ಇಂದಿನ ದಿನ ಭವಿಷ್ಯ (17-04-2021)


ವೃಷಭ ರಾಶಿ : ಕುಟುಂಬಸ್ಥರ ನೋವು ನಲಿವುಗಳಲ್ಲಿ ನೀವು ಸಹ ಪಾಲ್ಗೊಳ್ಳಿ. ಮಕ್ಕಳಿಗಾಗಿ, ಪತ್ನಿಗಾಗಿ ಸ್ವಲ್ಪ ಹೊತ್ತು ಸಮಯ ನೀಡಿದರೆ ನೀವು ಖಂಡಿತವಾಗಿ ದೊಡ್ಡ ಸಾಧನೆ ಮಾಡುವಿರಿ, ಏಕೆಂದರೆ ನಿಮ್ಮ ಎಲ್ಲಾ ಧನಾತ್ಮಕ ಶಕ್ತಿ ಇರುವುದು ನಿಮ್ಮ ಕುಟುಂಬದಲ್ಲಿ ಮಾತ್ರ ಎಂಬುದನ್ನು ನೆನಪಿಡಿ.

ಮಿಥುನ ರಾಶಿ : ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳಲ್ಲಿ ಭಿನ್ನಾಭಿಪ್ರಾಯ ಬಂದರೆ ನಿಮ್ಮ ಪಾಡಿಗೆ ಇದ್ದು ಬಿಡಿ ನಿಮ್ಮ ಕೆಲಸ ಶಕ್ತರಾಗಿ ಮಾಡಿ ಮುಗಿಸಿ ಎಲ್ಲರೂ ಸುಮ್ಮನಾಗುವರು.

ಕಟಕ ರಾಶಿ : ಬಹುಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ. ಹೂಡಿಕೆಗೆ ಸಕಾಲ. ಕೆಲಸ ಮತ್ತು ಮನೆಯಲ್ಲಿನ ಒತ್ತಡದಿಂದ ಮನಸ್ಸು ವಿಚಲಿತಗೊಳ್ಳಲಿದೆ.ಆರ್ಥಿಕ ಹಿತದೃಷ್ಟಿಯಿಂದ ವ್ಯವಹಾರದಲ್ಲಿ ಶಿಸ್ತು ಬೆಳೆಸಿಕೊಳ್ಳುವುದು ಬಹುಮುಖ್ಯ.

ಸಿಂಹ ರಾಶಿ : ಮನದಲ್ಲಿ ಮೂಡುವ ಹಿಂಜರಿಕೆ ಭಾವನೆ ಎದುರಿಸಬೇಕಾಗುತ್ತದೆ. ನಿರೀಕ್ಷಿತ ಕೆಲಸ ಪೂರ್ಣಗೊಳಿಸಲು ಬಂಡವಾಳದ ಕೊರತೆ ಎದುರಿಸಬೇಕಾಗುತ್ತದೆ. ಇದರಿಂದ ಸಾಲದ ಮೋರೆ ಹೋಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾಗಿ ಸಾಗಿದರು ಹಣಕಾಸಿನಲ್ಲಿ ನಿರಾಶಾದಾಯಕವಾಗಿರುತ್ತದೆ.

ಕನ್ಯಾ ರಾಶಿ : ಉದ್ಯೋಗಗಳಲ್ಲಿ ಏರಿಳಿತ ಕಾಣಬಹುದು. ನಿಮ್ಮದಲ್ಲದ ತಪ್ಪಿಗೆ ನಿಮ್ಮನ್ನು ಗುರಿ ಮಾಡಬಹುದು. ಇದರಿಂದ ಸಂಘರ್ಷದ ವಾತಾವರಣ ಸೃಷ್ಟಿ ಆಗುತ್ತದೆ.

