ರಾಮನಾಥಪುರ:- ಪ್ರಸ್ತುತ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಟೌನ್ ಪೋಲೀಸ್ ಠಾಣೆಯ ಪಿಎಸ್‌ಐ ಹಾಗೂ 2016 ರಿಂದ 2017 ರವರೆಗೆ ಕೊಣನೂರು ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಬಿ.ಪಿ. ಬ್ಯಾಟರಾಯಗೌಡರವರಿಗೆ ಕರ್ನಾಟಕ ಸರ್ಕಾರವು 2020 ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ನೀಡಿ ಗೌರವಿಸಿದೆ.
ಮೂಲತಃ ಕುಣಿಗಲ್ ತಾಲೂಕಿನ ಬಿ.ಟಿ. ಪಾಳ್ಯದ ಬ್ಯಾಟರಾಯಗೌಡ ರವರು ಬಿ.ಎ ಪದವಿ ಪಡೆದಿದ್ದಾರೆ. ರೈತ ಕುಟುಂಬದ ಪಾತಯ್ಯ ಹಾಗೂ ಗಂಗಮ್ಮ ದಂಪತಿ ಪುತ್ರರಾದ ಬ್ಯಾಟರಾಯಗೌಡರವರು 2011 ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದರು. ಇದುವರೆಗೆ ಬೆಳ್ಳೂರು, ಮಂಡ್ಯ ಪಶ್ಚಿಮ, ಕೊಣನೂರು, ಕೆ.ಆರ್.ಎಸ್ ಹಾಗೂ ಸಕಲೇಶಪುರ ಪೋಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಹಾಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಟೌನ್ ಪೋಲೀಸ್ ಠಾಣೆಯ ಪಿಎಸ್‌ಐ ಆಗಿದ್ದಾರೆ.
ಬಿ.ಪಿ. ಬ್ಯಾಟರಾಯಗೌಡರವರಿಗೆ ರವರಿಗೆ ಮುಖ್ಯಮಂತ್ರಿಗಳ ಪದಕ ಸಿಕ್ಕಿರುವುದಕ್ಕೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೊಣನೂರು ಹೊಯ್ಸಳ, ಮುಖಂಡರುಗಳಾದ ಕೆ.ಎಸ್. ವಾಸುದೇವ್, ಕೆ.ವಿ. ಶ್ರೀನಿವಾಸಮೂರ್ತಿ, ಗ್ರಾ.ಪಂ ಸದಸ್ಯ ಚಾಯ್ಸ್ ಸತೀಶ್ ಹಾಗೂ ಕೊಣನೂರು ಪೋಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಗಳು ಮುಂತಾದ ಹಲವರು ಸಂತಸ ವ್ಯಕ್ತಪಡಿಸಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿರುವ ಬಿ.ಪಿ. ಬ್ಯಾಟರಾಯಗೌಡ ರವರಿಗೆ ಅವರ ವೃತ್ತಿ ಜೀವನದಲ್ಲಿ ಇನ್ನೂ ಹೆಚ್ಚಿನ ಗೌರವಾಧಾರಗಳು ಲಭಿಸಲಿ ಎಂದು ಹಾರೈಸಿದರು.
