ರಾಮನಾಥಪುರ;-: ಶಾಸಕ ಡಾ. ಎ.ಟಿ. ರಾಮಸ್ವಾಮೀಯವರು ಈ 2 ವರ್ಷಗಳ ಅವಧಿಯಲ್ಲಿ ರಾಮನಾಥಪುರ ಪಟ್ಟಣಕ್ಕೆ ವಿವಿಧ ಯೋಜನೆಯ ಅಡಿಯಲ್ಲಿ ಹತ್ತಾರು ಅಭಿವೃದ್ದಿ ಕಾಮಗಾರಿಗಳನ್ನು ಮಾಡಿಸಿಕೊಟ್ಟಿರುವುದಕ್ಕೆ ಗ್ರಾಮದ ಹಿರಿಯರಾದ ಶ್ರೀನಿಧಿಯವರು ಶ್ಲಾಘಿಸಿದರು.
ರಾಮನಾಥಪುರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಎ.ಟಿ. ರಾಮಸ್ವಾಮಿ ಮತ್ತು ನಿವೃತ್ತ ಅಧಿಕಾರಿಯಾದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಂಗೀತ ಗ್ರಾಮ ರುದ್ರಪಟ್ಟಣದ ಅರ್.ಎಸ್. ಅಶ್ವತನಾರಾಯಣ ಮುಂತಾದವರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಶ್ರೀನಿಧಿ ಅವರು ನಿವೃತ್ತ ಇಂಜಿನಿಯರ್ ಅಶ್ವತನಾರಾಯಣ ಅವರ ಅವಧಿಯಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ಮಾಡಿ ನಿಷ್ಠವಂತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದ ಅವರು ಅದೇ ರೀತಿ ಕ್ಷೇತ್ರದ ಶಾಸಕ ರಾಮಸ್ವಾಮಿ ಅವರು ಸಹ ನಮ್ಮ ರಾಮನಾಥಪುರ ಪಟ್ಟಣದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಿಸಿ ಗ್ರಾಮೀಣ ಭಾಗದ ಹತ್ತಾರು ಸಾವಿರ ಹೆಣ್ಣು ಮಕ್ಕಳಿಗೆ ಅಶ್ರಯರಾಗಿದ್ದಾರೆ. ಅಲ್ಲದೇ ಅವರಣದಲ್ಲಿ ವಿವಿಧ ಯೋಜನೆಯಡಿ ಹಾಗೂ ಅರ್.ಐ.ಡಿ.ಪಿ. 22ರ ಯೋಜನೆಯಡಿ 2 ಕೋಟಿ 50 ಲಕ್ಷ ರೂ ವೆಚ್ಚದಲ್ಲಿ 6 ಕೋಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ.
ರಾಮೇಶ್ವರಸ್ವಾಮಿ ದೇವಾಲಯದ ಅವರಣ ಮತ್ತು ಕೆ.ಎಸ್.ಅರ್.ಟಿ.ಸಿ ಸಾರಿಗೆ ಡಿಪೋ ಹತ್ತಿರ ಶುದ್ಧ ನೀರಿನ ಘಟಕ, ಕಾವೇರಿ ನದಿ ದಂಡೆಯ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕ 25 ಲಕ್ಷ ರೂ ಮತ್ತು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪಕ್ಕದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಹೈಟೆಕ್ ಶೌಚಾಲಯಗಳನ್ನು ಉದ್ಘಾಟನೆ ಮಾಡಲಾಗಿದೆ. ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಸಾರಿಗೆ ಘಟಕದ ವ್ಯವಸ್ಥೆ, ಬಸ್ ನಿಲ್ದಾಣದ ವ್ಯವಸ್ಥೆ ಅಲ್ಲದೆ ನಿರ್ಮಾಣಕ್ಕೆ 2 ಕೋಟಿ 62 ಲಕ್ಷ ರೂ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ. ಅಲ್ಲದೇ ಇಲ್ಲಿಯ ಕೆ.ಎಸ್.ಅರ್.ಟಿ.ಸಿ. ನೂತನ ನಿಲ್ದಾಣದ ಮತ್ತು ವಾಣಿಜ್ಯ ಮಳಿಗೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಸರ್ಕಾರಕ್ಕೆ ಮತ್ತೆ 1 ಕೋಟಿ ರೂ ವೆಚ್ಚದಲ್ಲಿ ಕಾಮಾಗಾರಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದಲ್ಲಿ 10 ಲಕ್ಷ ರೂ, ಪಟ್ಟಣದ ದೇವಸ್ಥಾನದ ರಸ್ತೆಗೆ 20 ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಮುಗಿದಿದೆ.
