ಗರ್ಭಕೊರಳ ಕ್ಯಾನ್ಸರ್ ರಕ್ಷಣೆಗಾಗಿ ಹೆಚ್.ಪಿ.ವಿ. ಲಸಿಕಾ ಕಾರ್ಯಕ್ರಮಕ್ಕೆ ಡಾ|| ಸತೀಶ್ ಚಾಲನೆ

 ಗರ್ಭಕೊರಳ ಕ್ಯಾನ್ಸರ್ ನಿಂದ ರಕ್ಷಣೆ

ಹೆಚ್.ಪಿ.ವಿ. ಲಸಿಕಾ ಕಾರ್ಯಕ್ರಮಕ್ಕೆ ಡಾ|| ಸತೀಶ್ ಚಾಲನೆ

ಹಾಸನ: ನಗರದ ಕೆ.ಆರ್. ಪುರಂನಲ್ಲಿರುವ ಮಲ್ನಾಡ್ ನರ್ಸಿಂಗ್ ಹೋಂ ಬಳಿ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಏರ್ಪಡಿಸಲಾಗಿದ್ದ ಗರ್ಭಕೊರಳ ಕ್ಯಾನ್ಸರ್ ನಿಂದ


ರಕ್ಷಣೆಗಾಗಿ ಹೆಚ್.ಪಿ.ವಿ. ಲಸಿಕಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ|\ ಸತೀಶ್ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.

       ನಂತರ ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಮಹಿಳೆಯರು ಗರ್ಭಕೋಶದ ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಇದಕ್ಕೂ ಲಸಿಕೆ ಸಿದ್ಧವಾಗಿ ಈಗಾಗಲೇ ಹಾಕಲಾಗುತ್ತಿದೆ. ಬಡವರಿಗಲ್ಲ ಶ್ರೀಮಂತರು ಕೂಡ ಇಂತಹ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇಂತಹ ಖಾಯಿಲೆಗಳು ಯಾರಿಗಾದರೂ ಬರುಬಹುದಾಗಿದೆ. ಇದನ್ನು ತಡೆಯಲು ಈಗಾಗಲೇ ಲಸಿಕೆಗಳು ಬಂದಿದೆ ಎಂದರು. 15 ರಿಂದ 26 ವರ್ಷದೊಳಗಿನ ಮಹಿಳೆಯರು ವೈದ್ಯರ ಸಲಹೆ ಪಡೆಯುವ ಮೂಲಕ ಗರ್ಭಕೋಶದ ಕ್ಯಾನ್ಸ್ರ್‌ನಿಂದ ದೂರವಿರಲು ಲಸಿಕೆ ಹಾಕಿಸಿಕೊಳ್ಳುವುದರಿಂದ ರಕ್ಷಣೆ ಹೆಚ್ಚು ಇರುತ್ತದೆ. ಈ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿ ಸ್ವಯಂ ಪ್ರೇರಿತವಾಗಿ ಬಂದು ಲಸಿಕೆ ಪಡೆದುಕೊಳ್ಳಬೇಕು. ಮುಂದಿನ ಹಂತದಲ್ಲಿ ಸರಕಾರದಿಂದಲೇ ನೇರವಾಗಿ ಸಿಗುವಂತಾಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಕೊರೋನಾ ಲಸಿಕೆ ಕೂಡ ಲಭ್ಯವಿದ್ದು, ನೋಂದಾವಣಿ ಮಾಡಿಸಿಕೊಂಡು ಪಡೆಯುವ ಮೂಲಕ ಕೊರೋನಾ ಎದುರಿಸುವ ಶಕ್ತಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು. 

      ಇದೆ ವೇಳೆ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ. ಭಾರತೀ ರಾಜಶೇಖರ್ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮಬಾರಿಗೆ ಹಾಸನ ಜಿಲ್ಲೆಯಲ್ಲಿ ಗರ್ಭಕೊರಳ ಕ್ಯಾನ್ಸರ್ ನಂತಹ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಅರಿವು ಮೂಡಿಸಿ ಲಸಿಕೆ ಕೊಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

       ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರ ಸಂಘದ ಉಪಾಧ್ಯಕ್ಷೆ ಡಾ|| ಸಾವಿತ್ರಿ ರವರು ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಭಾರತದಲ್ಲಿ ಪ್ರತಿದಿನ 200 ಮಹಿಳೆಯರು ಗರ್ಭಕೋಶದ ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದು, ಕ್ಯಾನ್ಸರನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಬಹಳ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಭಾರತೀಯ ಮಹಿಳೆಯರಲ್ಲಿ ಪ್ರಮುಖ ಕ್ಯಾನ್ಸರ್ ಇದಾಗಿದ್ದು ಪ್ರತಿ ಗಂಟೆಗೆ 8 ಮಹಿಳೆಯರು ಸಾವನ್ನಪುö್ಪತ್ತಿದ್ದಾರೆ. ಪ್ರತಿ 7 ನಿಮಿಷಕ್ಕೆ ಒಬ್ಬ ಮಹಿಳೆ ಸಾವನ್ನಪುö್ಪತ್ತಿದ್ದು, ಪ್ರತಿವರ್ಷ 1,23 ಲಕ್ಷ ಗರ್ಭಕೊರಳಿನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, 77348 ಪ್ರಕರಣಗಳಲ್ಲಿ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು.

      ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ|| ಸುಧಾ, ಹಿರಿಯ ಸದಸ್ಯೆ ಡಾ|| ರಂಗಲಕ್ಷಿö್ಮ, ಡಾ|| ಹೇಮಲತ, ಕಾರ್ಯದರ್ಶಿ ಡಾ|| ಪ್ರತಿಭಾ ಮನುಪ್ರಕಾಶ್, ಕಸಾಪ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿನಾಕಲಗೂಡು, ಅನನ್ಯ ಟ್ರಸ್ಟ್ ಅಧ್ಯಕ್ಷರಾದ ಕೆ.ಟಿ. ಜಯಶ್ರೀ ಇತರರು ಪಾಲ್ಗೊಂಡಿದ್ದರು. ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರ ಸಂಘದ ಉಪಾಧ್ಯಕ್ಷೆ ಡಾ|| ಸಾವಿತ್ರಿ ರವರು ಸ್ವಾಗತಿಸಿದರು. ಅನಿಷಾ ಪ್ರಾರ್ಥಿಸಿದರು.


Post a Comment

Previous Post Next Post