ಎಷ್ಟು ಪರ್ಸಂಟೇಜ್ ತಿಳಿಯಬೇಕಾದರೇ ಈ ಪ್ರಕರಣವನ್ನು ಸಿ.ಬಿ.ಐಗೆ ಒಪ್ಪಿಸಲಿ: ಹೆಚ್.ಡಿ. ರೇವಣ್ಣನವರಿಗೆ ಜಿ. ದೇವರಾಜೇಗೌಡ ಸವಾಲು

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಮತ್ತು ಅವರ ಮಕ್ಕಳು ಸೇರಿ ಕೋಟ್ಯಾಂತರ ರೂಗಳ ಕಾಮಗಾರಿಗಳಿಗೆ ಎಷ್ಟೆಸ್ಟು ಪರ್ಸಂಟೇಜ್ ತೆಗೆದುಕೊಂಡು ಗುತ್ತಿಗೆ ನೀಡಿರುತ್ತಾರೆ ಬಗ್ಗೆ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೇ ಸತ್ಯಾಂಶ ಹೊರಬರುತ್ತದೆ ಎಂದು ಜಿಲ್ಲಾ ಪಂಚಾಯತ್ ಕೆಡಿಪಿ ಮಾಜಿ ಸದಸ್ಯ ಜಿ. ದೇವರಾಜೇಗೌಡ ಸವಾಲು ಹಾಕಿದರು.

       ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರದಂದು ಮಾತನಾಡಿ, ಬಿ.ಜೆ.ಪಿ.ಸರ್ಕಾರವನ್ನು ಶೇ.೨೫ ಸರ್ಕಾರವೆಂದು ತಮ್ಮ ಹೇಳಿಕೆಯಲ್ಲಿ ವ್ಯಂಗ್ಯವಾಡಿದ್ದು, ಆದರೆ ರೇವಣ್ಣನವರು ಮತ್ತು ಅವರ ಮಕ್ಕಳು ನಾನು ಈಗ ತೋರಿಸುತ್ತಿರುವ ದಾಖಲೆಗಳ ಪ್ರಕಾರ ಕೋಟ್ಯಾಂತರ ರೂಪಾಯಿಗಳ ಕೆಲಸಗಳನ್ನು ಎಷ್ಟು ಪರ್ಸಂಟೇಜ್ ತೆಗೆದುಕೊಂಡು ಗುತ್ತಿಗೆ ನೀಡಿರುತ್ತಾರೆ ಎಂಬುದು ತಿಳಿಯಬೇಕಾದರೆ ಈ ಎಲ್ಲಾ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿಸಿ ಉನ್ನತ ಮಟ್ಟದ ಅಧಿಕಾರಿಗಳು ಅಥವಾ ನ್ಯಾಯಾಂಗ ತನಿಖೆಗೆ ಒಳಪಡಿಸಿದರೆ ಸತ್ಯ ಹೊರ ಬೀಳುತ್ತದೆ. ಹೆಚ್.ಡಿ. ರೇವಣ್ಣನವರು ಅವರ ಹೇಳಿಕೆಯಲ್ಲಿ ಗುತ್ತಿಗೆದಾರರು ಅವರ ಹೆಂಡತಿ ಮಕ್ಕಳ ಒಡವೆಯನ್ನು ಅಡವಿಟ್ಟು ೨೫ ರಿಂದ ೩೦ ಪರ್ಸೆಂಟ್ ಹಣ ಕೊಟ್ಟು ಬಿಲ್ ತರಬೇಕಾಗಿದೆ ಎಂದು ಅಧಿಕಾರಿಗಳ ವಿರುದ್ಧ ದೂರಿದ್ದರು. ಆದರೆ ಈ ಗುತ್ತಿಗೆದಾರರುಗಳು ಇಷ್ಟು ಮೊತ್ತದ ಪರ್ಸಂಟೇಜ್ ಯಾರಿಗೆ ಕೊಟ್ಟಿದ್ದಾರೆ ಏತಕ್ಕಾಗಿ ಕೊಟ್ಟಿದ್ದಾರೆ ಅದನ್ನು ಬಹಿರಂಗ ಪಡಿಸಲಿ ಎಂದ ಅವರು, ಗುತ್ತಿಗೆದಾರರುಗಳು ಶೇ. ೧೦ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಕಳ್ಳ ಬಿಲ್ ಬರೆಸಿಕೊಂಡಿದ್ದು, ಈ ಗುತ್ತಿದಾರರೆಲ್ಲರೂ ಅವರ ಬೆಂಬಲಿಗರಾಗಿರುತ್ತಾರೆ. ಹೆಚ್.ಡಿ. ರೇವಣ್ಣನವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು ೧೧೩೬ ಕೋಟಿ ಕಾಮಗಾರಿಗಳ ಸುಳ್ಳು ಬಿಲ್ಲು ಬರೆಸಿ ಹಣ ಪಾವತಿಸಿರುವ ಬಗ್ಗೆ ನಾನು ಆದಾಯ ತೆರಿಗೆ ಇಲಾಖೆಗೆ ದಾರು ನೀಡಿರುವುದಾಗಿ ಹೇಳಿದರು. ಇವರಿಗೆ ನೈತಿಕತೆ ಇದ್ದರೆ ಈ ಪ್ರಕರಣವನ್ನು ಸಿ.ಬಿ.ಐಗೆ ವಹಿಸಿದರೇ ಇವರನ್ನು ಅವಲಂಬಿಸಿರುವ ಅಧಿಕಾರಿಗಳು ಮತ್ತು ಬೆಂಬಲಿಗರು ಎಷ್ಟು ಜನ ಜೈಲಿಗೆ ಹೋಗುತ್ತಾರೆ ಹಾಗೂ ಅವರೇ ಇವರ ಕುಟುಂಬವನ್ನು ಜೈಲಿಗೆ ಹಾಕುವ ಕೆಲಸ ಮಾಡುತ್ತಾರೆ ಎಂದು ಎಚ್ಚರಿಸಿದರು.

