ಹಾಸನ: ಕಳೆದ ನಾಲ್ಕು ದಶಕಗಳಿಂದ ರಾಜ್ಯಾಧ್ಯಂತ ವಿವಿಧ ಜನ ಕಲ್ಯಾಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಇದುವರೆಗೂ ಅನೇಕ ಪರಿವರ್ತನ ಕೆಲಸವನ್ನು ಮಾಡಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ. ಗಂಗಾಧರ ರೈ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಸನ್ನಕುಮಾರ್ ಅವರಿಗೆ ಆಯುರ್ವೇದಿಕ್ ಔಷಧಿಯನ್ನು ಹಸ್ತಂತರಿಸಿ ನಂತರ ಉದ್ದೇಶಿಸಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಕಾರ್ಮಿಕರು, ಬಡವರ ಅನುಕೂಲಕ್ಕಾಗಿ ಇದುವರೆಗೂ ೨೦,೨೦೦ ಸ್ವ-ಸಹಾಯ ಸಂಘವನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದ್ದು, ೧ ಲಕ್ಷದ ೬೦ ಸಾವಿರ ಸದಸ್ಯರಿದ್ದು, ೧೫ ಕೋಟಿ ಉಳಿತಾಯದ ಮೊತ್ತವಿದೆ. ೨೮೦೦ ಕೋಟಿ ರೂಗಳನ್ನು ಯೂನಿಯನ್ ಬ್ಯಾಂಕಿನ ಮೂಲಕ ಆರ್ಥಿಕ ನೆರವು ಪಡೆಯಲಾಗಿದೆ ಎಂದರು. ೫ ಸಾವಿರ ಕುಟುಂಬ ಸಂಪೂರ್ಣ ಸುರಕ್ಷ, ೧ ಲಕ್ಷದ ೪೦ ಸಾವಿರ ಸದಸ್ಯರು ಆರೋಗ್ಯ ರಕ್ಷಾ ವಿಮಾ ಯೋಜನೆಯಲ್ಲಿದ್ದಾರೆ. ೨೫೦ ಜನ ವಿದ್ಯಾರ್ಥಿಗಳು ಸುಜ್ಞಾನ ನಿಧಿ ಶಿಷ್ಯ ವೇತನ ಪಡೆದಿದ್ದಾರೆ. ೩೮೦ ಜನ ವಾತ್ಸಲ್ಯ ಕಾರ್ಯಕ್ರಮದಡಿ ಮಾಶಾಷನ ವಿತರಣೆ ಮಾಡಲಾಗಿದೆ. ಮಾಸಿಕವಾಗಿ ೩ ಲಕ್ಷದ ೧೦ ಸಾವಿರ ನಿರ್ಗತಿಕರಿಗೆ ಸೌಲಭ್ಯ ಕೊಡಲಾಗಿದೆ. ಮಕ್ಕಳಿಗೆ ಜ್ಞಾನತಾಣ ಕಾರ್ಯಕ್ರಮದಡಿ ೨೫೦ ಟ್ಯಾಬ್, ೧೬೦ ಲ್ಯಾಪ್ ಟ್ಯಾಪ್ ಕೊಡಲಾಗಿದೆ. ಕೃಷಿ ಕಾರ್ಯಕ್ರಮದಡಿ ಅನುಧಾನ ನೀಡುವ ಮೂಲಕ ಯಂತ್ರೋಪಕರಣ, ಸಸಿ ವಿತರಣೆ ಮಾಡಲಾಗಿದೆ ಎಂದ ಅವರು, ಜನಮಂಗಲ ಕಾರ್ಯಕ್ರಮದಡಿ ವಿಕಲಚೇತನರಿಗೆ ಸಲಕರಣೆ ಒದಗಿಸಲಾಗಿದೆ. ಇದುವರೆಗೂ ೫೭ ಶುದ್ಧಗಂಗಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ಕೃಷಿ ಯಂತ್ರಧಾರೆ ಕಾರ್ಯಕ್ರಮದಡಿ ೭ ಸಾವಿರ ನೊಂದಾವಣೆ ಮಾಡಿಕೊಂಡ ರೈತರಿಗೆ ಸೌಲಭ್ಯ ದೊರಕಿದೆ. ಹಾಗೂ ಕೋವಿಡ್-೧೯ರ ಸಂಬAಧವಾಗಿ ಸಾರ್ವಜನಿಕ ಆಸ್ಪತ್ರೆಗೆ ೩೫ ಆಮ್ಲಜನಕ ಪ್ರಾಣವಾಯು ಯಂತ್ರ ವಿತರಣೆ ಮಾಡಲಾಗಿದೆ. ೩೦೦ ಜನರಿಗೆ ಆಹಾರದ ಕಿಟ್ ವಿತರಣೆ, ೧೫೦೦ ಕೊರೋನಾ ಜಾಗೃತಿ ಸಭೆ ಮಾಡಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಾಡಲಾದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ವ-ಸಹಾಯ ಸಂಘಗಳ ಮೂಲಕ ಪಡೆದ ಹಣವನ್ನು ವಾಪಸ್ ಡಿಸೆಂಬರ್ ವರೆಗೂ ಅವಕಾಶ ಕೊಡಲಾಗಿದೆ ಎಂದು ಹೇಳಿದರು.
ಇರ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಡಿ. ಜಯರಾಮ್, ಯೋಜನಾಧಿಕಾರಿ ಪುರುಷೋತ್ತಮ್, ಯೋಜನಾಧಿಕಾರಿ ಬಿ.ಸಿ. ಲೇಪಾಕ್ಷಿ ಇತರರು ಪಾಲ್ಗೊಂಡಿದ್ದರು.