ಹಾಸನ: ಮೂಲ ನಕ್ಷೆಗೆ ಅನುಗುಣವಾಗಿ ನಿಯಮ ಬದ್ಧ ಕಾಮಗಾರಿ ನಡೆಸದೇ ಸುಳ್ಳು ದಾಖಲೆ ಸೃಷ್ಠಿಸಿ ಸರಕಾರದ ಅನುದಾನ ಪಡೆದು ದುರ್ಬಳಿಕೆ ಮಾಡಿಕೊಂಡಿದ್ದು, ನ್ಯಾಯಯುತವಾಗಿ ಸಮುದಾಯಭವನವನ್ನು ಪಡೆಯಲು ನಾನು ಕಾನೂನು ರೀತಿ ಹೋರಾಟವನ್ನು ಮುಂದುವರೆಸುವುದಾಗಿ ಫ್ರಾನ್ಸಿಸ್ ಕ್ಸೇವಿಯರ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರದಂದು ಮತನಾಡಿದ ಅವರು, ಹಾಸನ ನಗರದ ಹೊಳೆನರಸೀಪುರ ರಸ್ತೆಯಲ್ಲಿರುವ ಸಂತ ಅಂತೋಣಿ ಯವರ ಚರ್ಚಿನ ಫಾದರ್ ರೊನಾಲ್ಡ್ ಕರ್ಡೋಜಾ ಹಾಗೂ ಸಂಬAಧ ಪಟ್ಟ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಅನುದಾನ ಪಡೆಯುವ ದುರುದ್ದೇಶದಿಂದ ಚರ್ಚ್ ಹಾಲ್ ಮೂಲ ದಾಖಲೆಗಳನ್ನೇ (ಸಮುದಾಯ ಭವನ) ತಿದ್ದು ಪಡಿ ಮಾಡಿ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಅನುದಾನ ಪಡೆದು ಉದ್ದೇಶಿತ ಮತ್ತು ಮೂಲ ನಕ್ಷೆಗೆ ಅನುಗುಣವಾಗಿ ನಿಯಮಬದ್ಧವಾಗಿ ಕಾಮಗಾರಿ ನಡೆಸದೆ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರವಾಘಿ ಆರೋಪಿಸಿದರು. ಈ ಪ್ರಕರಣಕ್ಕೆ ಸಂಬAಧಿಸಿ ಜಿಲ್ಲಾ ನ್ಯಾಯಾಲಯ ನಾನು ನೀಡಿರುವ ಖಾಸಗಿ ದೂರಿನ ಮೇರೆಗೆ ಹಾಸನದ ಭ್ರಷ್ಟಚಾರ ನಿಗ್ರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಚರ್ಚಿನ ಫಾದರ್ ರೊನಾಲ್ಡ್ ಕರ್ಡೂಜ ಮತ್ತು ಸಂಬAಧಪಟ್ಟ ಅಧಿಕಾರಿ ಶಾಮೀಲಾಗಿ ಚರ್ಚ್ ಹಾಲ್ ಎಂಬ ನಾಮಫಲಕವನ್ನು ತಿದ್ದಿ ಕೇವಲ ಚರ್ಚ್ ಎಂದು ಬಿಂಬಿಸುವಾಗೆ ಬದಲಾಯಿಸಿದ್ದಾರೆ. ಸುಸ್ಥಿತಿಯಲ್ಲಿರುವ ಚರ್ಚ್ ಹಾಲ್ ಕಟ್ಟಡವನ್ನು ಬಿರುಕು ಬಿಟ್ಟಿದೆ ಎಂದು ತೋರಿಸಲು ಫೋಟೋ ಶಾಪ್ ಮೂಲಕ ಬಿರುಕನ್ನು ಸೃಷ್ಟಿ ಮಾಡಿರುವುದಕ್ಕೆ ಸಾಕ್ಷಿಯಾಗಿರುವ ಫೋಟೋ ನಕಲಿ ಮಾಡಿಸಿದರು. ಕಟ್ಟಡಕ್ಕೆ ನೂರು ವರ್ಷ ದಾಟಿದ್ದರೆ ೫೦ ಲಕ್ಷ ರೂ.ಗಳ ಅನುದಾನ ಸಿಗುತ್ತದೆ ಎಂಬ ಸರ್ಕಾರದ ಆದೇಶ ಮನಗಂಡ ಫಾದರ್ ರವರು ೧೯೬೦ ರಲ್ಲಿ ನಿರ್ಮಿಸಿದ ಕಟ್ಟಡವನ್ನು ನೂರು ವರ್ಷ ಇತಿಹಾಸ ತೋರಿಸುವ ಸಲುವಾಗಿ ಶಿಲಾನ್ಯಾಸ ಕಲ್ಲನ್ನು ೧೯೦೦ ಎಂದು ತಿದ್ದಿ ಫೋಟೋ ತೆಗೆದು ಸರ್ಕಾರಕ್ಕೆ ನೀಡಿ ಸಂಪೂರ್ಣ ೫೦ ಲಕ್ಷ ರೂ.