ರಾಮನಾಥಪುರ;- ಸಿರಿ ಮಳಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ಕಷ್ಠ ಗುಣಮಟ್ಟದ ವಸ್ತುಗಳು ಸಿಗುತ್ತಿವೆ. ಮಹಿಳಾ ಸಬಲೀಕರಣ ದೃಷ್ಟಿಯಿಂದ ಧರ್ಮಸ್ಥಳ ಸಿರಿ ಸಂಸ್ಥೆಯು ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯ ಮಳಿಗೆ ಸಿರಿಮಳಿಗೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ನ ನಿರ್ದೇಶಕ ಕೆ.ಸತೀಶ್ ಮಾತನಾಡಿ ಎಂದರು.
ಕೊಣನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮೋದ್ಯೋಗ ಸಂಸ್ಥೆಯ ಸಿರಿ ಮಳಿಗೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು ಅರಕಲಗೂಡು ತಾಲ್ಲೂಕಿನ ವ್ಯಾಪ್ತಿಯಲ್ಲಿನ ಮಹಿಳೆಯರು ತಯಾರಿಸುವ ವಸ್ತುಗಳಿನ್ನು ನಮ್ಮ ಸಿರಿ ಸಂಸ್ಥೆಯಲ್ಲಿ ಮಾರಾಟಕ್ಕೆ ಅವಕಾಶಮಾಡಿಕೊಡಲಾಗುವುದು. ಅಗತ್ಯವಿದ್ದಲ್ಲಿ ಆಸಕ್ತ ಮಹಿಳೆಯರಿಗೆ ಧರ್ಮಸ್ಥಳ ಸಂಸ್ಥೆಯವತಿಯಿAದ ತರಬೇತಿಯನ್ನು ನೀಡಲಾಗುವುದು.
ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ .ಕೆ.ಎನ್ ಮಾತನಾಡುತ್ತಾ ಮಹಿಳೆಯರು ಮನೆಯಲ್ಲಿ ತಯಾರಿಸುವ ವಸ್ತುಗಳಿಗೆ ದರನಿಗಧಿಮಾಡಿ, ವ್ಯವಸ್ಥಿತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ತಾನು ಯಾವುದೇ ಲಾಭವನ್ನು ನಿರೀಕ್ಷಿಸದಿರುವ ಸಂಸ್ಥೆ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗವಾಗಿದೆ. ಸಂಸ್ಥೆಯ ವತಿಯಿಂದ ಇರುವ ೩೦೦ ಮಳಿಗೆಗಳಲ್ಲಿ ದೊರೆಯುವ ಉತ್ಪನ್ನಗಳನ್ನು ಕೊಂಡಾಗ ಮಹಿಳೆಯರ ಶ್ರಮವನ್ನು ಗೌರವಿಸಿದಂತಾಗುತ್ತದೆ. ನಿಮ್ಮ ಮನೆಗೆ ಅಗತ್ಯವಿರುವ ವಸ್ತುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯಿದ್ದು ಜನತೆ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಸಂಘದ ಕಾರ್ಯನಿರ್ವಾಹಕ ಅಧಿಕಾರಿ ರಾಮು, ಅಧ್ಯಕ್ಷ ಎಸ್.ನಾಗರಾಜು, ಸದಸ್ಯ ಎಸ್.ಕೆ.ಕೃಷ್ಣ, ಕೃಷ್ಣಪ್ಪ, ಮಾಧುರಾವ್, ವಿಶ್ವಾಸ್, ಶೈಲಾ, ಮಂಜುಳಾ, ಸಿಬ್ಬಂದಿವರ್ಗ ಮತ್ತು ವಿವಿಧ ಮಹಿಳಾ ಸಂಘಗಳ ಸದಸ್ಯರಿದ್ದರು.
