ಅನುತ್ತೀರ್ಣಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಮನವಿ

ಹಾಸನ: ಪರೀಕ್ಷೆ ನಡೆದ ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಮಾಡುವ ವೇಳೆ ದುರುದ್ದೇಶಪೂರ್ವಕವಾಗಿ ಹೊಡೆದು ಹಾಕುವ ಮೂಲಕ ಅನುತ್ತೀರ್ಣಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಲಿತಾಂಶದಲ್ಲಿ ವಂಚಿತರಾಗಿರುವ ವಿದ್ಯಾರ್ಥಿ ಚನ್ನಯ್ಯ ಮತ್ತು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣದಲ್ಲಿ ಮನವಿ ಮಾಡಿದರು.


       ಬಿಎಸ್ಸಿ ನರ್ಸಿಂಗ್ ತೃತೀಯ ವರ್ಷದ ಪರೀಕ್ಷೆಯಾದ ನಂತರ ಸ್ಕ್ಯಾನ್ ಮಾಡುವ ಸಂದರ್ಭದಲ್ಲಿ ನನ್ನ ಉತ್ತರ ಪತ್ರಿಕೆಯಲ್ಲಿ ಸರಿಯಾಗಿ ಬರೆದ ಉತ್ತರಗಳನ್ನು ದುರುದ್ದೇಶಪೂರ್ವಕವಾಗಿ ಹೊಡೆದುಹಾಕಿದ್ದರಿಂದ ನಾನು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಲು ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುಬೇಕು ಎಂದರು. ೨೦೨೧ ಫೆಬ್ರವರಿ ತಿಂಗಳಿನಲ್ಲಿ ನಡೆದಂತಹ ತೃತೀಯ ವರ್ಷದ ಪರೀಕ್ಷೆಯಲ್ಲಿ ನನ್ನ ಪಲಿತಾಂಶ ಅನುತ್ತೀರ್ಣ ಎಂದು ಬಂದಿರುತ್ತದೆ. ನಾನು ಸದಾ ಓದಿನಲ್ಲಿ ಉತ್ತಮವಾಗಿದ್ದು, ಕಾಲೇಜಿನಲ್ಲಿ ಸತತ ನಡೆದ ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ್ಯಾಂಕ್ ಪಡೆದಿದ್ದು, ಆದರೆ ವರ್ಷದ ಫಲಿತಾಂಶ ನೋಡಿದರೆ ಅನುತ್ತೀರ್ಣ ಎಂದು ನೋಡಿದಾಗ ಅಘಾತಗೊಂಡು, ಸಂಶಯದಲ್ಲಿ ನಾನು ಬರೆದ ಉತ್ತರ ಪ್ರತಿಯ ಪೋಟೋ ಕಾಫಿಯನ್ನು ೨೫೦ ರೂಗಳ ಹಣ ಕಟ್ಟಿ ತರಿಸಿ ನೋಡಿದಾಗ ಬರದ ಅನೇಕ ಮುಖ್ಯವಾದ ಸರಿ ಉತ್ತರಗಳನ್ನು ಯಾರೋ ದುರುದ್ದೇಶ ಪೂರ್ವಕವಾಗಿ ಉತ್ತರ ಪತ್ರಿಕೆಯನ್ನು ಸ್ಕಾ÷್ಯನ್ ಮಾಡುವ ಸಂದರ್ಭದಲ್ಲಿ ಹೊಡೆದು ಹಾಕಿರುವುದಾಗಿ ದೂರಿದರು. ನಮ್ಮ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಪರೀಕ್ಷಾ ನಿಯಮದ ಪ್ರಕಾರ ಉತ್ತರ ಪತ್ರಿಕೆಗಳನ್ನು ಸ್ಕ್ಯಾನಿಂಗ್ ಮಾಡಲು ಅನೇಕ ರೀತಿಯ ನೀತಿ ನಿಯಮಗಳಿದ್ದು, ನಿಯಮಗಳನ್ನು ಉಲ್ಲಂಘಿಸಿ ನಮ್ಮ ಕಾಲೇಜಿನ ಪ್ರಾಂಶುಪಾಲರು ಅದೇ ಕಾಲೇಜಿನ ಕೆಲವು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ. ನಾನು ಬರೆದ ಸರಿ ಉತ್ತರಗಳನ್ನು ಉದ್ದೇಶ ಪೂರ್ವಕವಾಗಿ ಹೊಡೆದುಹಾಕಿರುವುದು ಕಂಡುಬAದಿದೆ. ರೀತಿಯಾದ ಕೃತ್ಯದಿಂದ ನನ್ನ ಭವಿಷ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕವ್ಯಕ್ತಪಡಿಸಿದರು. ನನ್ನನ್ನು ವೈಯಕ್ತಿವಾಗಿ ಗುರಿಯಾಗಿಸಿಕೊಂಡು ಕೃತ್ಯವನ್ನು ಮಾಡಿರುತ್ತಾರೆ. ಕೃತ್ಯದಲ್ಲಿ ಪ್ರಾಂಶುಪಾಲರು ಉದ್ದೇಶಪೂರ್ವಕವಾಗಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ರೀತಿ ಕೃತ್ಯವನ್ನು ವೆಸಗಿ ನನ್ನ ಭವಿಷ್ಯವನ್ನು ಹಾಳು ಮಾಡಲು ಕಾರಣರಾಗಿರುತ್ತಾರೆ ಎಂದು ಮೋಸದಿಂದ ಅನುತ್ತೀರ್ಣರಾಗಿರುವ ಚನ್ನಯ್ಯರವರು ಮಾಧ್ಯಮದ ಬಳಿ ತಮ್ಮ ಅಳಲು ತೋಡಿಕೊಂಡರು. ಏನಾದರೂ ನ್ಯಾಯ ಸಿಗದಿದ್ದರೇ ಇನ್ನೇರಡು ಮೂರು ದಿವಸದಲ್ಲಿ ಎಬಿವಿಪಿ ಸಂಘಟನೆಗಳ ಮೂಲಕ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

      ಕೃತ್ಯಕ್ಕೆ ಬಾಗಿಯಾಗಿರುವ ನಮ್ಮ ಕಾಲೇಜಿನ ಪ್ರಾಂಶುಪಾಲರು ಮತ್ತು ಕೆಲವು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡಬೇಕಾಗಿ ಕೋರಿದರು.

       ಇದೆ ವೇಳೆ ವಿದ್ಯಾರ್ಥಿಗಳಾದ ಮಂಜುನಾಥ್, ಬಿಪಿನ್, ಪ್ರವೀಣ್, ಅಮೂಲ್, ಶಿವಾನಂದ್, ನವೀನ್, ಅಭಿಷೇಕ್, ಶರತ್ ಇತರರು ಇದ್ದರು.

Post a Comment

Previous Post Next Post