      ಹುಡಾ ಬಗ್ಗೆ ನಿಯಮ ಉಲ್ಲಂಘನೆ ಮಾಡಿ ಕೆಲಸ ಮಾಡಿದ್ದು, ಮತ್ತು ಸ್ಯಾಂಕ್ಷನ್ ಪ್ಲಾನ್ ಇಲ್ಲದೆ ಸೈಟ್ ನಿರ್ಮಿಸುತ್ತಿದ್ದಾರೆ ಎಂದು ಆರೋಪ ಮಾಡಿರುತ್ತಾರೆ. ಹಾಗೂ ರಾಜಕಾಲುವೆ ಬಗ್ಗೆ ಧ್ವನಿ ಎತ್ತಿದ್ದು, ರೇವಣ್ಣನವರು ಅವರು ಕಟ್ಟಿರುವ ಜ್ಞಾನಾಕ್ಷಿ ಕಲ್ಯಾಣ ಮಂಟಪ ಯಾವ ರಾಜಕಾಲುವೆಯಲ್ಲಿ ಇದೆ ಎಂದು ಬಹಿರಂಗ ಪಡಿಸಲಿ ಹಾಗೂ ಆ ಕಲ್ಯಾಣ ಮಂಟಪಕ್ಕೆ ಸರ್ಕಾರದಿಂದ ನೀಡಿರುವ ಅನುಮೋದನೆ ಮತ್ತು ನಕ್ಷೆಯನ್ನು ಈ ರಾಜ್ಯದ ಜನತೆ ಮುಂದೆ ನೀಡಲಿ. ತಪ್ಪಿದ್ದರೆ ಕೂಡಲೇ ಆ ಕಟ್ಟಡವನ್ನು ತೆರವುಗೊಳಿಸಲಿ . ಅವರ ಕಟ್ಟಡ ಕಾನೂನು ಬದ್ಧವಾಗಿದ್ದರೆ ನಾನು ರೇವಣ್ಣನವರ ಮನೆಯಲ್ಲಿ ಜೀತ ಮಾಡಲು ಸಿದ್ಧನಿದ್ದೇನೆ ಎಂದು ಮತ್ತೊಮ್ಮೆ ಸವಾಲು ಎಸೆದರು. ಇನ್ನು ಹೊಳೆನರಸೀಪುರದಲ್ಲಿರುವ ಚನ್ನಾಂಬಿಕ ಕಲ್ಯಾಣ ಮಂಟಪ ನಿರ್ಮಿಸಿ ನಿಯಮ ಉಲ್ಲಂಘನೆ ಮಾಡಿಲ್ಲವೇ ? ಒಂದು ರೀತಿ ಹೇಳ ಬೇಕಾದರೆ ಅಕ್ರಮಗಳ ಪಿತಾಮಹನೆ ಹೆಚ್.ಡಿ. ರೇವಣ್ಣನವರು. ಅವರ ಬೆಂಬಲಿಗರಿಗೆ ಬಿಲ್ ಪಾವತಿಸಲ್ಲವೆಂದು ಹೆಚ್.ಡಿ.ರೇವಣ್ಣನವರು ಪಿ.ಡಬ್ಲೂ÷್ಯಡಿ ಕಛೇರಿಗೆ ಹೋಗಿ ಅವರೇ ಕುಳಿತು ಚೆಕ್ ಬರೆಸಿದ್ದು, ಅವರು ಬರೆಸಿರುವ ಕಾಮಗಾರಿಗಳನ್ನು ಕೂಡಲೇ ತನಿಖೆಗೆ ಒಳಪಡಿಸಲಿ ಅಗ ಸತ್ಯ ಹೊರಬರಲಿದೆ ಎಂದರು. ಹೆಚ್.ಡಿ. ರೇವಣ್ಣನವರು ಜಿಲ್ಲೆಯಲ್ಲಿ ಇರುವ ಯಾವ ಒಬ್ಬ ಭೂಮಿ ಕಳೆದುಕೊಂಡ ರೈತನಿಗೂ ಪರಿಹಾರ ಕೊಡಿಸುವಲ್ಲಿ ಹೋರಾಟ ಮಾಡಲಿಲ್ಲ. ಕೇವಲ ಗುತ್ತಿಗೆದಾರರ ಪರ ನಿಂತು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ದೂರಿದರು. 

