ರಾಮನಾಥಪುರ;-: ಸರ್ಕಾರವು ಇಂತಹ ಸಂಕಷ್ಟದಲ್ಲಿರುವ ಕೊರೊನಾ ಸಂದರ್ಭದಲ್ಲಿಯೂ ಸಹ ಸರ್ಕಾರದಿಂದ ಹೆಚ್ಚಿನ ನೆರವು ತಂದು ಹೋಬಳಿಯ ರಸ್ತೆಗಳು, ಚರಂಡಿಗಳು ಎಲ್ಲಾ ರೀತಿಯ ಅಭಿವೃದ್ದಿಗೆ ಕ್ರಮಕೈಗೊಳ್ಳುತ್ತಿದ್ದೇನೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಮಂತರ್‌ಗೌಡ ಹೇಳಿದರು.
ರಾಮನಾಥಪುರ ಹೋಬಳಿ ವಡ್ಡರಹಳ್ಳಿ ಗ್ರಾಮದಲ್ಲಿ ಮಳೆಹನಿ ಯೋಜನೆಯಡಿ ಮಂಜೂರಾಗಿರುವ ೧೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಅಭಿವೃದ್ದಿ ಕಾಮಗಾರಿಗಳ ಗುಣಮಟ್ಟದ ಜೊತೆಗೆ ಬೇಗ ಮುಗಿಸುವುದು ಅಗತ್ಯವಾಗಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಸ್ಥಳೀಯರು ಸಹ ಎಚ್ಚರ ವಹಿಸಬೇಕು. ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ನೀಗಿಸಲಾಗುತ್ತಿದೆ. ಪಕ್ಷಭೇಧ ಮರೆತು ನಿಮ್ಮೇಗಳೆಲ್ಲರ ಸಹಕಾರದಿಂದ ಈ ಕ್ಷೇತ್ರದ ಅಭಿವೃದ್ದಿಯತ್ತ ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹನ್ಯಾಳು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಗುಡ್ಡಣ್ಣ, ಹನ್ಯಾಳು ಅನುವಿಜಯ, ದೀಪು, ಶ್ರೀಧರ್, ಮಂಜುನಾಥ್, ಎಚ್.ಕೆ. ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.