ನಿಡಗೋಡು ದೇವರಾಜ್ ಅವರ ಸಮಯ ಸಂಗಮ ಪುಸ್ತಕ ಬಿಡುಗಡೆ

 ಬೇಲೂರು:ಆಧುನಿಕ ಜಗತ್ತಿಗೆ ಮಾರು ಹೋಗಿರುವ ಮಾನವ ಸ್ರ‍್ಧೆ ಮತ್ತು ಹಣದ ಹಿಂದೆ ಬಿದ್ದಿದ್ದು,ತನ್ನಲ್ಲಿರುವ ಅಗಾದ ಜ್ಞಾನದ  ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಹೆಚ್ ಎಂ ದಯಾನಂದ್ ತಿಳಿಸಿದರು.

ಪಟ್ಟಣದ ಶ್ರೀ ಚನ್ನಕೇಶವ ದಾಸೋಹದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ನಿಡಗೋಡು ದೇವರಾಜ್ ಅವರ ಸಮಯ ಸಂಗಮ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು  ಹಿಂದೆ ಪುಸ್ತಕ ಬರೆಯುಲು ಸಾಕಷ್ಟು ಜನರು ಮುಂದೆ ಇದ್ದರು,ಉತ್ತಮ ಬರಹಗಾರರು ಕಥೆ,ಕವನ,ಹಾಸ್ಯ ಹಾಗೂ ಸಮಾಜದಲ್ಲಿ ನಡೆಯವಂತಹ ಘಟನೆಗಳನ್ನು ಮುಂದಿಟ್ಟುಕೊಂಡು ತಮ್ಮ ಬರವಣಿಗೆಯ ಮೂಲಕ ಸಮಾಜವನ್ನು ತಿದ್ದಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಿದ್ದರು.ಆದರೆ ಕಾಲಕ್ರಮೇಣ ಆಧುನಿಕ ಭರಾಟೆಯಲ್ಲಿ ಬರಹಗಾರರು ಕಾಲ ಕ್ರಮೇಣ ಕಣ್ಮರೆಯಾಗುತ್ತಿರುವುದು ವಿಷಾಧನೀಯ,ಈಗ ವಾಟ್ಸಪ್,ಫೇಸ್ ಬುಕ್ ಅಂರ‍್ಜಾಲದಲ್ಲಿ ಎಲ್ಲರೂ ಕಾಲ ಕಳೆಯುತ್ತಿದ್ದಾರೆ ಹೊರತು ಉತ್ತಮ ಬರಹಗಾರರು ಯಾರೂ ಇಲ್ಲದಂತಾಗಿದೆ.

 ಈಗಿನ ಬದುಕಿನಲ್ಲಿ ಸ್ರ‍್ಧೆಯಲ್ಲಿ ತೊಡಗಿದ್ದೇವೆ. ಹೀಗಾಗಿ ಈ ಕ್ಷಣದ ಸಂತೋಷ ಹಾಗೂ ಮಾನವೀಯತೆ ನಮ್ಮಿಂದ ದೂರವಾಗುತ್ತಿದೆ.ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಹಾಗೂ ಕಲೆ ಅಡಗಿರುತ್ತದೆ. ಅದನ್ನು ಹೊರ ತರುವ ಪ್ರಯತ್ನ ಆಗಬೇಕಿದೆ. ಕಲೆ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲೂ ಇರಬೇಕು ಅದು ಸಾಹಿತ್ಯ,ಸಾಂಸ್ಕೃತಿಕ, ಯಾವುದೇ ಕ್ಷೇತ್ರವಾದರೂ ಸರಿ.ನಿಡಗೋಡು ದೇವರಾಜ್ ಅವರು ಒಂದು ಉತ್ತಮ ಕವನಗಳ ಮೂಲಕ ಪುಸ್ತಕ ಹೊರತಂದಿದ್ದಾರೆ ಅವರಲ್ಲಿರುವ ಜ್ಞಾನದ ಬಂಡಾರ ಇನ್ನೂ ಹೆಚ್ಚಿನ ರೂಪದಲ್ಲಿ ಬರಲಿ ಎಂದು ರ‍್ಷವ್ಯಕ್ತಪಡಿಸಿದರು.


ಕನ್ನಡಸಾಹಿತ್ಯ. ಪರಿಷತ್ ತಾಲೂಕು ಅಧ್ಯಕ್ಷ ಪ್ರೊ ಜಯಣ್ಣಗೌಡ ಮಾತನಾಡಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ ಇರುವುದೇ ಹೊಸ ಹೊಸ ಸಾಹಿತ್ಯ ಬರವಣಿಗೆ ಬರೆಯವ ಯುವ ಬರಹಗಾರರಿಗೆ,ಕವಿಗಳಿಗೆ ಬರಹಗಾರರಿಗೆ, ಪ್ರೋತ್ಸಾಹ ಕೊಟ್ಟು ಒಂದು ದೊಡ್ಡ ವೇಧಿಕೆ ಕಲ್ಪಸಲು ಸಹಕಾರಿಯಾಗಿದೆ.ಸಾಹಿತ್ಯ ಪರಿಷತ್ ನಲ್ಲಿರುವ ಎಲೆಮರೆಯಲ್ಲಿರುವ ಲೇಖಕರನ್ನು ಮುಂದೆ ತಂದು ಸಾಹಿತ್ಯ ಲೋಕಕ್ಕೆ ಪರಿಚಯಿಸುವಂತಹ ಕೆಲಸ ಸಾಹಿತ್ಯ ಪರಿಷತ್ ನ ಉದ್ದೇಶವಾಗಿದೆ.

ನಿಡಗೋಡ್ ದೇವರಾಜ್ ಅವರು ಬರೆದಿರುವ ಸಮಯ ಸಂಗಮ ಪುಸ್ತಕವನ್ನು ಅವರು ಚೆನ್ನಾಗಿ ನುಡಿಮುತ್ತುಗಳಂತೆ ಬರೆದಿದ್ದು ಅವರ ಪುಸ್ತಕ ಅಭಿಲಾಷೆಗೆ ಒಂದು ಸ್ಪರ‍್ತಿ.ಈ ಪುಸ್ತಕವನ್ನು ನಮ್ಮ ಸಾಹಿತ್ಯ ಪರಿಷತ್ ನಿಂದಲೇ ಬಿಡುಗಡೆಯಾಗಬೇಕು ಎಂದು ನಮ್ಮಲ್ಲಿ ಕೇಳಿಕೊಂಡಾಗ ಅದನ್ನು ಮುದ್ರಿಸಿ ಮುಖಪುಟದೊಂದಿಗೆ ಬಿಡುಗಡೆ ಮಾಡಿದ್ದೇವೆ.ಮುಂದೆ ಬರುವ ಯುವ ಬರಹಗಾರರಿಗೆ ಇದು ಮುನ್ನಡಿಯಾಗಲಿದೆ ಎಂದು ಹೇಳಿದರು.

ಈ ಸಂರ‍್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಕೋಶಾಧಿಕಾರಿ ಯಮಸಂಧಿ ಪಾಪಣ್ಣ,ಮೋಹನ್ ಕುಮಾರ್, ಚನ್ನಕೇಶವೇಗೌಡ,ಸಿದ್ದೇಗೌಡ,ಸಾಹಿತಿ ನಿಡಗೋಡ್ ದೇವರಾಜ್ ಹಾಗೂ ಇತರರು ಹಾಜರಿದ್ದರು.

Post a Comment

Previous Post Next Post