ಸಾಂಪ್ರದಾಯಿಕವಾಗಿ ನಮ್ಮಲ್ಲಿ ತೆಂಗಿನ ಕಾಯನ್ನು ಉದ್ದಕ್ಕೆ, ಕಾಯಿಯ ಕಣ್ಣು ಮೇಲೆಬರುವಂತೆ ನೆಟ್ಟು ತೆಂಗಿನ ಸಸಿ ತಯಾರಿಸಲಾಗುತ್ತದೆ. ಇದು ನಿಸರ್ಗಕ್ಕೆ ವಿರುದ್ಧವಾದ ವಿಧಾನ.ಆದ್ದರಿಂದಲೇ ಈ ವಿಧಾನದಲ್ಲಿ ಮೊಳೆಕೆ ಪ್ರಮಾಣ ತೀರ ಕಮ್ಮಿ. ಇದು ಸರಿಯಾದ ಕ್ರಮವಲ್ಲ.
ಕಾಯನ್ನು ಅಡ್ಡ ಮಲಗಿಸಿ ಸಸಿ ತಯಾರಿಸಿ
ಕೆಳಗಿನಂತೆ ತೆಂಗಿನ ಬೀಜದ ಕಾಯಿಗಳನ್ನು ಅಡ್ಡ ಮಲಗಿಸಿ ಮೊಳಕೆ ಬರಿಸಿ ಸಸಿ ತಯಾರಿಸುವುದು ಸರಿಯಾದ ವಿಧಾನ.ಇದೇ ಸಹಜ ವಿಧಾನ. ಅಂದರೆ ಮರ ಹೇಗೆ ಕಾಯನ್ನು ಅಡ್ಡ ಬೀಳಿಸಿ ಯಾರ ಹಂಗೂ ಇಲ್ಲದೆ ತನ್ನ ಬೀಜವನ್ನು ಮೊಳಕೆ ಬರಿಸುತ್ತದೆಯೋ, ಅದೇ ವಿಧಾನ.ಸಂತತಿಯನ್ನು ಮುಂದುವರೆಸಲು ಮರ ತಾನೇ ಕಂಡುಕೊಂಡ ನೈಸರ್ಗಿಕ ವಿಧಾನ.
ಹೀಗೆ ಅಡ್ಡ ಮಲಗಿಸಿದಾಗ ಕಾಯಿನ ಒಳಗಿರುವ ನೀರು ಭ್ರೂಣಕ್ಕೆ ತಗುಲುತ್ತಿದ್ದು ಅದು 100% ಮೊಳಕೆ ಬರಲು ಸಹಕಾರಿ ಆಗುತ್ತೆ. ಕಾಯಿನ ನೀರು ಭ್ರೂಣಕ್ಕೆ ತಾಯಿಯ ಎದೆಹಾಲಿನ ಸಮಾನ.
ಹೀಗೆ ಅಡ್ಡ ಮಲಗಿಸಿದ ಕಾಯಿನ ಮೇಲೆ ಎರಡು ಅಂಗುಲ ಗಾತ್ರದ ಮಣ್ಣು ಹಾಕಿ. ಮಣ್ಣಿನ ಮೇಲೆ ತೆಂಗಿನ ಗರಿ ಹರಡಿ. ಅದಕ್ಕೆ ಯಾವುದೇ ಬಗೆಯ ವಿಷ ರಾಸಾಯನಿಕ ಬೇಡ.
ಸ್ಪ್ರಿಂಕ್ಲರ್/ಡಿಪ್ಪರ್ ಹಾಕಿ ಆಗಾಗ ನೀರು ಕೊಡಿ. ಅಥವ ನೀರು ಹಾಯಿಸಿ. ಒಂದುವೇಳೆ ನೀರು ಕೊಡದಿದ್ದರೂ ಮುಂಗಾರಿಗೆ ಎಲ್ಲ ಕಾಯಿ ಮೊಳೆಯುತ್ತವೆ.
ಬೀಜದ ಆಯ್ಕೆ
1. ಬೀಜ ಸಂಘ್ರಹಿಸಲು ಯಾವುದೇ ತಿಂಗಳು ಆಗಬಹುದಾದರೂ Nov_feb ಉತ್ತಮ.
ಜೂನ್ ನಿಂದ ಹೊಸಕಾಯಿ ಸಿಕ್ಕಲು ಪ್ರಾರಂಭ ಅಗುತ್ತೆ.ಆಗ ಗೊನೆಯಲ್ಲಿ ಹೆಚ್ಚು ಕಾಯಿಗಳಿದ್ದು ಗೊನೆ ಭಾರಕ್ಕೆ ಜಗ್ಗಿ ಉತ್ತಮವಾಗಿ ಬಲಿತ ಕಾಯಿ ಸಿಕ್ಕಲ್ಲ ಅನ್ನುವ ಕಾರಣಕ್ಕೆ ಮೇಲಿನ ತಿಂಗಳು ಸರಿ ಇರುತ್ತೆ.
2. ಮರದ ವಯಸ್ಸು 25_ 50 ವರ್ಷಗಳ ಒಳಗಿರಲಿ
3. ಗೊನೆಗಳು ಜೋತು ಬಿದ್ದಿರದೆ ಎಡೆಮಟ್ಟೆ ಮೇಲೆ ಕುಳಿತಿರಲಿ
4. ತಾಯಿ ಮರ ಕಡಿಮೆ ಆರೈಕೆಯಲ್ಲಿ ಪ್ರತಿ ವರ್ಷ ಉತ್ತಮ ಇಳುವರಿ ನೀಡುತ್ತಿರಲಿ.
5. ಗಿಡ್ಡ ಮರದ ಸುತ್ತ ಇರುವ ಎತ್ತರದ ಮರದಿಂದ ಬೀಜ ಸಂಘ್ರಹಿಸಿದರೆ T*D ಅಥವ D*T ಸಹಜವಾದ ಹೈಬ್ರೀಡ್ ತಳಿ ದೊರೆಯುವ ಸಾಧ್ಯತೆ ಇರುತ್ತೆ.
6. ಕಾಯಿ ಯಾವುದೇ ಬಣ್ಣ ಇರಬಹುದು. ಹಸಿರು ಅಥವ ಕಂದು.
7. ಬೀಜದ ಕಾಯನ್ನು ಮರದಿಂದ ಸಂಘ್ರಹಿಸಿದ ನಂತರ ಒಂದುವಾರ ನೆರಳಲ್ಲಿ ಇಟ್ಟು , ಅನಂತರ ಬಿತ್ತನೆ ಮಾಡಿ.
Tags
ಕೃಷಿ