ಹಾಸನ: ಅಂತರ ಜಿಲ್ಲಾ ಸರಣಿ ಮನೆಗಳ್ಳತನ ಮಾಡುತಿದ್ದ ನಾಲ್ಕು ಜನರನ್ನು ವಶಪಡಿಸಿಕೊಂಡು ಅವರಿಂದ ೩೧ ಲಕ್ಷ ರೂಗಳ ಬೆಲೆ ಬಾಳು ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ ೧ ಲಕ್ಷ ರೂಗಳ ನಗದು ಮತ್ತು ಒಂದು ದ್ವಿ-ಚಕ್ರ ವಾಹನವನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಮಾಹಿತಿ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ
ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಕಾರೇಹಳ್ಳಿ ತಾಂಡ್ಯ ಗ್ರಾಮದ
ನವೀನ್ ನಾಯ್ಕ್ ಎಂಬುವರು ೨೦೨೧ ಫೆಬ್ರವರಿ ೧೪ ರಂದು ತನ್ನ ಕುಟುಂಬದೊಂದಿಗೆ ಬೆಳಗಿನ ಜಾವ ೨ ಗಂಟೆಯಲ್ಲಿ
ತಮ್ಮ ಮನೆಗೆ ಬೀಗ ಹಾಕಿಕೊಂಡು ಕಡೂರು ತಾಲೂಕು ಬ್ಯಾಳದಾಳು ಗ್ರಾಮಕ್ಕೆ ಪ್ರಯಾಣ ಮಾಡಿದ್ದರು. ಮೂರು
ದಿವಸ ನಂತರ ಮನೆಗೆ ವಾಪಸ್ ಬಂದಾಗ ಮನೆಯ ಹಿಂದಿನ ಬಾಗಿಲು ಜಖಂಗೊಂಡು ತೆರೆದಿತ್ತು. ಮನೆಯ ಒಳಗೆ ಬೀರುವಿನಲ್ಲಿದ್ದ
ತಲಾ ೮ ಗ್ರಾಂ ತೂಕ ಚಿನ್ನದ ೨ ಜೊತೆ ಓಲೆಗಳು, ತಲಾ ೬ ಗ್ರಾಂ ತೂಕದ ೨ ಜೊತೆ ಚಿನ್ನದ ಓಲೆಗಳು, ೩ ಗ್ರಾಂ
ತೂಕದ ಒಂದು ಚಿನ್ನದ ಉಂಗುರ, ೬ ಗ್ರಾಂ ತೂಕದ ಒಂದು ಚಿನ್ನದ ಉಂಗುರ, ೮ ಗ್ರಾಂ ತೂಕದ ಒಂದು ಜೊತೆ ಚಿನ್ನದ
ಹ್ಯಾಗಿಂಗ್ಸ್ ಆಭರಣ ಸೇರಿ ಒಟ್ಟು ೧ ಲಕ್ಷದ ೪೫ ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋಗಿದ್ದರು.
ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಿ ತನಿಖೆ ಕೈಗೊಂಡಾಗ ಮಾರ್ಚ್ ೬ ರಂದು ಚಿತ್ರದುರ್ಗ ಜಿಲ್ಲೆಯ
ಹೊಸದುರ್ಗ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ಬಂಧಿಸಲಾಗಿದೆ. ಮೊದಲನೆ ಆರೋಪಿಯಾಗಿ ಚಿತ್ರದುರ್ಗ ಜಿಲ್ಲೆಯ
ಕೊರಚರಹಟ್ಟಿ ಗ್ರಾಮದ ಕೂಲಿ ಕೆಲಸ ಮಾಡುವ ಗವಿರಾಜ ೪೦ ವರ್ಷ, ಎರಡನೇ ಆರೋಪಿ ಇದೆ ಜಿಲ್ಲೆ ಗ್ರಾಮದ
ಕೂಲಿ ಕೆಲಸ ಮಾಡುವ ರಂಗನಾಥ್ ೪೩ ವರ್ಷ, ಮೂರನೇ ಆರೋಪಿಯಾಗಿ ಇದೆ ಗ್ರಾಮದ ಲೋಕೇಶ್ ೫೦ ವರ್ಷ ಹಾಗೂ
ನಾಲ್ಕನೆ ಆರೋಪಿಯಾಗಿ ಕೂಲಿ ಕೆಲಸ ಮಾಡುವ ವೆಂಕಟೇಶ್ ೩೮ ವರ್ಷ ಎಂಬುವರೆ ಪೊಲೀಸರ ಅತಿಥಿಯಾಗಿ ಸೆರೆಗೊಂಡವರು.
