ಹಾಸನ: ಜಿಲ್ಲೆಯಲ್ಲಿ ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 63 ಜನರಲ್ಲಿ ಕೋವಿಡ್-19 ದೃಢಪಟ್ಟಿದ್ದು 3 ಜನ ಮೃತಪಟ್ಟಿದ್ದಾರೆ.
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29698ಏರಿಕೆಯಾಗಿದ್ದು, 28675ಜನ ಇಲ್ಲಿವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 548ಪ್ರಕರಣಗಳಿದ್ದು, 9 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 468ಜನ ಮೃತಪಟ್ಟಿದ್ದಾರೆ.