ನಾಗವರ ಆನೆ ಶಿಬಿರದಲ್ಲಿಂದು ಮಾದ್ಯಮ ಪ್ರತಿನಿಧಿಗಳೊಂದಿಗೆ ಆನೆ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು ಆನೆ ಹಾವಳಿಯಿಂದ ರೈತರ ಬೆಳೆ ಹಾನಿಯನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್ ಸ್ಥಾಪಿಸುವ ಯೋಜನೆಯನ್ನು ರೂಪಿಸಲಾಗಿದೆ . ಈಗಾಗಲೇ ಇದೇ ರೀತಿಯಲ್ಲಿ ರಾಜ್ಯದಲ್ಲಿ ಹಲವು ಭಾಗದಲ್ಲಿ ಪರಿಣಾಮಕಾರಿಯಾಗಿ ಮಾಡಲಾಗಿದೆ ಎಂದು ತಿಳಿಸಿದರು.
ರೈಲ್ವೆ ಕಂಬಿಗಳನ್ನು ಉಪಯೋಗಿಸಿಕೊಂಡು ೨.೪ ಮೀಟರ್ ಎತ್ತರದ ಹಾಗೂ ಅಡ್ಡವಾಗಿ ಎರಡು ಕಂಬಿಗಳನ್ನು ಬಳಸಿಕೊಂಡು ತಡೆಗೋಡೆಯನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಹೇಮಾವತಿ ಹಿನ್ನೀರಿಗೆ ಹೊಂದಿಕೊAಡಿರುವ ನಾಗವರ ಆನೆ ಶಿಬಿರದ ಭಾಗದಲ್ಲಿ ಅತ್ಯಂತ ಕಿರಿದಾದ ನೀರಿನ ಸ್ಥಳವನ್ನು ಬಳಸಿಕೊಂಡು ಕೊಡಗಿನ ಕಟ್ಟೆಪುರ ಅರಣ್ಯ ಭಾಗದಿಂದ ದೊಡ್ಡಬೆಟ್ಟ ಅರಣ್ಯ ಭಾಗಕ್ಕೆ ಬರುವುದರಿಂದ ಈ ಬಾಗದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದರು.
ಸೋಲಾರ್ ಲೈನ್ ಹಾಗೂ ಆನೆ ಕಂದಕಗಳನ್ನು ಮಾಡಲಾಗುತ್ತಿತ್ತು ಆದರೆ ಕಾಲಕ್ರಮೇಣ ನಿರ್ವಹಣೆ ಇಲ್ಲದಿದ್ದರಿಂದ ಪರಿಣಾಮಕಾರಿಯಾಗುತಿರಲ್ಲ ಆದ್ದರಿಂದ ಹೊಸ ಮಾರ್ಗವನ್ನು ಬಳಸಲಾಗಿದೆ ಈ ಯೋಜನೆಯು ಒಂದು ಬಾರಿ ಸ್ಥಾಪನೆ ಮಾಡಿದ ನಂತರ ನಿರ್ವಹಣೆಯ ಅಗತ್ಯ ಇಲ್ಲ ಎಂದು ತಿಳಿಸಿದರು.
ನಾಗವರ ಆನೆ ಶಿಬಿರದ ಹಾಗೂ ಪುರಬೈರೇನಹಳ್ಳಿ ಭಾಗದಲ್ಲಿ ಆನೆ ಹಾವಳಿಯಿಂದ ರೈತರ ಬೆಳೆಗಳ ಹಾನಿ ತಡೆಗಟ್ಟಬಹುದಾಗಿದೆ ಈವರೆಗೆ ಆನೆ ದಾಳಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಬಿಡುಗಡೆಯಾಗಿದೆ ತಾಂತ್ರಿಕ ದೋಷದಿಂದ ಕೆಲವು ರೈತರ ಖಾತೆಗೆ ಹಣ ಜಮೆಯಾಗಿರುವುದಿಲ್ಲ ಎಂದು ಅವರು ಹೇಳಿದರು. ಎ.ಸಿ.ಎಫ್ .ಕೆ. ಹರೀಶ್, ವಲಯ ಅರಣ್ಯದಿಕಾರಿ ವಿನಯ್ ಚಂದ್ರ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
