ಯಾತ್ರಾ ಸ್ಥಳಗಳನ್ನು ಟಾರ್ಗೆಟ್ ಮಾಡಿ ಕಾರು ಕದಿಯುತ್ತಿದ್ದ ಕಳ್ಳರ ಬಂಧನ -ಸಕಲೇಶಪುರ ನಗರ ವೃತ್ತ ಪೊಲೀಸರ ಕಾರ್ಯಾಚರಣೆ
ಹಾಸನ : ಸಕಲೇಶಪುರ ನಗರ ವೃತ್ತ ಪೊಲೀಸರ ಕಾರ್ಯಾಚರಣೆ
ಯಾತ್ರಾ ಸ್ಥಳಗಳನ್ನು ಟಾರ್ಗೆಟ್ ಮಾಡಿ ಕಾರು ಕದಿಯುತ್ತಿದ್ದ ಕಳ್ಳರ ಬಂಧನ
ರಾಜ್ಯದ ವಿವಿಧೆಡೆ ಕಾರು ಕಳ್ಳತನ ಮಾಡಿದ್ದ ಆರೋಪಿಗಳು
ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಹೊಳೆನರಸೀಪುರ ಸೇರಿದಂತೆ ರಾಜ್ಯದ ಹಲವೆಡೆ ಕಳ್ಳತನ ಮಾಡಿದ್ದ ಖದೀಮರು
ವಾಹನ ಮಾಲೀಕರು ಕಾರು ಪಾರ್ಕಿಂಗ್ ಮಾಡಿ ಹೋದ ನಂತರ ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಖದೀಮರು
ಕುಖ್ಯಾತ ಆರು ಅಂತರ್ ಜಿಲ್ಲಾ ವಾಹನ ಕಳ್ಳರ ಬಂಧನ
ಮೊಯ್ದು ಕುನ್ನಿ (೩೮), ಮಹಮ್ಮದ್ ರಫೀಕ್ (30) ಪ್ರಮುಖ ಆರೋಪಿಗಳು
ವಾಹನಗಳನ್ನು ಮಾರಾಟ ಮಾಡಲು ನೀಡುತ್ತಿದ್ದ ಕಾರುಗಳ ಚಾರ್ಸಿ ನಂ, ಇಂಜಿನ್ ಗಳ ನಂಬರನ್ನು ಕಳ್ಳತನ ಮಾಡಿದ ವಾಹನಗಳಿಗೆ ಪಂಚ್ ಮಾಡುತ್ತಿದ್ದ ಖದೀಮರ ಬಂಧನ
ಈ ಸಂಬಂಧ ಅಫ್ರೋಜ್ ಖಾನ್, ಖಾದರ್ ಶರೀಫ್, ಸೈಯದ್ ಅಜ್ಮಲ್, ಮಹಮದ್ ಮುಬಾರಕ್ ಬಂಧನ
ಬಂಧಿತರಿಂದ 44 ಲಕ್ಷ ರೂ ಮೌಲ್ಯದ 20 ವಾಹನಗಳ ವಶ
ಎರಡು ಮಾರುತಿ 800 ಕಾರು, 12 ಮಾರುತಿ ಓಮಿನಿ, ಒಂದು ಬೊಲೋರೋ ಪಿಕಪ್ ವಾಹನಗಳು ವಶ
ಮಾಲೀಕರು ಮಾಹಿತಿಯಿಲ್ಲದ ಒಂದು ಆಲ್ಟೋ, ಎರಡು ಮಾರುತಿ 800, ಮೂರು ಮಾರುತಿ ಓಮಿನಿ ಕಾರುಗಳು ವಶ
ಹಾಸನ ಎಸ್ಪಿ ಆರ್.ಶ್ರೀನಿವಾಸ್ ಗೌಡ ಮಾಹಿತಿ.