ಹಾಸನ: ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯದಂತಹ ಪ್ರಕರಣ ಹೆಚ್ಚು ನಡೆಯುತ್ತಿರುವುದನ್ನು ನೋಡಿದರೇ ಸಮಾಜದ ವ್ಯವಸ್ಥೆ ಯಾವ ಕಡೆ ಸಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ಬೇಸರವ್ಯಕ್ತಪಡಿಸಿದರು.
ನಗರದ ಸ್ವಾಭಿಮಾನ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ, ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸೇವಾ ಸಮಿತಿ, ಶಿಕ್ಷಣ ಇಲಾಖೆ, ಹಾಸನ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣ ಸಂಯೋಜಕರು, ಬಿ.ಆರ್.ಪಿಗಳಿಗೆ ಆರ್.ಟಿ.ಇ., ಬಾಲನ್ಯಾಯ ಕಾಯ್ದೆ, ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೋಕ್ಸೋ ಕಾಯಿದೆಗೆ ಸಂಬAಧ ಪಟ್ಟಂತೆ ಹೆಚ್ಚು ಆಗುತ್ತಿದ್ದು, ಕೇವಲ ಮೂರು ತಿಂಗಳಲ್ಲೆ 30 ರಿಂದ 40 ಪ್ರಕರಣಗಳು ದಾಖಲಾಗಿದೆ. ಗೊತ್ತಾಗಿರುವುದು ಇಷ್ಟು ಪ್ರಕರಣ ಗೊತ್ತಾಗದಾಗೆ ಇನ್ನೆಷ್ಟು ಪ್ರಕರಣ ಇರಬಹುದು. ಕಳೆದ ಎರಡು ದಿವಸಗಳ ಹಿಂದೆ ಹೊಸ ಬಸ್ ನಿಲ್ದಾಣದಲ್ಲಿ 6 ವರ್ಷದ ಹೆಣ್ಣು ಮಗು ತನ್ನ ತಂದೆ-ತಾಯಿ ಜೊತೆ ಮಲಗಿದ್ದಾಗ ಮಗು ಮೇಲೆ ಅತ್ಯಾಚಾರ ನಡೆದಿದ್ದು, ಇದೊಂದು ಹೀನವಾದಂತಹ ಕೃತ್ಯ ಸಮಾಜದಲ್ಲಿ ನಡೆದಿದೆ ಎಂದು ಬೇಸರವ್ಯಕ್ತಪಡಿಸಿದರು. ಸರಕಾರದಿಂದ ಜಾಗೃತಿ ಮೂಡಿಸುತ್ತಿದ್ದರೂ ಇಂತಹ ದುಶಕೃತ್ಯಗಳು ನಡೆಯುತ್ತಿರುವುದು ನೋಡಿದರೇ ಸಮಾಜದ ವ್ಯವಸ್ಥೆ ಯಾವಕಡೆ ಹೋಗುತ್ತಿದೆ, ನಮ್ಮ ಸಂಸ್ಕೃತಿ ಎತ್ತ ಕಡ ಸಾಗುತ್ತಿದೆ ಎಂಬುದರ ಬಗ್ಗೆ ಚರ್ಚಿಸಬೇಕಾಗಿದೆ. ಮನುಷ್ಯನ ಯೋಚನೆಗಳು ಸರಿಯಾಗಿದ್ದರೇ ನಮ್ಮ ಕೆಲಸಗಳು ಕೂಡ ಸರಿಯಾಗಿರುತ್ತದೆ ಎಂದು ಕಿವಿಮಾತು ಹೇಳಿದರು. ಸಮಾಜದಲ್ಲಿ ಬಹಳಷ್ಟು ಜನರು ನಿರುದ್ಯೋಗಿಗಳಿದ್ದು, ನಮ್ಮಲ್ಲಿ ಬಡ ಜನರು ಬಹಳಷ್ಟು ಜನರು ಇದ್ದಾರೆ. ಇನ್ನು ಅನೇಕರೂ ಶಿಕ್ಷಣ ಪಡೆದುಕೊಂಡಿರುವುದಿಲ್ಲ. ಇಂತಹ ಹೇಯಾ ಕೃತ್ಯಗಳಲ್ಲಿ ಬಾಗಿಯಾಗಬೇಕು ಎಂದು ಹೇಳುತ್ತಾರಾ? ಪೋಕ್ಸೋ ಕಾಯ್ದೆ ಎಂದರೇ ಅದೊಂದು ವಿಶೇಷ ಕಾಯಿದೆಯಾಗಿದೆ ಎಂದು ಹೇಳಿದರು.
ಬಾಲ್ಯ ವಿವಾಹವನ್ನು ಮಾಡಿಸಿದವರು ಮತ್ತು ಮಾಡಿದವರಿಬ್ಬರಿಗೂ ಶಿಕ್ಷೆ ತಪ್ಪಿದಲ್ಲ. ಸಾರ್ವಜನಿಕರಿಗೆ ಮೊದಲೆ ಜಾಗೃತಿ ಮೂಡಿಸುವ ಮೂಲಕ ಬಾಲ್ಯ ವಿವಾಹವನ್ನು ತಡೆಯಬಹುದಾಗಿದೆ ಎಂದರು. ಬಾಲ್ಯ ವಿವಾಹವಾದ ಮೇಲೆ ತಡೆಯವುದು ಕಷ್ಟದ ಕೆಲಸ. ಅಂತವರ ಮೇಲು ಯಾವ ಹಿಂಜರಿಕೆ ಮಾಡದೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು. ಇಂದು ಬಾಲಕಾರ್ಮಿಕರು ಕೂಡ ಅಲ್ಲಲ್ಲಿ ಕಂಡು ಬರುತಿದ್ದು, ಈ ಬಗ್ಗೆ ಎಚ್ಚರಿಕೆವಹಿಸಿ ಸಂಬAಧಪಟ್ಟ ಇಲಾಖೆಗೆ ಮಾಹಿತಿ ನೀಡುವುದರ ಮೂಲಕ ತಡೆಗಟ್ಟಲು ಸಹಕಾರ ನೀಡಬೇಕು. ಬಾಲನ್ಯಾಯ ಕಾಯಿದೆ ಜಾರಿಯಲ್ಲಿದ್ದು, ಕಾನೂನು ವಿರುದ್ಧವಾಗಿ ಇಂತಹ ಪ್ರಕರಣಗಳು ಕಂಡು ಬಂದರೇ ಸುಮ್ಮನೆ ಕೂರದೆ ತಡೆಯುವ ನಿಟ್ಟಿನಲ್ಲಿ ಮುಂದಾಗುವ ಮೂಲಕ ಇಲಾಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಬಿ.ಆರ್.ಪಿ. ನಿಂಗರಾಜು, ಈ.ಸಿ.ಓ. ಸಂಘದ ಅಧ್ಯಕ್ಷರಾದ ರವಿಕುಮಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಕೋಮಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಜೆ. ದಿಲೀಪ್ ಇತರರು ಪಾಲ್ಗೊಂಡಿದ್ದರು.
