: ಡಾ. ಶಿವಕುಮಾರ ಸ್ವಾಮಿಜಿಯವರ ಹುಟ್ಟು, ಬದುಕು ಎಲ್ಲವೂ ಇತರೆ ಮಠಾಧಿಪತಿಗಳಿಗೆ ಆದರ್ಶವಾಗಿದೆ ಧರ್ಮರಾಜೇಂದ್ರ ಸ್ವಾಮಿಜಿಗಳು.

 ಆಲೂರು : ಡಾ. ಶಿವಕುಮಾರ ಸ್ವಾಮಿಜಿಗಳ ಬದುಕೇ ಒಂದು ಪವಾಡ. ಕೋಟ್ಯಂತರ ಜನರಿಗೆ ತ್ರಿವಿಧ ದಾಸೋಹದ ಮೂಲಕ ಬದುಕು ಕಟ್ಟಿಕೊಟ್ಟ ಅವರು ಅದರಲ್ಲೇ ದೇವರನ್ನು ಕಂಡವರು. ಇವರ ಹುಟ್ಟು, ಬದುಕು ಎಲ್ಲವೂ ಇತರೆ ಮಠಾಧಿಪತಿಗಳಿಗೆ ಆದರ್ಶವಾಗಿದೆ ಎಂದು ಸಂಕಲಾಪುರ ಮಠದ ಪೀಠಾಧ್ಯಕ್ಷ ಶ್ರೀ. ಧರ್ಮರಾಜೇಂದ್ರ ಸ್ವಾಮಿಜಿಗಳು ಅಭಿಪ್ರಾಯಪಟ್ಟರು,


ತಾಲೂಕಿನ ಪಾಳ್ಯ ಹೋಬಳಿ ಸಂಕಲಾಪುರ ಮಠದಲ್ಲಿರುವ ಝಾನ್ಸಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ನಡೆದಾಡುವ ದೇವರು ಎಂದೇ ಕರೆಯಲ್ಪಡುತ್ತಿದ್ದ ಶತಾಯುಷಿ, ಪುಣ್ಯ ಪುರುಷ ಡಾ. ಶಿವಕುಮಾರ ಸ್ವಾಮೀಜಿ ಅವರು ಇನ್ಮುಂದೆ ನೆನಪಷ್ಟೇ. ತಮ್ಮ ೧೧೧ರ ಪ್ರಾಯದಲ್ಲಿ ಲಿಂಗೈಕ್ಯವಾಗುವುದರೊAದಿಗೆ ಅಪಾರ ಭಕ್ತ ಸಮೂಹವನ್ನು ಅನಾಥರನ್ನಾಗಿಸಿದ್ದಾರೆ 

೧೯೦೭ ಏಪ್ರಿಲ್ ೧ ರಂದು ಜನಿಸಿದ ಸಿದ್ದಗಂಗಾ ಸ್ವಾಮೀಜಿಗಳು ಹುಟ್ಟಿದ ಊರಿನಿಂದ ೨೫ ವರ್ಷ ದೂರವಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲೂರು ಹೋಬಳಿಯ ವೀರಾಪುರದ ಸುಸಂಸ್ಕೃತ ಮನೆತನದ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಗಳ ಹದಿಮೂರು ಮಂದಿ ಮಕ್ಕಳಲ್ಲಿ ಕಿರಿಯವರಾಗಿ ಜನಿಸಿದರು. ಇವರ ಹುಟ್ಟು ಹೆಸರು ಶಿವಣ್ಣ. ಹುಟ್ಟುವಾಗಲೇ ಏನೋ ಒಂದು ತೇಜಸ್ಸು ಅವರ ಮೊಗದಲ್ಲಿ ಲಾಸ್ಯವಾಡುತ್ತಿತ್ತಂತೆ ಅವತ್ತು. ಅವರು ಮುಂದೆ ಈ ಭರತಭೂಮಿಯಲ್ಲಿ ಶಾಶ್ವತವಾಗಿ ನೆಲೆಯೂರುವಂತಹ ಮಹಾನ್ ವ್ಯಕ್ತಿಯಾಗಿ ನೆಲೆಯೂರುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಝಾನ್ಸಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹರೀಶ್, ಸಹ ಶಿಕ್ಷಕರಾದ ಪಲ್ಲವಿ, ತಿಪ್ಪೇಸ್ವಾಮಿ, ಹೆಮಂತ್, ಸಂಕಲಾಪುರ ಮಠದ ಆಡಳಿತ ಮಂಡಳಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಿಸಿದ್ದರು.


Post a Comment

Previous Post Next Post