ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ,ಎಮ್ ಎಲ್ ಸಿ ಗೋಪಾಲಸ್ವಾಮಿ ಇದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ ಏರ್ಪಟ್ಟಿತು.ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಸುಮಾರು ಹನ್ನೊಂದು ಗಂಟೆಗೆ ಟೇಕಾಫ್ ಆದ ಹೆಲಿಕ್ಯಾಪ್ಟರ್ 25 ನಿಮಿಷಗಳ ನಂತರ ತಾಲೂಕಿನ ನುಗ್ಗೆಹಳ್ಳಿಯ ಸರ್ಕಾರಿ ಕಾಲೇಜು ಮೈದಾನ ತಲುಪಿತು.
ಆದರೆ ಹೆಲಿಪ್ಯಾಡ್ ಸಮೀಪ ಜಮಾಯಿಸಿದ ನೂರಾರು ಸಂಖ್ಯೆಯ ಜನರ ಕಾರಣ ಹೆಲಿಕಾಪ್ಟರ್ ಚಾಲಕ ಹೆಲಿಪ್ಯಾಡ್ಗೆ ಇಳಿಸಲು ಎರಡು ಮೂರು ಬಾರಿ ಪ್ರಯತ್ನ ನಡೆಸಿದರು.
ಅಲ್ಲದೆ ಜನರನ್ನು ನಿಯಂತ್ರಿಸಲು ಪೋಲೀಸರ ಲಘು ಲಾಠಿಬೀಸಿದರು. ಕೊನೆಗೆ 5 ನಿಮಿಷ ಹೆಲಿಪ್ಯಾಡ್ ಮೇಲೆಯೇ ಹಾರಾಡಿದ ಹೆಲಿಕಾಪ್ಟರ್ ಮೂರನೇ ಪ್ರಯತ್ನದಲ್ಲಿ ಲ್ಯಾಂಡಿಗ್ ಆಯಿತು… ಹೆಲಿಕಾಪ್ಟರ್ ನಿಂದ ಇಳಿದ ಸಿದ್ದರಾಮಯ್ಯ ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಇಂತಹ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.
Tags
ಚನ್ನರಾಯಪಟ್ಟಣ