ ಸರ್ಕಾರದಿಂದ ಬರುವ ಬೆಳೆ ಪರಿಹಾರಕ್ಕೆ ಮೂಲಭೂತ ಮಾಹಿತಿಯನ್ನಾಗಿ ಈ ಸರ್ವೆಯನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸರ್ಕಾರದ ನಿರ್ದೇಶನದಂತೆ ಬೆಳೆ ಸರ್ವೆಯಲ್ಲಿ ಆಧಾರ್ ನಮೂದಿಸಬೇಕು ಸಿಬ್ಬಂದಿಗಳು ಹಾಜರಾದ ಸಮಯಕ್ಕೆ ರೈತರು ತಮ್ಮ ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಿ ಸಹಕರಿಸಬೇಕು ಎಂದರು
ರಬಿ ಬೆಳೆ ಸಮೀಕ್ಷೆಯು ಜ. 5ರಿಂದ ಆರಂಭವಾಗುವುದು ಬೇಕಾದ ಅಗತ್ಯ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ರೈತರು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರವಿ, ತೋಟಗಾರಿಕೆ ಉಪನಿರ್ದೇಶಕರಾದ ಯೋಗೇಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ಬೆಳೆ
ಬೆಳೆ ಸಮೀಕ್ಷೆ ಆ್ಯಪ್ ರೈತರು ಬಳಸುವ ವಿಧಾನ :-ಗೂಗಲ್ ಪ್ಲೇ ಸ್ಟೋರ್ ಹಿಂಗಾರು ರೈತರ ಬೆಳೆ ಸಮೀಕ್ಷೆ 2020-21 ಆಪ್ ಆಯ್ಕೆ ಮಾಡಿ ಡೌನ್ ಲೋಡ್ ಮತ್ತು ಇನ್ ಸ್ಟಾಲ್ ವರ್ಷ ಮತ್ತು ಹಂಗಾಮನ್ನು ಆಯ್ಕೆ ಮಾಡಿ ಆಧಾರ್, ಮೊಬೈಲ್ ಸಂಖ್ಯೆ ಮತ್ತು ಸಂಪೂರ್ಣ ವಿಳಾಸದೊಂದಿಗೆ ನೋಂದಾಯಿಸಿ ಗ್ರಾಮಗಳ ಮಾಸ್ಟರ್ ವಿವರ ಡೌನ್ ಲೋಡ್ ಮಾಡುವುದು. ಪಹಣಿ ಮತ್ತು ಮಾಲೀಕರ ವಿವರ ಡೌನ್ ಲೋಡ್ ಮಾಡುವುದು. ಜಮೀನಿನ ಬೆಳೆ ವಿವರ ದಾಖಲಿಸುವುದು. ಜಮೀನಿನ ಬೆಳೆ ವಿವರ ಆಪ್ಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮಕ್ಕೆ ನಿಯೋಜನೆಗೊಂಡಿರುವ ಖಾಸಗಿ ನಿವಾಸಿ (Pಖ) ಗಳನ್ನು ಕಂದಾಯ/ಕೃಷಿ/ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
Tags
ಹಾಸನ