ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್‍ನ 28ನೇ ವಾರ್ಷಿಕೋತ್ಸವ ಸಮಾರಂಭ ಬೆಂಗಳೂರಿನ ರವೀಂದ್ರಕಲಾ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಏರ್ಪಡಿಸಿದ್ದ ವಿವಿz sÀಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಹಾಸನದ ಸಾಹಿತಿ ಶ್ರೀ ಗೊರೂರು ಅನಂತರಾಜು ಅವರ ಸಾಹಿತ್ಯಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ರಾಷ್ಟ್ರೀಯ ವಿಭೂಷಣ ರಾಷ್ಟ್ರ ಪ್ರಶಸ್ತಿ ಪುರಸ್ಕಾರ ನೀಡಿ ಟ್ರಸ್ಟ್‍ನ ಅಧ್ಯಕ್ಷರು ಶ್ರೀ ರಮೇಶ್ ಸುರ್ವೆ ಅವರು ಸನ್ಮಾನಿಸಿ ಗೌರವಿಸಿದರು. ಹಾವೇರಿಯಲ್ಲಿ ನಡೆಯುವ 86ನೇ ಅಖಿಳ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಕವಿ ಡಾ. ಡೊಡ್ಡರಂಗೇಗೌಡರು, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರು ಶ್ರೀ ಟಿ.ತಿಮ್ಮೇಗೌಡರು ಐಎಎಸ್, ರಂಭಾಪುರಿ ಶಾಖಾ ಹಿರೇಮಠ ಶ್ರೀ ಕಲ್ಲೇಶ್ವರಸ್ವಾಮಿಗಳು, ಚಿತ್ರನಟ ರಾದ ಗಣೇಶರಾವ್ ಕೇಸರ್ ಕರ್, ಡಾ. ಚಿಕ್ಕಹೆಜ್ಜಾಜಿ ಮಹಾದೇವ, ಕಸಾಪ ರಾಜ್ಯಾಧ್ಯಕ್ಷ ಆಭ್ಯರ್ಥಿ ಡಾ.ಶೇಖರಗೌಡ ಮಾಲಿ ಪಾಟೀಲ್, ಟ್ರಸ್ಟ್‍ನಗೌ.ಅಧ್ಯಕ್ಷರುಡಾ. ಕೆ ಮಹೇಂದ್ರಸಿಂಗ್ ರಾಜ ಪುರೋಹಿತ್, ನಿಕಟಪೂವ ಗೌ. ಅಧ್ಯಕ್ಷರುಉತ್ತಮ್ ಪಾಟೀಲ್, ಚಿತ್ರನಟಿ ಶ್ರೀಮತಿ ಗಿರಿಜಾ ಲೋಕೇಶ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು ಡಾ. ಸತೀಶ್ ಕುಮಾರ್‍ಎಸ್. ಹೊಸಮನಿ, ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡ ಗಳ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರು ಶ್ರೀಮತಿ ಕವಿತಾ ಎಂ. ವಾರಂಗಲ್, ಆರ್ಥಿಕ ತಜ್ಞರು ಬೆಂಗಳೂರಿನ ಡಾ. ಈ.ಅಂಬರೀಷ್ ಮೊದಲಾದವರು ಇದ್ದರು.