ಹಾಸನ: ಶ್ರೀ ರಾಮಮೃತ ತರಂಗಿಣಿ ರಥವು ಮಾರ್ಚ್ ೨೮ ರಂದು ಹಾಸನ ನಗರಕ್ಕೆ ಸಂಜೆ ೪ ಗಂಟೆಗೆ ಆಗಮಿಸಲಿದ್ದು, ನಾಲ್ಕು ದಿವಸಗಳ ಕಾಲ ಮನೆಗಲಿಗೆ ತೆರಳಿ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಮಿತಿ ಸಂಚಾಲಕ ವೇಣುಗೋಪಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರದಂದು ಮಾತನಾಡಿ, ಶ್ರೀ ರಾಮಾಮೃತ ತರಂಗಿಣಿ ಭವ್ಯ ಕಾರ್ಯಕ್ರಮವು " ರಾಮನ ಬಂಟ ಹನುಮನ ಜನ್ಮ ಸ್ಥಳವಾದ ಅಂಜನಾದ್ರಿ ಪರ್ವತ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆಯೊಂದಿಗೆ ಉಭಯ ಜಗದ್ಗುರುಗಳು ದಕ್ಷಿಣಾಮ್ನಾಯ ಶ್ರೀ ಶಾರದ ಪೀಠಂ ಶೃಂಗೇರಿ ಹಾಗು ಹಲವಾರು ಪರಮ ಪೂಜ್ಯರುಗಳು ಕೃಪಾರ್ಶೀವಾದದೊಂದಿಗೆ ಪ್ರಾರಂಭಗೊAಡಿದೆ. ಶ್ರೀ ರಾಮಾಮೃತ ತರಂಗಿಣಿ ಭವ್ಯ ಕಾರ್ಯಕ್ರಮವು ಸಂಕಲ್ಪಾರ್ಥ ಒಂದು ಕೋಟಿ ಮನೆಗಳಿಗೆ ಸಂಚರಿಸುತ್ತದೆ. ಪರಮ ಪೂಜ್ಯರು ಗುರುಗಳು ಹಾಗು ಹಿರಿಯರ ದಿವ್ಯ ಆರ್ಶಿವಾದದೊಂದಿಗೆ ಪ್ರತಿ ಮನೆ ಮನೆಗೆ ತೆರಳಲಿರುವ ಭಾರತದ ಪವಿತ್ರ ೧೬ ನದಿಗಳ ಪುಣ್ಯ ಜಲ, ಮೃತ್ತಿಕೆ (ಮಣ್ಣು) ಹಾಗು ಶ್ರೀ ರಾಮನ ಪಾದುಕೆಗಳಿಗೆ ಪ್ರತಿಯೊಬ್ಬರು ಪೂಜೆ ಸಲ್ಲಿಸುವುದರೊಂದಿಗೆ ಶ್ರೀ ರಾಮನುಗ್ರಹಕ್ಕೆ ಪಾತ್ರರಾಗಬಹುದಾಗಿದೆ ಎಂದರು. ದೈವಿ ಶಕ್ತಿಯುಳ್ಳ ಪವಿತ್ರ ನದಿಗಳ ಪುಣ್ಯ ಜಲಕ್ಕೆ ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಸಕಲ ಸಮೃದ್ಧಿ ಹಾಗು ಕುಟುಂಬದ ಶ್ರೇಯೋಭಿವೃದ್ಧಿಯನ್ನು ಕಾಣಬಹುದಾಗಿದೆ. ಭಾರತದ ೧೬ ಪವಿತ್ರ ನದಿಗಳಾದ ಬ್ರಹ್ಮಪುತ್ರ, ಬೀಮರತಿ, ಕಾವೇರಿ, ಗಂಗಾ, ಪ್ರಣಹಿತ, ಪೂರ್ಣ, ಸರಸ್ವತಿ, ಸರಯು, ಸಿಂದು, ತಾಮ್ರಪರಣಿ, ತುಂಗಭದ್ರ, ಯಮುನಾ, ಗಂಡಕಿ, ಗೋದಾವರಿ, ಕೃಷ್ಣ, ನರ್ಮದಾ ಇವುಗಳ ಜಲ ಮತ್ತು ಮೃತ್ತಿಕೆ ತರಲಾದ ಭಾರತದ ಮಹಾ ನದಿಗಳು. ನೀವೆ ಸ್ವತ ಪೂಜಿಸಿ ಆಯೋಧ್ಯೆ ಪ್ರಭು ಶ್ರೀ ರಾಮಮಂದಿರಕ್ಕೆ ಪವಿತ್ರ ಜಲವನ್ನು ಮತ್ತು ಮೃತ್ತಿಕೆಯನ್ನುನ (ಮಣ್ಣು) ಲೋಕ ಕಲ್ಯಾಣಕ್ಕಾಗಿ ಕಳುಹಿಸುವ ಸುವರ್ಣವಕಾಶ ಹಾಸನ ಜನತೆಗೆ ಒದಗಿ ಬಂದಿದೆ.
