ಎ 1- ಹೆಸರಾಂತ ಚಿತ್ರನಟ ರಜನಿಕಾಂತ ಅವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಶ್ರೇಷ್ಠ ನಟರಾದ ರಜಿನಿಕಾಂತ ಅವರಿಗೆ 2019ನೇ ಸಾಲಿನ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಘೋಷಿಸಲು ಸಂತೋಷವಾಗುತ್ತಿದೆ. ನಟರಾಗಿ, ನಿರ್ಮಾಪಕರಾಗಿ ಆಗಿ ರಜನಿಕಾಂತ ಅವರು ನೀಡಿರುವ ಕೊಡುಗೆ ಅಪ್ರತಿಮವಾದುದು ಎಂದು ಜಾವಡೇಕರ ಟ್ವೀಟ್ ಮಾಡಿದ್ದಾರೆ.
ಸೂಪರ್ ಸ್ಟಾರ್ ಹಾಗೂ ನನ್ನ ಆತ್ಮೀಯ ಗೆಳೆಯ ರಜನಿಕಾಂತ ಅವರು ಈ ಪ್ರಶಸ್ತಿಗೆ ಶೇಕಡಾ ನೂರಕ್ಕೆ ನೂರು ಅರ್ಹ ವ್ಯಕ್ತಿ. ಅವರು ಪರದೆ ಮೇಲೆ ಪ್ರೇಕ್ಷಕರನ್ನು ಇಷ್ಟು ಪ್ರಮಾಣದಲ್ಲಿ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ನಟ ಹಾಗೂ ನಿರ್ದೇಶಕ ಕಮಲ ಹಾಸನ್ ಅವರು ತಮ್ಮ ಟ್ವೀಟರ್ ಪುಟದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
Tags
ಸಿನಿಮಾ