ಬೆಳೆದ ಬೆಳೆ ನಷ್ಟವಾದ್ದರಿಂದ ರೈತ ವಿಷಸೇವಿಸಿ ಆತ್ಮಹತ್ಯೆ

 ಮೃತ ಸಂಜೀವೇಗೌಡರವರಿಗೆ ಯಲಾದಹಳ್ಳಿ ಗ್ರಾಮದ ಸರ್ವೇ ನಂ ೫/೧೦ ರಲ್ಲಿ ೨.೮ ಎಕರೆ ಜಮೀನು ಹಾಗೂ ಸರ್ವೇ ನಂ ೩/೨ ರಲ್ಲಿ ೫.೧೫ ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ಶುಂಠಿ, ಕುಂಬಳ, ಮೆಣಸು ಬೆಳೆಯನ್ನು ಬೆಳೆಯುವ ಸಲುವಾಗಿ ರಾಮನಾಥಪುರದ ಕೆನರಾ ಬ್ಯಾಂಕಿನಲ್ಲಿ ೬ ಲಕ್ಷ ರೂ ಬೆಳೆ ಸಾಲ ಮತ್ತು ಮನೆ ನಿರ್ವಹಣೆಗಾಗಿ ೧೫೦ ಗ್ರಾಂ ಚಿನ್ನದ ಒಡವೆಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ೨ ಲಕ್ಷ ರೂ ಸಾಲ ಪಡೆದುಕೊಂಡಿದ್ದರು. ಭೂಮಿಯಲ್ಲಿ ಸರಿಯಾಗಿ ಬೆಳೆ ಬಾರದೆ ನಷ್ಟ ಉಂಟಾಗಿದ್ದರಿAದ ಏ. ೧ ರ ಗುರುವಾರ ಮನೆ ಬಿಟ್ಟು ತೆರಳಿದ್ದು ಏ. ೨ ರ ಶುಕ್ರವಾರ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಸಂಜೀವೇಗೌಡರ ಮಗ ವೆಂಕಟಾಚಲ ತಿಳಿಸಿದ್ದಾರೆ.


ಮೃತರ ಅಂತ್ಯಕ್ರಿಯೆ ಏ. ೨ ರ ಶುಕ್ರವಾರ ಸಂಜೆ ಸ್ವಗ್ರಾಮ ಯಲಾದಹಳ್ಳಿಯಲ್ಲಿ ನೆರವೇರಿತು. ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಸ್ಪತ್ರೆಗೆ ಮಾಜಿ ಸಚಿವ ಎ.ಮಂಜು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವಾನ ಹೇಳಿದರು.   ಈ ಸಂಬAಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Post a Comment

Previous Post Next Post