ರಮೇಶ್ ಜಾರಕಿಹೊಳಿ ವಿರುದ್ಧ ಹಾಸನದಲ್ಲಿ ಟೈರಿಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಪ್ರತಿಭಟನೆ

ಹಾಸನ: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಅನಾಗರೀಕ ರೀತಿ ಮಾತನಾಡುತ್ತಿರುವ ಬಿಜೆಪಿ ಪಕ್ಷದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಹಾಸನದಲ್ಲಿ ಕಾಂಗ್ರೆಸ್ ಕಾಂರ್ಯಕರ್ತರು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.


        ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ನಗರದ ಜಿಪಂ ಕಛೇರಿ ಮುಂದೆ ರಸ್ತೆವರೆಗೂ ಬಂದು ವಾಪಸ್ ಕಾಂಗ್ರೆಸ್ ಕಛೇರಿ ಮುಂದೆ ಬಂದ ಅವರು, ರಸ್ತೆ ಮಧ್ಯೆ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದರು. ಸಿಡಿ ಪ್ರಕರಣದಲ್ಲಿ ಕೇಸು ದಾಖಲಾದರೂ ಪೊಲೀಸ್ ಬಂಧನಕ್ಕೆ ಒಳಗಾಗದೇ ನಿರ್ಭಿತವಾಗಿ, ರಾಜರೋಷವಾಗಿ ಹೇಳಿಕೆ ನೀಡುತ್ತಿರುವ ಅನಾಗರೀಕ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದರು. ರಮೇಶ್ ಜಾರಕಿಹೊಳಿ ರವರೆಡ ನೀವೆನು ದೊಡ್ಡ ಸಾಧನೆ ಮಾಡಿರುವುದಿಲ್ಲ. ಆದರೇ ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಮೇಲೆ ಪ್ರತಿನಿತ್ಯ ಇಲ್ಲ ಸಲ್ಲದ ಆರೋಪ ಮಾಡುವುದಕ್ಕೆ ಎಂದು ಕಿಡಿಕಾರಿದರು. ವಿಡಿಯೋದಲ್ಲಿ ಇರುವವರು ನೀವೆ ಎಂದು ಸಂತ್ರಸ್ತೆ ಹೇಳುತ್ತಿದ್ದು, ನಿಮ್ಮಿಂದ ಶೋಷಣೆಗೆ ಒಳಗಾಗಿರುವವರಿಗೆ ಸಹಾಯಸ್ತ ಕೇಳಿದಾಗ ವಿಚಾರಿಸಿ ರಕ್ಷಣೆ ನೀಡುವುದು ಧರ್ಮ. ಅಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲು ಹೊರಟಿದೆ. ಈಗ ಆ ಮಹಿಳೆಯೇ ರಕ್ಷಣೆ ಕೇಳಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಬಂಧಿಸದೇ ನಿಮ್ಮನ್ನು ರಾಜರೋಷವಾಗಿ ತಿರುಗಲು ಬಿಟ್ಟಿದಾರೆ. ಜೊತೆಗೆ ಎಲುಬು ಇಲ್ಲದ ನಾಲಿಗೆಯಲ್ಲಿ ನಾಮ್ಮ ನಾಯಕರ ಬಗ್ಗೆ ಇಲ್ಲ ಸಲ್ಲದ ಹಗುರವಾದ ಮಾತನ್ನು ಆಡುವುದನ್ನು ಬಿಟ್ಟು ಹೆಣ್ಣು ಮಗಳಿಗೆ ನ್ಯಾಯ ಕೊಡುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು. ಇನ್ನೆರಡು ದಿನಗಳಲ್ಲಿ ಬಹಿರಂಗವಾಗಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಪರ ಕ್ಷಮೆ ಕೇಳದಿದ್ದರೇ ಮುಂದಿನ ದಿವಸಗಳಲ್ಲಿ ಹಾಸನ ಜಿಲ್ಲೆಯಿಂದ ನೂರಾರು ಜನ ಸಂಖ್ಯೆಯಲ್ಲಿ ನಿಮ್ಮ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

       ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘು, ಎನ್.ಎಸ್.ಯು.ಐ.ನ ರಂಜಿತ್, ಶಿವಕುಮಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post