ಬಿಸಿಲೆಯಲ್ಲಿ ನರಹಂತಕ ಚಿರತೆ ಸೆರೆ ಕೂಡ್ರಸ್ತೆ

ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ಬಿಸಿಲೆ ಆನೆಗುಂಡಿ ಮಾವನೂರು ಮಂಕನಹಳ್ಳಿ ಸುತ್ತಮುತ್ತ ರೈತರಿಗೆ ಹಾಗೂ ರೈತರ ಜಾನುವಾರು ಜೀವಭಯ ಉಂಟುಮಾಡಿದ್ದ ಮೂರು ಚಿರತೆ ಯಲ್ಲಿ ಒಂದು ಚಿರತೆಯನ್ನು ಅರಣ್ಯ ಇಲಾಖೆ ಜೀವಂತವಾಗಿ  ಸೆರೆಹಿಡಿದಿದೆ ಕಳೆದ ಹದಿನೈದು ದಿನಗಳ ಹಿಂದೆ ಬಿಸಿಲೆ ಸುತ್ತಮುತ್ತ ನೂರಾರು ಗ್ರಾಮಸ್ಥರು ನರಹಂತಕ ಚಿರತೆಯನ್ನು ಬಿಸಿಲೆ ಅರಣ್ಯ ದಲ್ಲಿ ಬಿಡಲಾಗುತ್ತಿದೆ ಹೊರ ಜಿಲ್ಲೆಯಿಂದ ತಂದು ಬಿಡುತ್ತಿರುವ ಚಿರತೆಯಿಂದ ತಮ್ಮ ಜಮೀನಿಗೆ ಹೋಗಲು ಭಯವಾಗುತ್ತದೆ ಕೂಡಲೇ ಸ್ಥಳಾಂತರಿಸಬೇಕೆಂದು ಅರಣ್ಯ ಭವನದ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು ಪ್ರತಿಭಟನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗುವುದು ಎಂದು ಭರವಸೆ ನೀಡಿದರು ಬಿಸ್ಲೆ ಸುತ್ತಮುತ್ತ ಚಿರತೆ ಹಾವಳಿ  ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯ ವಿಶೇಷ ಸುದ್ದಿ ಪ್ರಕಟಿಸಿತ್ತು ಈ ಬಗ್ಗೆ  ಎಚ್ಚೆತ್ತ ಅರಣ್ಯ ಇಲಾಖೆ  ಚಿರತೆಯನ್ನು ಹಿಡಿಯಲು ವಿಶೇಷ ತಂಡ ರಚಿಸಿ ಚಿರತೆ ಚಲಿಸುವ ಸ್ಥಳವನ್ನು ಗುರುತಿಸಿ ಬಿಸ್ಲೆ ದಟ್ಟ 4 ಸ್ಥಳದಲ್ಲಿ ವಿಶೇಷ ಬೋನ್  ಇಡಲಾಗಿತ್ತು ಇದೀಗ ಒಂದು ಬೋನಿನಲ್ಲಿಶನಿವಾರ ಮಧ್ಯರಾತ್ರಿ  ನರಹಂತಕ ಚಿರತೆ ಸೆರೆಯಾಗಿದ್ದು ಸ್ಥಳೀಯ ರೈತರು.
ನಿಟ್ಟಿಸಿರು ಬಿಡುವಂತಾಗಿದೆ ಇನ್ನು ಎರಡು ಚಿರತೆಗಳು ಬಿಸ್ಲೆ ಅರಣ್ಯದಲ್ಲಿ ಇದ್ದು ಇದನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Post a Comment

Previous Post Next Post