ಆಲೂರು : ತಾಲೂಕಿನ ಪಾಳ್ಯ ಹೋಬಳಿಗೆ ಸೇರಿದ ಮೂಡಲಕೊಪ್ಪಲು ( ಸಿಂಗೋಡನಹಳ್ಳಿ) ಗ್ರಾಮದಲ್ಲಿರುವ ಶ್ರೀ ಶಿವ ಪಾರ್ವತಿ ದೇಗುಲದಲ್ಲಿ ಕಳವು. ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಮಂಗಳವಾರ ತಡರಾತ್ರಿ ದೇಗುಲದ
ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ ಎನ್ನಲಾಗುತ್ತಿದೆ.
ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ದೇಗುಲದ ಅರ್ಚಕರು ಪೂಜಾಕಾರ್ಯಕ್ಕೆ ತೆರಳಿದ್ದಾಗ ದೇವಸ್ಥಾನ ಬೀಗ ಹೊಡೆದು ಹಾಕಿರುವುದನ್ನು ಕಂಡು ಸ್ಥಳೀಯ ನಿವಾಸಿಗಳಿಗೆ ವಿಷಯ ತಿಳಿಸಿರುತ್ತಾರೆ.
ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.