ರಾಮನಾಥಪುರದಲ್ಲಿ ೯೫ ಲಕ್ಷ ರೂ ವೆಚ್ಚದ ಫಿಲ್ಟರ್ ಕಾಮಗಾರಿಗೆ ಮಾ. ೩೦ ರಂದು ಶಾಸಕ ರಾಮಸ್ವಾಮಿ ಚಾಲನೆ.

ರಾಮನಾಥಪುರ;-: ಅನೇಕ ವರ್ಷಗಳ ಬಹು ನಿರೀಕ್ಷೆಯಲ್ಲಿದ್ದ ಯಾತ್ರಿ ನಿವಾಸವಾದ ರಾಮನಾಥಪುರ ಪಟ್ಟಣಕ್ಕೆ ಕುಡಿಯುವ ನೀರನ್ನು ಶುದ್ಧೀಕರಿಸಲು ಫಿಲ್ಟರ್ ಅಳವಡಿಸುವ ಕಾಮಗಾರಿಗೆ ಟೆಂಡರ್ ಅಗಿ ಹಣ ಬಿಡುಗಡೆಯಾಗಿದ್ದು, ಮಾರ್ಚಿ ೩೦ ರಂದು ಮಂಗಳವಾರ ಬೆಳಿಗ್ಗೆ ೯ ಗಂಟೆಗೆ ಶಾಸಕ ಡಾ. ಎ.ಟಿ. ರಾಮಸ್ವಾಮಿ ಅವರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕರ ಅಪ್ತ ಸಹಾಯಕರು ವೆಂಕಟೇಶ್ ತಿಳಿಸಿದರು.

ರಾಮನಾಥಪುರದಲ್ಲಿ ಮಾತನಾಡಿದ ಅವರು ದಕ್ಷೀಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರ ಪ್ರವಾಸಿ ತಾಣವಾಗಿರುವ ಪಟ್ಟಣಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರಿನ್ನು ಶುದ್ದೀಕರಿಸದೆ ಸರಬರಾಜು ಮಾಡುತ್ತಿರುವುದು ಒಂದು ಅಪವಾದವಾಗಿತ್ತು, ಈ ಅಪವಾದವನ್ನು ಹೋಗಲಾಡಿಸಿ ಕ್ಷೇತ್ರವನ್ನು ಪ್ರವಾಸಿ ಸ್ನೇಹಿಯನ್ನಾಗಿಸಬೇಕು ಎಂಬ ದೃಷ್ಟಿಯಿಂದ ಶುದ್ಧವಾದ ಕುಡಿಯುವ ನೀರನ್ನು ಒದಗಿಸಿ ಆರೋಗ್ಯವನ್ನು ಕಾಪಾಡಬೇಕು. ಎಂಬ ಉದ್ದೇಶದಿಂದ ಕ್ಷೇತ್ರದ ಶಾಸಕರು ಸತತವಾಗಿ ೧ ವರ್ಷದಿಂದ ಸರ್ಕಾರದ ಮೇಲೆ ಒತ್ತಡ ತಂದು ೯೫ ಲಕ್ಷ ರೂ ವಿಶೇಷ ಅನುದಾನ ಕೊಡಿಸಿದ್ದು ಕಾಮಗಾರಿಯು ಟೆಂಡರ್ ಅಗಿ ಹಣ ಬಿಡುಗಡೆ ಅಗಿ ಇಂದು ಮಂಗಳವಾರ ಕಾಮಗಾರಿಯೂ ಆರಂಭವಾಗುತ್ತದೆ ಎಂದರು.

Post a Comment

Previous Post Next Post