ಕಸಾಪ ಚುನಾವಣೆ ಸ್ಥಳ ಬದಲಾವಣೆಗೆ ಗಂಜಲಗೂಡು ಗೋಪಾಲ್ ಮನವಿ

 ಹಾಸನ: ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ದೆ ಮಾಡಲಾಗಿದ್ದು, ಮಾರ್ಚ್ 31ರ ಬುಧವಾರದಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಕಸಾಪ ಚುನಾವಣೆ ನಡೆಯುವ ಸ್ಥಳ ಬದಲಾವಣೆ ಮಾಡುವ ಮೂಲಕ ಮತದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಅಭ್ಯರ್ಥಿ ಹಾಗೂ ಕಸಾಪ ತಾಲೂಕು ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲ್ ಮನವಿ ಮಾಡಿದರು.



       ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡಿ, ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇ.9 ರಂದು ಚುನಾವಣೆ ನಡೆಯಲಿದೆ. ಹಿರಿಯ ಸಾಹಿತಿಗಳು, ಕವಿಗಳು, ಲೇಖಕರು, ಕನ್ನಡಪರ ಹೋರಾಟಗಾರರು, ಪತ್ರಕರ್ತರು, ಉಪನ್ಯಾಸಕರು, ಶಿಕ್ಷಕರು, ಹಿರಿಯ-ಕಿರಿಯ  ಕಸಾಪ ಸದಸ್ಯರ ಸಮ್ಮುಖದಲ್ಲಿ ನಾನು ಮಾರ್ಚ್ 31ರಂದು ಕನ್ನಡ ಸಾಹಿತ್ಯ ಪರಿಷತ್‌ನ ಆವರಣದಲ್ಲಿರುವ ಬುದ್ಧ, ಬಸವ, ಅಂಬೇಡ್ಕರ್ ಮತ್ತು ರಾಷ್ಟçಕವಿ ಕುವೆಂಪು ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದ ನಂತರ ನಾಮಪತ್ರವನ್ನು ಸಲ್ಲಿಕೆ ಮಾಡಲಾಗುವುದು ಎಂದರು. ಜಿಲ್ಲೆಯ ಎಲ್ಲಾ ಕನ್ನಡದ ಮನಸ್ಸುಗಳು ಬೆಂಬಲ ನೀಡುತ್ತಿವೆ. ಕಸಾಪವನ್ನು ಪಾರದರ್ಶಕ ಆಡಳಿತದತ್ತ ಕೊಂಡ್ಯೊಯುವುದು ನನ್ನ ಉದ್ದೇಶ. ಈಗಾಗಲೇ ಕಣದಲ್ಲಿರುವ ಆಕಾಂಕ್ಷಿಗಳು ಅವರ ಪ್ರಚಾರ ಮಾಡುವುದಕ್ಕಿಂತ ಬೇರೆಯವರ ಬಗ್ಗೆ ಟೀಕೆ ಮಾಡುತ್ತಾ  ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಬಗ್ಗೆಯೂ ಕೆಲವೊಬ್ಬರು ಹೋದ ಕಡೆ ಅಪಪ್ರಚಾರ ಮಾಡಿದ್ದಾರೆ. ಆದರೆ  ಅನೇಕ ವರ್ಷಗಳಿಂದ ಕಸಾಪ ಸದಸ್ಯನಾಗಿ ಅನೇಕ ಕಾರ್ಯಕ್ರಮಗಳ ಯಶಸ್ವಿಗೆ ಕಾರಣೀಭೂತವಾಗಿದ್ದೇನೆ. ಹಾಸನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷನಾಗಿ ಕೆಲಸ ಮಾಡಿ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು  ಮಾಡಿದ್ದೇನೆ. ಆದರೆ ಟೀಕೆ ಮಾಡಿಸಿಕೊಳ್ಳುವಂತಹ ಯಾವ ಭ್ರಷ್ಟಾಚಾರವನಾಗಲಿ ಅಥವಾ ಕಸಾಪವನ್ನು ದುರುಪಯೋಗಪಡಿಸಿಕೊಳ್ಳುವ ಕೆಲಸ ಮಾಡಿಲ್ಲ ಎಂಬುವುದನ್ನು ಟೀಕೆ ಮಾಡುವವರಿಗೆ ಸ್ಪಷ್ಟಪಡಿಸುವುದಾಗಿ ಹೇಳಿದರು. 

       ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಎಲ್ಲರ ಬಗ್ಗೆ ನನಗೆ  ಗೌರವವಿದೆ. ಗೋಪಾಲೇಗೌಡ ಅವರಿಗೆ ಏಕೆ ಬೇಕಿತ್ತು ಎಂದು ಕೆಲ ಅಭ್ಯರ್ಥಿಗಳು ಹೇಳುತ್ತಿದ್ದಾರಂತೆ. ಈ ಬಗ್ಗೆ  ಹೆಚ್ಚು ಚರ್ಚೆ ಮಾಡುವುದಿಲ್ಲ. ನನಗೆ ಕಸಪಾ ಸದಸ್ಯರೇ ಕನ್ನಡ ನಾಡು-ನುಡಿ ಸೇವೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು  ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿರುವಾಗ ಈ ರೀತಿಯ ಲಘು ಹೇಳಿಕೆಗಳು ಪರಿಗಣನೆಗೆ ಬರುವುದಿಲ್ಲ. ಟೀಕಿಸುವ ಅಭ್ಯರ್ಥಿಗಳು ಅವರ ಕೆಲಸದ ಬಗ್ಗೆ  ಗಮನ ಹರಿಸಿದರೆ ಒಳ್ಳೆಯದು. ಯಾರು ಅಧ್ಯಕ್ಷರಾಗಬೇಕು ಎನ್ನುವುದನ್ನು ಕಸಾಪ ಸದಸ್ಯರು ನಿರ್ಧರಿಸುತ್ತಾರೆ ಎಂದು ಟಾಂಗ್ ನೀಡಿದರು. ಈ ಹಿಂದೆ ನಿಧನ ಹೊಂದಿದವರ ಪಟ್ಟಿಗೆ ಜೀವಂತವಾದವರನ್ನು ಸೇರಿಸಿ ಮತ ಪಟ್ಟಿಯಿಂದ ತೆಗೆದು ಹಾಕದನ್ನು ನಾನು ಹಠ ಹಿಡಿದು ಸೇರಿಸಿದ್ದೇನೆ ಎಂದು ಜೊತೆಯಲ್ಲೆ ಇದ್ದ ಕಸಾಪ ಮಾಜಿ ಅಧ್ಯಕ್ಷ ಹನುಮಂತೇಗೌಡರ ಹೆಸರು ಸೇರಿಸಿದ ಬಗ್ಗೆ ಹೇಳಿದರು. 

       ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹನುಮಂತೇಗೌಡ ಮಾತನಾಡುತ್ತಾ, ಕಳೆದ ಕಸಾಪ ಚುನಾವಣೆಯಲ್ಲಿ ನನ್ನ ಹೆಸರನ್ನೆ ತೆಗೆದು ಹಾಕಲಾಗಿತ್ತು. ಈಗ ಸೇರಿಸುವ ಕೆಲಸ ಮಾಡಲಾಗಿದೆ. ಪ್ರಸ್ತುತದಲ್ಲಿ ಸೇವೆಗಿಂತ ರಾಜಕೀಯ ಒತ್ತಡ ಹೆಚ್ಚಾಗಿದೆ. ಕಸಾಫ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವ ಗೋಪಾಲ್ ಗೆ ನನ್ನ ವಯಕ್ತಿಕ ಬೆಂಬಲವಿದೆ ಎಂದು ಇದೆ ವೇಳೆ ತಿಳಿಸಿದರು.

     ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಲಾವಿದ ಯಲಗುಂದ ಶಾಂತಕುಮಾರ್, ಹೋರಾಟಗಾರರು ನೇತ್ರಾವತಿ ಬಸವರಾಜು, ಬರಹಗಾರರು ಅರುಣ್ ಕುಮಾರ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post