೨೦೨೧ ಮಾರ್ಚ್ ೨೮ ರಂದು ಶ್ರೀ ರಾಮಮೃತ ತರಂಗಿಣಿ ರಥವು ಹಾಸನ ನಗರಕ್ಕೆ ಸಂಜೆ ೪ ಗಂಟೆಗೆ ಆಗಮಿಸಲಿದ್ದು ರಥವನ್ನು ತಣ್ಣೀರುಹಳ್ಳ ಸರ್ಕಲ್ ನಲ್ಲಿ ಸ್ವಾಗತ ಮಾಡಿ ತಣ್ಣಿರುಹಳ್ಳ ಬಾಗದಲ್ಲಿ ಮನೆಮನೆಗೆ ತೆರಳಿ ಪೂಜೆಗೆ ಅವಕಾಶ ಮಾಡಿಕೊಡಲಾಗುವುದು. ನಂತರ ೨೯ರ ಸೋಮವಾರದಂದು ಬೆಳಗ್ಗೆ ೭ ಗಂಟೆಯಿAದ ಸಂಜೆ ೮ ಗಂಟೆಯವರೆಗೆ ಹಾಸನ ನಗರದ ಉತ್ತರ ಬಡಾವಣೆ, ಸರಸ್ವತಿಪುರಂ, ರಂಗೋಲಿಹಳ್ಳ, ಅಗ್ರಹಾರ ಬೀದಿ ಬಡಾವಣೆಯ ಮನ ಮನೆಗೆ ತೆರಳುವುದು. ಅಂದು ಸಂಜೆ ೬ ಗಂಟೆಗೆ ಹಾಸನದ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀ ಪಾದುಕೆಗೆ ಪೂಜೆ ಮಾಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು ಮತ್ತು ಸಂಜೆ ೬ ಗಂಟೆಯಿAದ ಬೆಂಗಳೂರಿನ ಸುಪ್ರಸಿದ್ದ ಕೊಳಲು ರಾಮನ ವಾದಕ ವಿದ್ವಾನ್ ಬಿ.ಕೆ. ಅನಂತರಾಮ್ ಮತ್ತು ತಂಡದವರಿAದ ಕೊಳಲುವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ೩೦ರ ಮಂಗಳವಾರದAದು ಬೆಳಗ್ಗೆ ೭ ಗಂಟೆಯಿAದ ಸಂಜೆ ಗಂಟೆಯವರೆಗೆ ಉದಯಗಿರಿ, ಕುವೆಂಪುನಗರ, ಕೆ.ಆರ್.ಪುರಂ, ರವೀಂದ್ರನಗರ ಬಡಾವಣೆಯ ಮನೆಗಳಲ್ಲಿ ಪೂಜೆಗೆ ಅವಕಾಶ ಮಾಡಿಕೊಡಲಾಗುವುದು. ಇದಾದ ಬಳಿಕ ೩೧ರ ಬುಧವಾರದಂದು ಬೆಳಗ್ಗೆ ೭ ಗಂಟೆಯಿAದ ಸಂಜೆ ೮ ಗಂಟೆಯವರೆಗೆ ಹೇಮಾವತಿ ನಗರ ಶಾಂತಿನಗರ, ಅಡ್ಲಿಮನೆರಸ್ತೆ, ಡಾ.ರಾಜಕುಮಾರ ನಗರ ಬಡಾವಣೆಯ ಮನೆಗಳಲ್ಲಿ ಪೂಜೆಗೆ ಅವಕಾಶ ಮಾಡಿಕೊಡಲಾಗುವುದು. ನಾಲ್ಕು ದಿನಗಳು ರಥವು ಹಾಸನ ನಗರದ ಬಡಾವಣೆಗಳ ಮನೆಗಳಿಗೆ ತೆರಳಿ ಪೂಜೆಗೆ ಅವಕಾಶ ಒದಗಿ ಬಂದಿರುವುದರಿAದ ಈ ಪುಣ್ಯ ಕಾರ್ಯದಲ್ಲಿ ಹಾಸನ ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಭು ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕಾಗಿ ಇದೆ ವೇಳೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಹಾಸನ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ನಗರ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಚಂದ್ರಶೇಖರ್ ಉಪಸ್ಥಿತರಿದ್ದರು.