ಗಳ ಅನುದಾನ ಪಡೆದಿದ್ದಾರೆ. ಇಂಜಿನೀಯರ್ ರವರು ಚರ್ಚ್ ನವೀಕರಣಕ್ಕೆ ನೀಡಿರುವ ಅಂದಾಜು ಪಟ್ಟಿ ಮತ್ತು ನಕ್ಷೆ ರೂ ೧ ಕೋಟಿ ೪೦ ಲಕ್ಷ. ಇಂಜಿನೀಯರ್ ರವರು ಸರ್ಕಾರಕ್ಕೆ ನೀಡಿದ ಮೊದಲ ಪ್ರಗತಿ ವರದಿಯಲ್ಲಿ ೩೪ ಲಕ್ಷ ರೂಪಾಯಿಗಳ ಖರ್ಚಿನ ವಿವರಗಳನ್ನು ನೀಡಲಾಗಿದ್ದು, ಆದರೆ ಅದರಂತೆ ಕಾಮಗಾರಿ ನಡೆದಿರುವುದಿಲ್ಲ. ಅನುದಾನ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಫಾದರ್ ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ. ಸರ್ಕಾರದಿಂದ ಪಡೆದ ಅನುದಾನ ಮೂಲ ಅಂದಾಜು ಮತ್ತು ನಕ್ಷೆಯಲ್ಲಿ ತೋರಿಸಿರುವಂತ ನಿಯಮಾನುಸಾರ ಉಪಯೋಗಿಸದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇಲಾಖೆಯ ಅಧಿಕಾರಿಗಳಿಗೆ ಅನುದಾನದ ಬಗ್ಗೆ ಹಾಗೂ ಅದರ ದುರ್ಬಳಕೆ ಬಗ್ಗೆ ದೂರು ನೀಡಿ ನನಗೆ ನ್ಯಾಯ ಒದಗಿಸಿ ಕೊಡಿ ಎಂದು ಮನವಿ ಮಾಡಲಾಗಿತ್ತು. ಮಾರ್ಚ್ ತಿಂಗಳಲ್ಲಿ ಮಾನ್ಯ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡುವ ಮೂಲಕ ತನಿಖೆ ನಡೆಸಲು ಪ್ರಾರಂಭಿಸಿ, ನಂತರ ದೂರನ್ನೂ ವಾಪಸ್ ಪಡೆಯುವಂತೆ ಒತ್ತಡವನ್ನು ಮತ್ತು ಆಮೀಷವನ್ನು ನೀಡಿದರು. ಇದರ ವಿಷಯವಾಗಿ ಜಿಲ್ಲಾಧಿಕಾರಿ ಯವರಿಗೆ ದೂರನ್ನೂ ನೀಡಿದ್ದೇನೆ. ಈ ವಿಷಯವಾಗಿ ನಾನು ಹೈ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ, ಅಲ್ಪ ಸಂಖ್ಯಾತರ ನಿರ್ದೇಶನಾಲಯಕ್ಕೆ, ಹಾಗೂ ಹಾಸನದ ಭ್ರಷ್ಟಚಾರ ನಿಗ್ರಹಕ್ಕೆ ದೂರನ್ನೂ ನೀಡಲಾಗಿತ್ತು. ಹಾಸನದ ನ್ಯಾಯಾಲಯದಲ್ಲಿ ನ್ಯಾಯಬದ್ಧವಾಗಿ ಮುಂದುವರೆಯಿರಿ ಎಂದಾಗ ಸೆಪ್ಟೆಂಬರ್ ತಿಂಗಳಲ್ಲಿ ಫಾದರ್ ರವರು ಕೆಲವು ಮುಗ್ಧ ಜನರಿಗೆ ಸುಳ್ಳು ಹೇಳಿ ಒಗ್ಗೂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನನ್ನ ವಿರುದ್ಧ ಪ್ರತಿಭಟನೆ ನಡೆಸಿದರು. ತನಿಖೆಯ ದಾರಿಯನ್ನು ದಿಕ್ಕು ತಪ್ಪಿಸಲು ಅನೇಕ ಪ್ರಯತ್ನಗಳನ್ನು ಫಾದರ್ ನಡೆಸಿದ್ದಾರೆ. ಇದಕ್ಕೆಲ್ಲ ಹೆದರದ ನಾನು ಸಮುದಾಯ ಭವನವನ್ನು ಪಡೆಯಲು ಹಾಗೂ ಅನ್ಯಾಯದ ವಿರುದ್ಧ ನ್ಯಾಯಬದ್ಧವಾಗಿ ಕಾನೂನು ರೀತಿಯಲ್ಲಿ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆರೋಮ್ ಲೋಬೋ, ಹೆಜಿನ್ ಕ್ವಾಡ್ರೆಸ್ ಇತರರು ಉಪಸ್ಥಿತರಿದ್ದರು.