ಶಂಕರನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗೋಳೇನಹಳ್ಳಿ ಗ್ರಾಮದ ಯುವಕರು ಸ್ವಚ್ಚತಾ ಆಂದೋಲನವನ್ನು ನಡೆಸಿದ್ದಾರೆ.
ಗ್ರಾಮದ ಹೆಬ್ಬಾಗಿನಲ್ಲಿ ಹಿಂದಿನ ಕಾಲದಲ್ಲಿ ನಿರ್ಮಿಸಿರುವ ಬಸವನ ಗುಡಿಯ ಸುತ್ತಲೂ ಪೊದೆ ಬೆಳೆದು ಗುಡಿಯ ಸೌಂದರ್ಯವೇ ಹಾಳಾಗಿತ್ತು, ಗೋಳೇನಹಳ್ಳಿ ಯುವಕರು ಭಾನುವಾರ ರಜಾದಿನ ಇರುವ ಹಿನ್ನೆಲೆಯಲ್ಲಿ ತಮ್ಮದೇ ಆದ ತಂಡವನ್ನು ಮಾಡಿಕೊಂಡು, ಸ್ನೇಹಿತರೆಲ್ಲರೂ ಜೊತೆಗೂಡಿ ಕೆಲವು ಗಂಟೆಗಳ ಕಾಲ ಕೆಲಸ ಮಾಡಿ ಗ್ರಾಮದ ಹೆಬ್ಬಾಗಿಲಿನಲ್ಲಿ ಕಳೆ ಹೆಚ್ಚಿಸುವ ಬಸವನ ಗುಡಿಯನ್ನು ಸ್ವಚ್ಛಗೊಳಿಸಿದ್ದಾರೆ, ಗ್ರಾಮದ ಯುವಕರಾದ ಯದೀಶ್, ರಂಗ (ಅಭಿ), ನಂದನ, ಮದನ್, ಮೋಹನ್, ಹರೀಶ್, ಕೃಷ್ಣೇಗೌಡ, ಅರುಣ್, ದಿನೇಶ್, ರಾಜೇಶ್, ಕಿರಣ್, ಅಭಿಷೇಕ್, ಸಾಗರ್, ಪ್ರದೀಪ್, ಸುನೀಲ್ ಜಿ ಡಿ, ಅಭಿಷೇಕ್ ಜಿ ಜೆ, ಮಾಸ್ಟರ್ ಮಂಜುನಾಥ್, ಸುನೀಲ್, ರಂಗಸ್ವಾಮಿ, ವೆಂಕಟೇಶ್ (ಧರಣಿ) ಮುಂತಾದವರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು, ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಂಜೇಗೌಡ, ಮರಿಗೌಡ, ಕೃಷ್ಣೇಗೌಡ, ಜಿ ಎಂ ಮಂಜೇಗೌಡ, ರಾಮಶೆಟ್ಟಿ, ದಿನೇಶ್ ಜಿ ಟಿ ಮುಂತಾದವರು ಯುವಕರ ಕೆಲಸವನ್ನು ಹುರಿದುಂಭಿಸಿದರು,
ಇದೇ ಸಂದರ್ಭದಲ್ಲಿ ಗ್ರಾಮದ ಯುವಕ ಯದೀಶ್ ಮಾತನಾಡಿ ಇಂದು ನಾವು ಮಾಡಿರುವ ಭಾನುವಾರದ ಈ ಸ್ವಚ್ಚತಾ ಕಾರ್ಯ ಮನಸ್ಸಿಗೆ ಬಹಳ ಸಂತಸ ತಂದಿದೆ, ಮುಂದಿನ ದಿನಗಳಲ್ಲಿ ಗ್ರಾಮದ ಮತ್ತಷ್ಟು ಯುವಕರನ್ನು ಜೊತೆಗೂಡಿಕೊಂಡು ಭಾನುವಾರದ ರಜಾದಿನಗಳಲ್ಲಿ ಊರಿನ ಹಾಳುಬಿದ್ದ ಕಲ್ಲಿನ ಬಾವಿಗಳು, ದೇವಸ್ಥಾನಗಳನ್ನು ಸ್ವಚ್ಚತೆ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
Tags
ಹಾಸನ