ಹಾಸನ: ಬೃಹತ್ ಲೋಕ್ ಅದಾಲತ್ ಮೂಲಕ ಶನಿವಾರದಂದು ಒಂದೆ ದಿವಸದಲ್ಲಿ ೩ ಸಾವಿರಕ್ಕೂ ಹೆಚ್ಚು ಪ್ರಕರಣವನ್ನು ಹಾಸನ ಜಿಲ್ಲೆಯೊಂದರಲ್ಲೆ ಇತ್ಯಾರ್ಥಗೊಳಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಶಿವಣ್ಣ ತಿಳಿಸಿದರು.
ನಗರದ ನೂತನ ನ್ಯಾಯಾಲಯದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದಂತೆ ರಾಜ್ಯಾಧ್ಯಂತ ಬೃಹತ್ ಲೋಕ್ ಅದಾಲತ್ ಅನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನೊಳಗೊಂಡAತೆ ಎಲ್ಲಾ ನ್ಯಾಯಾಲಯಗಳಲ್ಲೂ ಕೂಡ ಬೃಹತ್ ಲೋಕ್ ಆದಾಲತ್ ನಡೆಸಲಾಯಿತು. ಜಿಲ್ಲೆಯಲ್ಲಿ ಒಟ್ಟು ೪೨ ನ್ಯಾಯಾಲಯ ಒಳಗೊಂಡAತೆ ೭೨ ಸಾವಿರದ ೮೮೧ ಪ್ರಕರಣಗಳು ಬಾಕಿ ಉಳಿದಿದ್ದು, ಇದರಲ್ಲಿ ೧೦ ಸಾವಿರದ ೩೮೭ ಪ್ರಕರಣಗಳನ್ನು ಗುರುತಿಸಲಾಗಿದೆ. ಶನಿವಾರದಂದು ಬೆಳಗಿನಿಂದ ಮದ್ಯಾಹ್ನ ೩ ಗಂಟೆ ಅವಧಿಯವರೆಗೂ ವಿವಿಧ ರೀತಿಯ ೩ ಸಾವಿರಕ್ಕೂ ಹೆಚ್ಚು ಪ್ರಕಣಗಳು ಇತ್ಯಾರ್ಥವಾಗಿದ್ದು, ರಾಜೀ ಪ್ರಕ್ರಿಯೇ ಮೂಲಕ ಇತ್ಯಾರ್ಥವಾಗುವ ಎಲ್ಲಾ ಕೇಸುಗಳನ್ನು ಈಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ ಎಂದರು. ಲೋಕ್ ಅದಾಲತ್ ಪ್ರಗತಿ ನೋಡಿ ಮುಂದಿನ ದಿವಸಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪ್ರಕರಣ ಇತ್ಯಾರ್ಥಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್ನಿಂದ ಮೇಲಾಧಿಕಾರಿಗಳು ತೀರ್ಮಾನಿಸಲಿದ್ದಾರೆ. ಇಷ್ಟೊಂದು ಪ್ರಕರಣ ಇತ್ಯಾರ್ಥಗೊಂಡಿರುವುದು ಮಾರ್ಚ್ ತಿಂಗಳ ಹೆಗ್ಗಳಿಕೆಯಾಗಿದೆ ಎಂದು ಸಂತೋಷವ್ಯಕ್ತಪಡಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಜೆ.ಪಿ. ಶೇಖರ್ ಮಾತನಾಡಿ, ಇಂದು ಅಣ್ಣ-ತಮ್ಮಂದಿರಲ್ಲ, ಅಕ್ಕ-ತಂಗಿಯರು ಸೇರಿದಂತೆ ಎಲ್ಲಾ ಬಾಂಧ್ಯವ್ಯಗಳು ಹಾಳಾಗುತ್ತಿದೆ. ಲೋಕ್ ಅದಾಲತ್ ಮೂಲಕ ರಾಜಿ ಮಾಡಿಕೊಳ್ಳುವ ಮೂಲಕ ರಕ್ತ ಸಂಬAಧಗಳು ಉಳಿದುಕೊಂಡು ಕುಟುಂಬದ ಜೊತೆ ಅನ್ಯುನ್ಯವಾಗಿರುತ್ತಾರೆ. ಎಷ್ಟು ಜನ ಸಾಲವನ್ನು ಬ್ಯಾಂಕಿನಲ್ಲಿ ತೆಗೆದುಕೊಂಡು ೫ ಲಕ್ಷಕ್ಕೆ ೨೦ ಲಕ್ಷ ಬಡ್ಡಿ ಆಗಿರುತ್ತದೆ. ಲೋಕ್ ಅದಾಲತ್ ನಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಾಲ ಪಡೆದವರ ನಡುವೆ ಮಾತುಕಥೆ ನಡೆಸಿ ಹಣ ಕೊಡಲು ನಿಗಧಿ ಮಾಡಲಾಗುತ್ತದೆ ಎಂದರು. ಮೋಟರ್ ಆಕ್ಟ್ ಪ್ರಕಾರ ರಾಜಿ ಮಾಡಿ ತಕ್ಷಣ ಪರಿಹಾರ ಸಿಗುವಾಗೆ ಮಾಡಲಾಗುತ್ತದೆ. ರಾಜಿ ಮೂಲಕ ಉತ್ತಮ ವಾತವರಣ ನಿರ್ಮಾಣ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಕೀಲರು ಕೂಡ ಸಹಕಾರ ಕೊಡುತ್ತಾ ಬಂದಿರುವುದಾಗಿ ಹೇಳಿದರು.
ಇದೆ ವೇಳೆ ಹಿರಿಯ ಸಿವಿಲ್ ನ್ಯಾಯಧೀಶ ಬಿ.ಕೆ. ರವಿಕಾಂತ್ ಇತರರು ಪಾಲ್ಗೊಂಡಿದ್ದರು.