ವಿಚಾರಣೆ ಮಾಡಿದಾಗ ಕಳ್ಳತನದ ಬಗ್ಗೆ ಸತ್ಯಾಂಶ ಹೊರ ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ
ಮಾಡಿದ್ದು, ಹಾಸನ ಜಿಲ್ಲೆಯಲ್ಲಿ ೧೨ ಪ್ರಕರಣ, ಬಳ್ಳಾರಿ ಜಿಲ್ಲೆಯ ೧ ಪ್ರಕರಣ, ಚಿಕ್ಕಮಗಳೂರು ಜಿಲ್ಲೆಯ
೧ ಪ್ರಕರಣ ಸೇರಿ ಒಟ್ಟು ೧೪ ಪ್ರಕರಣದಲ್ಲಿ ಆರೋಪಿಗಳಿಂದ ೩೦ ಲಕ್ಷದ ೫೦ ಸಾ"ರದ ಚಿನ್ನ ಮತ್ತು
ಬೆಳ್ಳಿ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಹಾಸನ ಪೋಲೀಸರವರ ವಶದಲ್ಲಿ ಅಂತರ ಜಿಲ್ಲಾ ಸರಣಿ ಮನೆಗಳ್ಳತನ ಅರೋಪಿಗಳು
ಪ್ರಕರಣ ಭೇದಿಸುವಲ್ಲಿ ಶ್ರಮವಹಿಸಿದ ಅರಸೀಕೆರೆ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ನಾಗೇಶ್, ಅರಸೀಕೆರೆ ಗ್ರಾಮಾಂತರ ವೃತ್ತ ವೃತ್ತ ನಿರೀಕ್ಷಕರಾದ ವಸಂತ ಕೆ.ಎಂ. ಬಾಣಾವರ ಠಾಣೆಯ ಪಿ.ಎಸ್.ಐ ಅರುಣ್, ಸಿಬ್ಬಂದಿಗಳಾದ ಹೆಚ್. ಹಿರಾಸಿಂಗ್, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ, ನಂಜುಂಡೇಗೌಡ ಬಾಣಾವರ ಪೊಲೀಸ್ ಠಾಣೆ, ಲೋಕೇಶ, ಗಂಡಸಿ ಪೊಲೀಸ್ ಠಾಣೆ, ನಾಗೇಂದ್ರ .ಎ.ಎಸ್, ಬಾಣಾವರ ಪೊಲೀಸ್ ಠಾಣೆ, ಕೇಶವಮೂರ್ತಿ, ಅರಸೀಕೆರೆ ಗ್ರಾಮಾಂತರ ವೃತ್ತ ಕಛೇರಿ, ಮಧು, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ, ಹೇಮಂತ, ಪುಟ್ಟಸ್ವಾಮಿ, ಹರೀಶ್, ನಾಗರಾಜ ನಾಯ್ಕ, ಆರ್, ಐ.ಪಿ.ಎಸ್ ರವರು ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿ ಸ್ಥಳದಲ್ಲೆ ನೀಡಿದರು. ಇದೆ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ಇತರರು ಉಪಸ್ಥಿತರಿದ್ದರು.