ಹಾಸನದಲ್ಲಿ ನೆನ್ನೆ ಸಂಜೆ ೪-೦೦ ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಶುಕ್ರವಾರಸಂತೆ ಗ್ರಾಮದ ಸಮೀಪ ದಿಣ್ಣೆಯ ಮರದ ಕೆಳಗೆ ಜೂಜಾಡುತ್ತಿದ್ದಾರೆಂದು ಶ್ರೀ ಎಸ್. ಮಂಜುನಾಥ, ಪಿಎಸ್ಐ, ಯಸಳೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಬಂದಿಸಿದರು.
- ದೇವರಾಜ ಬಿನ್ ಕೆಂಚಯ್ಯ, ೪೪ ವರ್ಷ, ಕುಗಭತ್ತೂರು ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು
- ಮಂಜುನಾಥ ಬಿನ್ ನಿಂಗರಾಜಾಚಾರಿ, ೩೪ ವರ್ಷ, ಶೆಟ್ಟಿಹಳ್ಳಿ ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು
- . ಹೆಚ್.ಕೆ. ಮಂಜುನಾಥ ಬಿನ್ ಲೇಟ್ ಕಾಳೇಗೌಡ, ೫೮ ವರ್ಷ, ಈಚಲಪುರ ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು
- ಹಾಲಪ್ಪ ಬಿನ್ ದ್ಯಾವಯ್ಯ, ೪೫ ವರ್ಷ, ಈಚಲಪುರ ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು
ಇವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ೨,೨೮೦/- ನಗದನ್ನು ಅಮಾನತ್ತುಪಡಿಸಿಕೊಂಡು ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
Tags
ಕ್ರೈಂ