ಪಟ್ಟಣದ ಸುಬ್ರಹ್ಮಣ್ಯನಗರದಲ್ಲಿಸ 6 ಎಕ್ಕರೆ ನೀವೇಶನ ನೀವೇಶನರಹಿರಿಗೆ ಮಂಜೂರು ಮಾಡಿಸಿ, ಈಗಾಗಲೇ ಕೆಲವರಿಗೆ ನಿವೇಶನ ನೀಡಲಾಗುತ್ತಿದೆ. ಕಾವೇರಿ ನದಿಗೆ 1 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಸೆಸ್ಕಾಂ ಇಜಿನಿಯರ್ ಅಫೀಸುಗಳು, ರೈತ ಸಂಪರ್ಕ ಕೇಂದ್ರದ ಕಟ್ಟಡಗಳು ನಿರ್ಮಾಣವಾಗಿವೆ. ಕಾವೇರಿ ನದಿಗೆ ಸೇತುವೆ ನಿರ್ಮಾಣಕ್ಕೆ 24 ಕೋಟಿ ರೂ ಮಂಜೂರಾಗಿ ಕಾಮಾಗಾರಿ ನಡೆಯುತ್ತಿದೆ. ಪಟ್ಟಣದ ದೇವಾಲಯದ ರಸ್ತೆ ಸೇರಿದಂತೆ ಬಹುತೇಖ ರಸ್ತೆಗಳಿಗೆ 58 ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಮುಗಿದಿದೆ. ಪಟ್ಟಣದ ಕುಡಿಯುವ ನೀರಿನ ಶುದ್ದಕರಣಕ್ಕೆ ಕಾವೇರಿ ನದಿ ತಟದಲ್ಲಿ 95 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರದ ಕಾಮಗಾರಿಗೆ ಇತ್ತೀಚಗೆ ಶಾಸಕ ಡಾ. ಎ.ಟಿ. ರಾಮಸ್ವಾಮಿ ಚಾಲನೆ ನೀಡಿದ್ದು ಹತ್ತಾರು ಅಭಿವೃದ್ದಿ ಕಾಮಗಾರಿಗಳು ಗ್ರಾಮದ ಜನತೆಗೆ ಗೊತ್ತಿಲ್ಲದಂತೆ ಅಭಿವೃದ್ದಿ ಪಡಿಸಿದ್ದಾರೆ ಎಂದು ಶ್ರೀನಿಧಿ ಅವರು ಸ್ಲಾಘಿಸಿದರು.
ಶಾಸಕ ಡಾ. ಎ.ಟಿ. ರಾಮಸ್ವಾಮಿ, ಕಾರ್ಯಪಾಲಕ ಇಂಜಿನಿಯರ್ ರುದ್ರಪಟ್ಟಣದ ಅಶ್ವತ್‌ನಾರಾಯಣ, ಇಂಜಿನಿಯರ್ ಸಮೀರ್ ಮುಂತಾದವರುನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಜೆ. ಹೇಮಲತಾ, ಉಪಾಧ್ಯಕ್ಷೆ, ಗೌರಮ್ಮ ಹಾಗೂ ಸದಸ್ಯರು ಗೌರವಿಸಿದರು. ಈ ಸಂದರ್ಭದಲ್ಲಿ ಉಪಾರಿಕೇಗೌಡ, ನಾರಾಯಣಸ್ವಾಮಿ, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಳೇಗೌಡ, ಚಿಕ್ಕಣ್ಣಶೆಟ್ಟಿ, ದಿವಾಕರ್, ರಾಮೇಗೌಡ, ಶ್ರೀನಿಧಿ, ಅಭಿವೃದ್ದಿ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು.