ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಕೊಂಡಜ್ಜಿ ಗ್ರಾಮದ ಪ್ರಸಿದ್ಧ ಹಾಗೂ ಪುರಾತತ್ವ ಇಲಾಖೆಗೆ ಒಳಪಡುವ ವರದರಾಜು ಸ್ವಾಮಿ ದೇವಸ್ಥಾನಕ್ಕೆ ಶಾಸಕರಾದ ಪ್ರೀತಮ್ ಗೌಡ ಹಾಗೂ ಮೈಸೂರು ಮಿನರಲ್ಸ್‍ನ ಅಧ್ಯಕ್ಷರಾದ ಲಿಂಗ ಮೂರ್ತಿ ಅವರು ಭೇಟಿ ನೀಡಿ ಪರಿಶೀಲಿಸಿದ್ದರು.
ನಂತರ ಮಾತನಾಡಿದ ಅವರು ಸುಮಾರು 10 ವರ್ಷಗಳಿಂದ ದೇವಾಲಯದ ಅಭಿವೃದ್ಧಿ ಸ್ಥಗಿತ ಗೊಂಡು ಪಾಳು ಬಿದ್ದಿದ್ದು ಗ್ರಾಮಸ್ಥರು ಮಾಹಿತಿ ನೀಡ್ಡಿದರಿಂದ ಇಂದು ಭೇಟಿ ನೀಡಿ ಪರಿಶೀಲಿಸುತ್ತಿರುವುದಾಗಿ ಹೇಳಿದರು.
ಹಾಸನಾಂಬ ದೇವಸ್ಥಾನವು ‘ಎ’ ಶ್ರೇಣಿಯನ್ನು ಪಡೆದಿದ್ದು ಅದರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದತ್ತು ಪಡೆದು ಈ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ದೇವಸ್ಥಾನದ ಅಭಿವೃದ್ಧಿಗೆ ಮೈಸೂರು ಮಿನರಲ್ಸ್‍ನ ಅಧ್ಯಕ್ಷರಾದ ಲಿಂಗ ಮೂರ್ತಿಯವರು ನಮ್ಮೊಂದಿಗೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 25 ಲಕ್ಷ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಹಣವನ್ನು ಬಳಸಿಕೊಂಡು ಕಾಮಗಾರಿ ಶೀಘ್ರ ಮುಗಿಸುತ್ತೇವೆ ಎಂದರು.
ಮುಜರಾಯಿ ಇಲಾಖೆ ಹಾಸನಾಂಬ ದೇವಸ್ಥಾನದ ಅಭಿವೃದ್ಧಿ ಹಣ ಹಾಗೂ ದಾನಿಗಳಿಂದ ಹಣವನ್ನು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸೀಗೆ ಗುಡ್ಡ, ದೊಡ್ಡಗದ್ದವಳ್ಳಿ ಹಾಗೂ ಕೊಂಡಜ್ಜಿ ದೇವಸ್ಥಾನಗಳ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಸದ ವೇಳೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ 25 ಲಕ್ಷಣವನ್ನು ದೇವಸ್ಥಾನದ ಅಭಿವೃದ್ಧಿಗೆ ನೀಡಿದ್ದರು ಆ ಹಣದಿಂದ ದೇವಾಲಯ ಈ ಹಂತದ ವರೆಗೆ ಕಾಮಗಾರಿಯಾಗಿದೆ ಎಂದರು.
2022ರ ಜನವರಿ 25 ರ ವೇಳೆಗೆ ದೇವಸ್ಥಾನದ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಉದ್ಘಾಟನೆ ಮಾಡಿಸಲಾಗುಹುದು ಎಂದು ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.
ಈ ವೇಳೆಯಲ್ಲಿ ಮೈಸೂರು ಮಿನರಲ್ಸ್‍ನ ಅಧ್ಯಕ್ಷರಾದ ಲಿಂಗಮೂರ್ತಿ, ತಹಸಿಲ್ದಾರ್ ಶಿವಶಂಕರಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಸಂಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುದರ್ಶನ್ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.