ಚಾಮರಾಜನಗರ :ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷರಾದ ಬಿ ಪುಟ್ಟಸ್ವಾಮಿಯವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ ಈ ಹಿಂದೆ ಮುಖ್ಯ ಮಂತ್ರಿ ಪದಕವು ಇವರಿಗೆ ದೊರಕಿದೆ ಇಲಾಖೆಯಲ್ಲಿನ ದಕ್ಷ ಮತ್ತು ಪ್ರಾಮಾಣಿಕ ಸೇವೆ ಹಾಗೂ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆಯ ಸಂಧರ್ಭದಲ್ಲಿ ಅನೇಕ ಅಪರಾಧ ಪ್ರಕರಣ ಭೇದಿಸುವಲ್ಲಿ ಯಶಸ್ಸುಗಳಿಸಿ ಇಲಾಖೆಯಲ್ಲಿ ಹೆಸರುವಾಸಿಯಾಗಿದ್ದರು ಇತ್ತಿಚಿಗೆ ಗುಂಡ್ಲುಪೇಟೆ ಯಲ್ಲಿ ನಡೆದ ಕೊಲೆ ಪ್ರಕರಣದ ತನಿಖಾ ತಂಢದಲ್ಲಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು ಪ್ರಸ್ತುತ ಚಾಮರಾಜನಗರ ಜಿಲ್ಲಾ ಮಹಿಳಾ ಪೋಲಿಸ್ ಠಾಣೆಯಲ್ಲಿ ವೃತ್ತ ನಿರೀಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇಲ್ಲಿ ಅನೇಕ ಮಹಿಳೆಯರ ಸಮಸ್ಯೆಗಳನ್ನು ಸೌಹಾರ್ದ ಯುತವಾಗಿ ಬಗೆಹರಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಇವರ ಸಮಾಜಸೇವೆ ಮೆಚ್ಚಿ ರವಿರಾಮ್ ಹೊಂಗನೂರು ಇವರ ಸ್ನೇಹ ಬಳಗ ಬಿ ಪುಟ್ಟಸ್ವಾಮಿ ಸೇವಾ ಟ್ರಸ್ಟ್ ಸಂಸ್ಥೆಯೊಂದಿಗೆ ಅನೇಕ ಜನಪರ ಕಾರ್ಯಕ್ರಮ ನಡೆಸುತ್ತಿದ್ದಾರೆಇವರಿಗೆ ರಾಷ್ಟ್ರಪತಿ ಪದಕ ದೊರೆತ್ತದ್ದರಿಂದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.