ಹಾಸನ: ಸರಕಾರವು ಕೂಡಲೇ ೬ನೇ ವೇತನ ಜಾರಿಗೆ ಮಾಡಲು ಆಗ್ರಹಿಸಿ ರಸ್ತೆ ಬದಿ ಬೋಂಡ-ಬಜ್ಜಿ ತಯಾರಿಸಿ ಮಾರಾಟ ಮಾಡುವುದರ ಮೂಲಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ವಿನೂತನವಾಗಿ ಪ್ರತಿಭಟನೆ ಮಾಡುವ ಮೂಲಕ ಸರಕಾರದ ಗಮನಸೆಳೆದರು.
ನಗರದ ರೈಲ್ವೆ ನಿಲ್ದಾಣದ ಎದುರು ಕೆ.ಎಸ್.ಆರ್.ಟಿ.ಸಿ. ಡಿಪೋ ಹತ್ತಿರ ಮಾರುತಿ ದೇವಾಲಯದ ಬಳಿ ಇರುವ ಮಿನಿ ಬಸ್ ನಿಲ್ದಾಣದಲ್ಲಿ ಕುಳಿತು ಬೋಂಡ ಬಜ್ಜಿ ಸಿದ್ಧಪಡಿಸಿದ ಸಾರಿಗೆ ನೌಕರರು ಮಾರಾಟ ಮಾಡಲು ಮುಂದಾದರು.
ರಾಜ್ಯ ಸಾರಿಗೆ ನೌಕರರ ಕೂಡದ ಉಪಾಧ್ಯಕ್ಷರಾದ ಆರ್. ಆನಂದ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ಸರಕಾರ ನೀಡುತ್ತಿರುವ ಸಾರಿಗೆ ನೌಕರರ ಸಂಬಳವು ಕುಟುಂಬ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಕೂಡಲೇ ೬ನೇ ವೇತನವನ್ನು ರೈತರ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಜಾರಿಗೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಲಕ್ಷö್ಮಣ್ ಸೌದಿಯಲ್ಲಿ ಮನವಿ ಮಾಡಲಾಗುವುದು. ಕೊಡುವ ಸಂಬಳ ಸಾಕಾಗದೇ ಬೋಂಡ ಮತ್ತು ಬಜ್ಜಿ ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದ್ದೇವೆ. ಕುಟುಂದಲ್ಲಿ ಯಾರಾದರೂ ಖಾಯಿಲೆಗೆ ಬಿದ್ದರೇ ಅವರನ್ನು ಆಸ್ಪತ್ರೆಗೆ ಸೇರಿಸಲು ಹಣವಿಲ್ಲ. ಆರೋಗ್ಯ ಭಾಗ್ಯ ಕೊಡುವುದಾಗಿ ಹೇಳಿ ಸರಕಾರವು ಇನ್ನು ಕೂಡ ಜಾರಿ ಮಾಡಿರುವುದಿಲ್ಲ. ನಮ್ಮ ನ್ಯಾಯಯುತ ಬೇಡಿಕೆಯನ್ನು ಏನಾದರೂ ನಿರ್ಲಕ್ಷö್ಯ ಪ್ರದರ್ಶಿಸಿ ಏಪ್ರಿಲ್ ೭ರ ಒಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೇ ಸಾರಿಗೆ ನೌಕರರ ಮುಷ್ಕರವು ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿ ರಸ್ತೆ ಬದಿ ಬೋಂಡ ಬಜ್ಜಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಮಹೇಶ್, ರವಿ ಸೋಮಣ್ಣ, ಶಿವಣ್ಣ, ಕೃಷ್ಣಪ್ಪ, ಜಹುರ್ ಅಹಮದ್, ಶಿವರಾಂ, ಸತಿಶ್, ಕುಮಾರ್, ಅಶೋಕ್ ಇತರರು ಉಪಸ್ಥಿತರಿದ್ದರು.