ತುಲಾ ರಾಶಿ :ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ವೃತ್ತಿರಂಗದಲ್ಲಿ ವಿನೂತನ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳುವಾಗ ಆದಷ್ಟು ಎಚ್ಚರಿಕೆ ವಹಿಸಿ.
ವೃಶ್ಚಿಕ ರಾಶಿ : ನಿಮ್ಮ ಮನಸ್ಸಿನಲ್ಲಿ ಇರುವಂತಹ ಜಮೀನು ಖರೀದಿ ಅಥವಾ ಗೃಹ ಖರೀದಿಯ ಬಯಕೆಯ ಪೂರ್ಣಗೊಳ್ಳುತ್ತದೆ. ಮಕ್ಕಳ ವಿಷಯದಲ್ಲಿ ಹೆಚ್ಚು ಸಂತೋಷ ಪಡುವಿರಿ ಅವರ ಜ್ಞಾನಾರ್ಜನೆಗಾಗಿ ವಿಶೇಷವಾದಂತಹ ಕಾರ್ಯ ಸಂಕಲ್ಪಗಳಗಳನ್ನು ಮಾಡುವಿರಿ.

ಧನಸ್ಸು ರಾಶಿ : ನಿಮ್ಮ ವಿರುದ್ದವಾಗಿ ಮಾತನಾಡುವ ಮಂದಿಯನ್ನು ಆದಷ್ಟು ನಿರ್ಲಕ್ಷಿಸಿ. ಆರೋಪಗಳನ್ನು ಮಾಡುವವರು ಮಾಡಲಿ ನಿಮ್ಮ ಕೃತಿಯಿಂದ ಅವರಿಗೆ ತಕ್ಕ ಫಲಿತಾಂಶವನ್ನು ನೀಡಲು ತಯಾರಾಗಿ. ಕುಲದೇವತಾರಾಧನೆ ಮಾಡುವುದು ಒಳಿತು.

ಮಕರ ರಾಶಿ : ಯೋಗ, ಧ್ಯಾನದಿಂದ ಮನಸ್ಸನ್ನು ಹತೋಟಿಗೆ ತರುವುದು ಒಳಿತು. ಕೆಲವು ವಿಷಯಗಳಲ್ಲಿ ಮನಸ್ಸು ಹೆಚ್ಚು ಕೇಂದ್ರೀಕರಿಸುತ್ತದೆ ಅದು ಒಳ್ಳೆಯ ವಿಷಯ ಇದ್ದರೆ ತೊಂದರೆ ಇಲ್ಲ, ಆದರೆ ಕೆಟ್ಟ ಆಲೋಚನೆ ಇದ್ದರೆ ಆದಷ್ಟು ನಿಮ್ಮ ಮನಸ್ಸನ್ನು ನಿಯಂತ್ರಿಸಿ.

ಕುಂಭ ರಾಶಿ : ಉದ್ಯೋಗ ನಿಮಿತ್ತ ಪರಸ್ಥಳ ವಾಸವೂ ನಿಮ್ಮ ಮನಸ್ಸನ್ನು ಕಾಡಬಹುದು. ಆರ್ಥಿಕ ವಿಷಯದಲ್ಲಿ ಹೆಚ್ಚಿನ ನಿರೀಕ್ಷೆ ಇದೆ. ನಿಮ್ಮಿಂದ ಲೇವಾದೇವಿ ವ್ಯವಹಾರವನ್ನು ಆದಷ್ಟು ಮಾಡದಿರುವುದು ಒಳಿತು.

ಮೀನ ರಾಶಿ : ಹಲವು ದಿನಗಳಿಂದ ಮದುವೆಗಾಗಿ ಕಾಯುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಆರ್ಥಿಕ ಯೋಜನೆಗಳಲ್ಲಿ ಹಿನ್ನಡೆ ಕಾಣಬಹುದು ಆದರೆ ಮುಂದಿನ ದಿನಗಳಲ್ಲಿ ನೀವು ಮಾಡುತ್ತಿರುವ ಕೆಲಸದ ಶ್ರ ಮವೂ ಖಂಡಿತವಾಗಿಯೂ ಲಾಭ ಕಾರಿಯಾಗಿ ಬರುವುದು ನಿಶ್ಚಿತ.

Post a Comment

Previous Post Next Post