ಹುಡಾ-ಹೌಸಿಂಗ್ ಬೋರ್ಡ್ ಬಾಗಿಲ ಮುಚ್ಚಿಸಿ ಖಾಸಗಿಗೆ ಲೂಟಿ ಮಾಡಲು ಕೊಟ್ಟರೆ ಒಳ್ಳೆಯದು : ಹೆಚ್.ಡಿ. ರೇವಣ್ಣ ವ್ಯಂಗ್ಯ

ಹಾಸನ: ನಗರ ಪ್ಲಾನಿಂಗ್ ನಿರ್ವಹಿಸುವ ಹುಡಾ ಮತ್ತು ಹೌಸಿಂಗ್ ಬೋರ್ಡ್ ಎರಡನ್ನು ಮುಚ್ಚಿಸಿ ಖಾಸಗಿಯವರಿಗೆ ಲೂಟಿ ಮಾಡಲು ಅವಕಾಶ ಕೊಟ್ಟರೇ ಒಳ್ಳೆಯದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದರು.

         ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರದ ಸುತ್ತ ಹಲವಾರು ಖಾಸಗಿ ಲೇಔಟ್ ಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸುತ್ತಿದ್ದು, ಕೆಲ ಅಧಿಕಾರಿಗಳು ಕೂಡ ಇದರಲ್ಲಿ ಭಾಗಿ ಆಗಿದ್ದು, ತೋಟಗಾರಿಕೆ ಇಲಾಖೆ, ಕೆಲ ಕೆಇಬಿ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರ ಇಲಾಖೆಯು ಸೇರಿಸಬಹುದು. ನಗರ ಪ್ಲಾನಿಂಗ್ ನಿರ್ವಹಿಸುವ ಹುಡಾ ಮತ್ತು ಹೌಸಿಂಗ್ ಬೋರ್ಡ್ ಎರಡನ್ನು ಮುಚ್ಚಿ ಖಾಸಗಿ ಇವರಿಗೆ ಲೂಡಿ ಮಾಡಲು ಕೊಟ್ಟರೆ ಒಳ್ಳೆಯದು. ಈ ಇಲಾಖೆಯವರಿಗೆ ಸಂಬಳ ಏಕೆ ಕೊಡಬೇಕು? ಇದರಲ್ಲಿ ಒಂದು ದಂಧೆ ನಡೆಯುತ್ತಿದೆ ಎಂದು ಪ್ರಶ್ನಿಸಿ ನಾನು ಮುಖ್ಯಮಂತ್ರಿಗಳಿಗೆ, ಅರ್ಬನ್ ಡೆವಲಪ್ ಮೆಂಟ್ ಸಚಿವರಿಗೆ ಹಾಗೂ ಔಸಿಂಗ್ ಸಚಿವರಿಗೆ ಮನವಿ ಮಾಡಲಾಗುವುದು ಎಂದರು. ಎಲ್ಲಾ ಪೂರ್ಜರಿ ದಾಖಲೆ ಸೃಷ್ಠಿ ಮಾಡಲಾಗುತ್ತಿದೆ. ಹಾಸನದಲ್ಲಿ ಯಾರ ನಿವೇಶನವನ್ನು ಯಾರ ಹೆಸರಿಗಾದರೂ ಸಬ್ ರಿಜಿಸ್ಟರ್ ಕಛೇರಿಲಿ ಮಾಡಿಸಿಕೊಳ್ಳಬಹುದಾಗಿದೆ. ಇನ್ನು ನೀರಿನ ವ್ಯವಸ್ಥೆ, ವಿದ್ಯುತ್, ರಸ್ತೆ, ಪಾರ್ಕ್ ಇತರೆ ಯಾವುದನ್ನು ಮಾಡದೇ ಲೇಔಟ್ ಮಾಡಲಾಗುತ್ತಿದೆ. ನೂರು ಎಕರೆ ನಿವೇಶನ ಮಾಡಿದರೇ 60 ಪರ್ಸೆಂಟ್ ಸೈಟು, ಇನ್ನುಳಿದ 40 ಭಾಗದಲ್ಲಿ ರಸ್ತೆ ಯಾವುದು ಇಲ್ಲ. ಈ ಕೆಲಸ ಮಾಡಿಕೊಟ್ಟವರಿಗೆ 20 ಭಾಗವನ್ನು ಕೊಡಲಾಗುತ್ತಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಈ ಬಗ್ಗೆ ನನಗೆ ಅರ್ಜಿ ಕೊಟ್ಟಿದ್ದು, ಈತರ ನಡೆಯುತ್ತಿರುವ ದಂಧೆ ಎಲ್ಲಾವನ್ನು ಸಮಗ್ರ ತನಿಖೆ ಆಗಬೇಕು ಎಂದು ಸಿಎಂ ಗಮನಕ್ಕೂ, ಅರ್ಬನ್ ಸಚಿವರಿಗೂ ಮತ್ತು ಕಾರ್ಯದರ್ಶಿ ಗಮನಕ್ಕೂ ತರಲಾಗುವುದು. ಇದಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು ಮನವಿ ಮಾಡಲಾಗುವುದು. ಮೊದಲು ದಾಖಲೆ ನೀಡಿ ನಂತರ ಲೀಗಲ್ ಫೈಟ್ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.



