ಬೇಡವಾದ ವಿಚಾರಗಳಿಗೆ ಜೆಡಿಎಸ್ ಪ್ರತಿಭಟನೆ, ಶಾಸಕ ಹೆಚ್.ಕೆ. ಕುಮಾರಸ್ವಾಮಿ ಪ್ರಯತ್ನ ಮಾಡಿದ್ರೆ ನಾವು ಹೋರಾಟಕ್ಕೆ ಸಿದ್ಧ, ದೇರಾಜೇಗೌಡ

ಹಾಸನ: ತಾಲೂಕಿನ ಕಟ್ಟಾಯ ಹೋಬಳಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮೀಸಲಾತಿ ವಿಚಾರವಾಗಿ ಬೇಡವಾದ ವಿಚಾರಗಳಿಗೆ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಲಾಗುತ್ತಿದ್ದು, ಈ ವಿಚಾರವಾಗಿ ಶಾಸಕ ಹೆಚ್.ಕೆ. ಕುಮಾರಸ್ವಾಮಿರವರು ಈ ನಿಟ್ಟಿನಲ್ಲಿ ಅರ್ಥವಿಲ್ಲದ ಪ್ರಯತ್ನ ಮಾಡಿದರೇ ನಾವು ಕೂಡ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಎಚ್ಚರಿಸಿದರು.



      ಕಟ್ಟಾಯ ಹೋಬಳಿಯ ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಸಂಬAಧಪಟ್ಟAತೆ ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ದೂರಿ ಜೆ.ಡಿ.ಎಸ್.ನವರು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಹಾಸನ ತಾಲೂಕು, ಕಟ್ಟಾಯ ಹೋಬಳಿಯ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಮೀಸಲಾತಿ ವಿಚಾರವಾಗಿ ಪ್ರತಿಭಟನೆ ಮಾಡಿದ್ದು, ಹಾಲಿ ಕಟ್ಟಾಯ ಹೋಬಳಿಯಲ್ಲಿ ಒಟ್ಟು ೭ ಗ್ರಾಮ ಪಂಚಾಯಿತಿಗಳಿರುತ್ತವೆ. ಈ ಪೈಕಿ ೩ ಗ್ರಾಮ ಪಂಚಾಯಿತಿಗಳಿಗೆ ಶಂಕರನಹಳ್ಳಿ, ಶೆಟ್ಟಿಹಳ್ಳಿ ಮತ್ತು ಕಟ್ಟಾಯ ಒಳಗೊಂಡAತೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ಮತ್ತು ಗೊರೂರು, ಕಾರ್ಲೆ ಮತ್ತು ಅಂಕಪುರ ಒಳಗೊಂಡAತೆ ಇನ್ನೊಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ನಿಗದಿಪಡಿಸಲಾಗಿದೆ. ಕಟ್ಟಾಯ ಜಿಲ್ಲಾ ಪಂಚಾಯಿತಿಯಲ್ಲಿ ೩೨,೦೦೦ ಕ್ಕೂ ಹೆಚ್ಚು ಮತದಾರರಿದ್ದು, ಈಗಾಗಲೇ ಸರ್ಕಾರದ ವತಿಯಿಂದ ಮಾಡಿರುವ ಮೀಸಲಾತಿಯು ಸಮರ್ಪಕವಾಗಿರುತ್ತದೆ ಒಟ್ಟು ೬ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುತ್ತಾರೆ. ಆದರೆ ಉಳಿದ ಒಂದು ಚನ್ನಂಗಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಕೂಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿದ್ದರೆ ಅನುಕೂಲವಾಗುತ್ತಿತ್ತು ಆದರೆ ಚನ್ನಂಗಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಮೊಸಳೆ ಹೊಸಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಿರುವುದು ತಪ್ಪಾಗಿರುತ್ತದೆ. ಕಟ್ಟಾಯಕ್ಕೆ ಅತಿ ಹೆಚ್ಚು ಅನ್ಯಾಯವಾಗಿರುವುದು ಜೆ.ಡಿ.ಎಸ್‌ನವರಿಂದಲೇ ಹೊರತು ಅನ್ಯ ಪಕ್ಷಗಳಿಂದಲ್ಲ. ಅಷ್ಟಕ್ಕೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕಟ್ಟಾಯ ಹೋಬಳಿಯವರಿಗಿಂತ ಹೊರ ಭಾಗದ ಜನರೇ ಹೆಚ್ಚಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಕಂಡು ಬರುತ್ತದೆ ಎಂದು ದೂರಿದರು.