     ನಿಮ್ಮ ಸ್ವಾರ್ಥಕ್ಕಾಗಿ ಕೆಲ ಮಹಿಳಾ ಅಧಿಕಾರಿಗಳನ್ನು ತಮ್ಮ ಕಫಿಮುಷ್ಠಿಯಲ್ಲಿ ಇಟ್ಟುಕೊಂಡು ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುತ್ತಿದ್ದು, ಇದರಿಂದ ನಾನು ಎದೆಗುಂದುವುದಿಲ್ಲ.ಇAತಹ ಅಧಿಕಾರಿಗಳು ತಮ್ಮ ಕೆಲಸ ಕಳೆದುಕೊಂಡು ಜೈಲಿಗೆ ಹೋಗುತ್ತಿದ್ದಾರೆ ಎಂದು ಎಚ್ಚರಿಸಿದರು. ಇನ್ನು ತಮ್ಮ ದತ್ತ ಗ್ರಾಮವಾದ ಪಡುವಲಹಿಪ್ಪೆಯನ್ನು ಜಿಲ್ಲಾ ಪಂಚಾಯಿತಿಯಾಗಿ ಘೋಷಣೆ ಮಾಡಿ ತಮ್ಮ ರಾಜಕೀಯ ಪ್ರಾಭಲ್ಯ ಬೆಳೆಸಿಕೊಳ್ಳಲು ಮುಂದಾಗಿದ್ದು, ಗ್ರಾಮ ಪಂಚಾಯಿತಿಗೂ ಯೋಗ್ಯವಲ್ಲದ ಈ ಗ್ರಾಮವನ್ನು ಜಿಪಮ ಎಂದು ಗೋಷಣೆ ಮಾಡಿರುವುದು ನಿಮಗೆ ನೈತಿಕತೆ ಇದಿಯಾ ಎಂದು ಪ್ರಶ್ನೆ ಮಾಡಿದ ಅವರು, ಶೀಘ್ರದಲ್ಲಿಯೇ ತಮ್ಮ ರಾಜಕೀಯ ಅಂತ್ಯವಾಗಿದ ನಂತರ ಹತಾಶರಾಗಿ ಹಾಸನ ಜಿಲ್ಲೆಯನ್ನು ತೊರೆಯುವುದು ಖಚಿತ ಎಂದು ಭವಿಷ್ಯ ನುಡಿದರು.

Post a Comment

Previous Post Next Post