ಬೇಲೂರಿನಲ್ಲಿ 36ನೇ ರಾಷ್ಟ್ರೀಯ ನೃತ್ಯೋತ್ಸವ

ಬೇಲೂರು: ಇಲ್ಲಿಯ ಕೋಟೆ ಬಯಲು ರಂಗಮಂದಿರದಲ್ಲಿ ಚನ್ನರಾಯಪಟ್ಟಣದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 36ನೇ ರಾಷ್ಟ್ರೀಯ ನೃತ್ಯೋತ್ಸವ ನೋಡುಗರ ಕಣ್ಮನ ಸೆಳೆಯಿತು.

ಕೋವಿಡ್ ಕಾರಣದಿಂದ ಹೊರ ರಾಜ್ಯ ಮತ್ತು ಹೊರ ದೇಶದ ನೃತ್ಯಗಾರರು ಬಾರದೆ ೆನ್ನೈನ ಒಂದು ತಂಡ ಹಾಗೂ ಶಿವಮೊಗ್ಗ, ಬೆಂಗಳೂರು, ರಾಯಚೂರು, ಹೊಸಪೇಟೆ,ಕೊಡಗು, ಮಂಡ್ಯ, ಮೈಸೂರು, ಹುಬ್ಬಳ್ಳಿ, ಹಾಸನದ 48 ತಂಡಗಳ 95 ನೃತ್ಯಗಾರರು ತಮ್ಮ ಕಲೆಯನ್ನು ಪ್ರದರ್ಶಿಸಿದರು.

ಮಂಡ್ಯದ ನೃತ್ಯಕೃಪಾ ಕಲಾಶಾಲೆಯ ವಿದ್ಯಾರ್ಥಿಗಳು ಕೂಚಿಪುಡಿ ಹಾಗೂ ಕಥಕ್ ನೃತ್ಯವನ್ನು ಜಾನಪದ ಶೈಲಿಯ ಶಾಸ್ತ್ರೀಯ ನೃತ್ಯಕ್ಕೆ ಅಳವಡಿಸಿದ್ದು ವಿಶೇಷವೆನಿಸಿತು.

ಹೊಸಪೇಟೆಯ ತಂಡದವರು ಕೂಚಿಪುಡಿ ನೃತ್ಯವನ್ನು ಭತರನಾಟ್ಯ ಶೈಲಿಯಲ್ಲಿ ಪ್ರದರ್ಶಿಸಿದ್ದರು.

ಚನ್ನರಾಯಪಟ್ಟಣದ 6 ವರ್ಷದ ಅಂಗವಿಕಲ ಬಾಲಕಿ ಭರತನಾಟ್ಯ ನೋಡುಗರನ್ನು ಆಕರ್ಷಿಸಿತ್ತು.

ರೇವ ಭರತನಾಟ್ಯ ವಿಶ್ವವಿದ್ಯಾಲಯದ ಡಾ.ವಿದ್ಯಾ ಸೇರಿದಂತೆ ಒಟ್ಟು ಜನ ಭರತನಾಟ್ಯ ಗುರುಗಳು ಒಂದೇ ವೇದಿಕೆಯಲ್ಲಿ ನೃತ್ಯ ಮಾಡಿದರು.

ಬೆಂಗಳೂರಿನ ಕಲಾಲಯ ಭರತನಾಟ್ಯ ತಂಡದ 10 ವರ್ಷದೊಳಗಿನ ಐವರು ಬಾಲಕಿಯಯ ಭಾರತ್ಯನಾಟ್ಯ ಪ್ರದರ್ಶನ ಮತ್ತೆ ಮತ್ತೆ ನೋಡಬೇಕಿಸುವಂತಿತ್ತು.

6 ವರ್ಷದ ಬಾಲಕಿಯರಿಂದ 50 ವರ್ಷದ ಮಹಿಳೆಯರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು.

ಚಿಕ್ಕ ವೇದಿಕೆಯಲ್ಲೇ ಅದ್ಭುತವಾದ ನೃತ್ಯವನ್ನು ಭರತನಾಟ್ಯ ಕಲಾವಿದರು ಪ್ರದರ್ಶಿಸಿದರು.

'ಕೋವಿಡ್ 19 ಕಾರಣದಿಂದ ಹೊರ ರಾಜ್ಯ, ದೇಶದ ಹೆಚ್ಚಿನ ತಂಡಗಳಿಗೆ ಅವಕಾಶ ನೀಡಿರಲಿಲ್ಲ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬೇಲೂರಿನ ಚನ್ನಕೇಶವ ದೇವಸ್ಥಾನದ ಒಳ ಆವರಣದಲ್ಲಿ ಹೊರ ರಾಜ್ಯ, ದೇಶದ 400 ರಿಂದ 500 ಭರತನಾಟ್ಯ ಕಲಾವಿದರೊಂದಿಗೆ 2 ದಿನಗಳ ಕಾಲ ರಾಷ್ಟ್ರೀಯ ನೃತ್ಯೋತ್ಸವವನ್ನು ಆಯೋಜಿಸಲಾಗುವುದು' ಎಂದು ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಕಾರ್ಯದರ್ಶಿ ಸ್ವಾತಿ ಪಿ. ಭಾರದ್ವಾಜ್ ತಿಳಿಸಿದರು.

Post a Comment

Previous Post Next Post