      ಈ ಹಿಂದೆ ಹಲವು ಬಾರಿ ಜೆ.ಡಿ.ಎಸ್ ನವರು ತಮಗೆ ಬೇಕಾದ ರೀತಿಯಲ್ಲಿ ಕ್ಷೇತ್ರಗಳನ್ನು ವಿಂಗಡಣೆ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದ್ದರು. ಮುಂಬರುವ ಚುನಾವಣೆಗಳಲ್ಲಿ ಎಲ್ಲಿ ನಮ್ಮ ಪಕ್ಷಕ್ಕೆ ಸೋಲುಂಟಾಗುತ್ತದೋ ಎಂಬ ಭ್ರಮೆಯಿಂದ ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಟ್ಟಾಯ ಹೋಬಳಿಯನ್ನು ಉಳಿಸಿ ಎಂದು ಪ್ರತಿಭಟನೆ ಮಾಡುವ ಮೂಲಕ ಗೋಗರೆಯುತ್ತಿರುವ ಜೆ.ಡಿ.ಎಸ್‌ನವರು ಇದೇ ಹೊಬಳಿಯನ್ನು ಹಾಸನ ವಿಧಾನ ಸಭಾ ಕ್ಷೇತ್ರದಿಂದ ಬೇರ್ಪಡಿಸಿ ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ಸೇರಿಸಿದ ಸಂದರ್ಭದಲ್ಲಿಯೂ ಕೂಡ ಇದೇ ರೀತಿ ಪ್ರತಿಭಟನೆ ಮಾಡಿದ್ದರೆ ಇವರ ನ್ಯಾಯಯುತ ಹೋರಾಟವನ್ನು ಒಪ್ಪಿಕೊಳ್ಳಬಹುದಾಗಿತ್ತು. ಕೇವಲ ಅಧಿಕಾರದ ಆಸೆಯಿಂದ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಹೋರಾಡುತ್ತಿರುವುದು ಖಂಡನೀಯವಾಗಿರುತ್ತದೆ. ಒಂದು ವೇಳೆ ಹೋಬಳಿಯ ಜನತೆಗೆ ನ್ಯಾಯ ಕೊಡಿಸಲೇಬೇಕು ಎಂಬ ಆಸೆ ಜೆ.ಡಿ.ಎಸ್‌ನವರಿಗೆ ಇದ್ದಿದ್ದರೆ ಈಗಲೂ ಕಾಲ ಮಿಂಚಿಲ್ಲ ಕಟ್ಟಾಯ ಹೋಬಳಿಯನ್ನು ಹಾಸನ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿಸುವ ಬಗ್ಗೆ ಹೋರಾಟ ಮಾಡಲಿ ಇದಕ್ಕೆ ನಮ್ಮ ಪಕ್ಷ ಕೂಡ ಪಕ್ಷಾತೀತವಾಗಿ ಬೆಂಬಲ ಕೊಡುತ್ತೆವೆ ಎಂದು ಸವಾಲು ಹಾಕಿದರು. ಆದರೆ ನ್ಯಾಯಯುತವಾದ ಹೋರಾಟಕ್ಕೆ ಸಿದ್ಧರಿಲ್ಲದ ಜೆ.ಡಿ.ಎಸ್‌ನವರು ವೃಥ ಬೇಡದ ವಿಚಾರಗಳಿಗೆ ನೆಪಮಾಡಿಕೊಂಡು ಪ್ರತಿಭಟನೆ ಮಾಡುವುದು ತಮ್ಮ ವೈಯಕ್ತಿಕ ಲಾಭ ಮತ್ತು ಹಿತಸಕ್ತಿಗಾಗಿಯೇ ಹೊರತು ಹೊಬಳಿಯ ಜನತೆಯ ಹಿತದೃಷ್ಟಿಯಿಂದ ಮಾಡುವ ಹೋರಾಟಗಳಾಗಿರುವುದಿಲ್ಲ ಎಂದು ಕಿಡಿಕಾರಿದರು. ಹಾಲಿ ೧೩ ವರ್ಷಗಳಿಂದ ಶಾಸಕರಾಗಿರುವ ಹೆಚ್.ಕೆ. ಕುಮಾರಸ್ವಾಮಿಯವರು ಕೂಡ ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ಮಾಡಿದಲ್ಲಿ ನಾವು ಕೂಡ ಒಕ್ಕೊರಲಿನ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದರು. 

        ಪತ್ರಿಕಾಗೋಷ್ಠಿಯಲ್ಲಿ ಶಂಕರನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಸದಸ್ಯರಾದ ಕುಮಾರಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಗೆ ವಾಳ್ ದೇವಪ್ಪ, ವಕೀಲರಾದ ಲೋಹಿತ್, ಗೊರೂರಿನ ಸ್ವಾಮಿಗೌಡ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post