     ಹುಡಾ ಇಲ್ಲವೇ ಹೌಸಿಂಗ್ ನಿವೇಶನವನ್ನು ಯಾರಾದರೂ ಖರೀದಿ ಮಾಡಿದರೇ 15 ವರ್ಷಗಳ ಕಾಲ ಯಾರು ಮಾರಾಟ ಮಾಡದಂತೆ ಅವಕಾಶ ಕೊಡಬಾರದು. ಈ ಕಾನೂನು ಜಾರಿಗೆ ತರಲು ಆಗದಿದ್ದರೇ ಖಾಸಗಿಯವರಿಗೆ ಕೊಡುವಂತೆ ಸಲಹೆ ನೀಡಿದರು. ಇನ್ನು ಕೈಗಾರಿಕ ಪ್ರದೇಶದಲ್ಲೂ ಇದೆ ರೀತಿ ನಡೆಸಲಾಗುತ್ತಿದೆ. ಖಾಸಗಿಯವರು ಯಾರ ಜೊತೆ ಇದ್ದಾರೆ ಎಂದು ಬಿಜೆಪಿ ಹೇಳಬೇಕು ಎಂದು ಸವಾಲು ಹಾಕಿದರು. 

      ಕಟ್ಟಾಯ ಹೋಬಳಿಯಲ್ಲಿ ಕ್ಷೇತ್ರದ ಪುನರ್ ವಿಂಗಡೆ ವಿಚಾರದಲ್ಲಿ ಜನಸಂಖ್ಯೆ ಆಧಾರದ ಮೇಲೆ ಹಿಂದೆ ಯಾವ ರೀತಿ ಇತ್ತು ಅದೆ ರೀತಿ ಕೊಡುವಂತೆ ಒತ್ತಾಯಿಸಿದರು. ಇನ್ನು ಜಾರಕಿಹೊಳಿ ಸಿಡಿ ವಿಚಾರವಾಗಿ ಎರಡು ರಾಷ್ಟಿçÃಯ ಪಕ್ಷಗಳಿವೆ. ದೊಡ್ಡವರ ವಿಚಾರವಾಗಿರುವುದರಿಂದ ಬಡವ ನೀ ಮಡಗಿದಾಗೆ ಇರು ಎಂಬAತೆ ನಮಗೆ ಏಕೆ ಬೇಕು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ರೇವಣ್ಣನವರು ಉತ್ತರಿಸಿದ ರೀತಿ ಆಗಿತ್ತು. ಮೊದಲು ಧನ-ಕರುಗಳಿಗೆ, ಜನರಿಗೆ ನೀರು ಇಲ್ಲದೆ ಸಾಯುತ್ತಿರುವ ಬಗ್ಗೆ ಗಮನ ಕೊಟ್ಟರೆ ಸಾಕು, ಇನ್ನು ಶಾಲೆಗಳಲ್ಲಿ ಶಿಕ್ಷಕರೆ ಇಲ್ಲ. ಈ ಸಮಸ್ಯೆಯನ್ನು ಕೇಳುವವರು ಯಾರು? ಎಂದು ಎರಡು ರಾಷ್ಟಿçÃಯ ಪಕ್ಷಗಳಿಗೆ ಕುಟುಕಿದರು. ಹಾಸನ ಜಿಲ್ಲೆಯ ಆಸ್ಪತ್ರೆ ಕಥೆ ಕೇಳಿದರೇ ಸರಕಾರಿ ಆಸ್ಪತ್ರೆಗೆ ಹೋಗುವುದಿಲ್ಲ. 108 ತುರ್ತು ವಾಹನಗಳನ್ನು ಖಾಸಗಿ ಆಸ್ಪತ್ರೆ ಕಡೆಯೇ ತಿರುಗಿಸುತ್ತಾರೆ. ಮೊದಲು ತಾಲೂಕು ಆಸ್ಪತ್ರೆಗಳಿಗೆ ಹೋಗಬೇಕು. ನಂತರ ಜಿಲ್ಲಾ ಆಸ್ಪತ್ರೆಗೆ ಬರಬೇಕು. ಈ ರೀತಿ ಇಲ್ಲಿ ಆಗುತ್ತಿಲ್ಲ ಎಂದು ಅಸಮಧಾನವ್ಯಕ್ತಪಡಿಸಿದರು. 


Post a Comment

Previous Post Next Post