ಕಟ್ಟಾಯ ಉಳಿಸುವಂತೆ ಒತ್ತಾಸಿ ಡಿಸಿ ಕಛೇರಿ ಮುಂದೆ ಜೆಡಿಎಸ್ ಪ್ರತಿಭಟನೆ

ಎಸ್. ದ್ಯಾವೇಗೌಡ ನೇತೃತ್ವದಲ್ಲಿ  ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ

ಹಾಸನ (ಹಾಸನ ಸೀಮೆ.ಇನ್): ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ಅವೈಜ್ಞಾನಿಕವಾಗಿ ಪುನರ್ವಿಂಗಡಣೆ ಮಾಡಲು ಅವಕಾಶ ಕೊಡದೇ ಕಟ್ಟಾಯವನ್ನು ಉಳಿಸುವಂತೆ ಒತ್ತಾಸಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

      ತಾಲೂಕು ಕಟ್ಟಾಯ ಹೋಬಳಿ ತಾಲೂಕು ಪಂಚಾತಿ ಜಿಲ್ಲಾ ಪಂಚಾತಿ ಕ್ಷೇತ್ರಗಳನ್ನು ಅವೈಜ್ಞಾನಿಕವಾಗಿ ಪುನರ್ವಿಂಗಡಣೆ ಮಾಡಿ ಕಟ್ಟಾಯ ಹೋಬಳಿಗೆ ತುಂಬಾ ತೊಂದರೆ ಮಾಡಲು ಮುಂದಾಗಿದ್ದಾರೆ. ಕಟ್ಟಾಯ ಹೋಬಳಿಗೆ ಕೇವಲ ಎರಡು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಮಾತ್ರ ಕೊಟ್ಟಿದ್ದಾರೆ. ಇಲ್ಲಿ ಸುಮಾರು ೧೮ ಸಾವಿರ ಮತದಾರರನ್ನು ಸೇರಿಸಿ ಎರಡು ಕ್ಷೇತ್ರಗಳನ್ನು ರಚಿಸಿದ್ದಾರೆ ಎಂದು ದೂರಿದರು. ಆದರೆ ಹಾಸನ ಕ್ಷೇತ್ರದ ಕೆಲವು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಕೇವಲ ೮ ಸಾವಿರ ಮತದಾರರನ್ನು ಸೇರಿಸಿ ಕ್ಷೇತ್ರಗಳನ್ನು ಮಾಡಿಕೊಂಡಿದ್ದು, ನಮ್ಮ ಕಟ್ಟಾಯ ಹೋಬಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ೧೭ ರಿಂದ ೧೮ ಸಾವಿರ ಮತದಾರರಗಳನ್ನು ಸೇರಿಸಿ ಎರಡು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಕಸಿದುಕೊಂಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಕಟ್ಟಾಯ ಉಳಿಸಿಕೊಡಿ ಎಂದು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಕೋರಿದರು.

       ಇದೆ ವೇಳೆ ಜೆಡಿಎಸ್ ಯುವ ಮುಖಂಡ ಮತ್ತು ವಕೀಲ ಚನ್ನಂಗಿಹಳ್ಳಿ ಶ್ರೀಕಾಂತ್, ಕಾರ್ಲೇ ಇಂದ್ರೇಶ್, ನಾಗಮ್ಮ ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post