ಬೇಲೂರು: ಹಗರೆಯಲ್ಲಿ ಗುರುವಾರ ಸಂತೆಯ ದಿನ ಜಿಲ್ಲಾಡಳಿತ ಈಗಾಗಲೇ ಸಂಪೂರ್ಣ ನಿಷೇಧ ಹೇರಿದ್ದು ಅಗತ್ಯವಸ್ತುಗಳಿಗೆ ಮಾತ್ರ ಸಮಯವನ್ನು ನಿಗದಿ ಪಡಿಸಿದ್ದರೂ ಸಹ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಮರೆತು ಮಾಸ್ಕ್ ಧರಿಸದೆ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಮಾನವ ಹಕ್ಕುಗಳ ಆಯೋಗದ ಯುವ ಘಟಕದ ರಾಜ್ಯಾಧ್ಯಕ್ಷ ಗಿರೀಶ್ ಮಾತನಾಡಿ ಸರ್ಕಾರ ಈಗಾಗಲೇ ಎರಡನೇ ಕೋವೀಡ್ ಅಲೆ ಹೆಚ್ಚಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ೧೪ ದಿನಗಳ ಕಾಲ ಸರ್ಕಾರ ಜನತಾ ಕರ್ಫ್ಯೂ ವಿಧಿಸಿದ್ದು,ಪೋಲೀಸ್ ಇಲಾಖೆ ,ಸಂಘಸಂಸ್ಥೆಗಳು ಹಾಗೂ ಕೊರೋನ ವಾರಿಯರ್ಸ್ ತಮ್ಮ ಜೀವನವನ್ನು ಪಣಕ್ಕಿಟ್ಟು ಜಾಗೃತಿ ಮೂಡಿಸುತ್ತಿದ್ದಾರೆ.ಆದರೆ ಇಲ್ಲಿಯ ಸಾರ್ವಜನಿಕರು ಇದರ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದು,ಸಾಮಾಜಿಕ ಅಂತರ ಪಾಲನೆ ಮಾಡದೆ ಮಾಸ್ಕ್ ಧರಿಸದೇ ಉದ್ಧಟತನ ತೋರುವ ಮೂಲಕ ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸುತ್ತಿಲ್ಲ.ಆದರೆ ನಿಗದಿತ ಸಮಯ ನೀಡಿದ್ದರೂ ಸಹ ಕೆಲ ವರ್ತಕರು ಅದನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಉದ್ಯಮಿ ಮಧು ಮಾತನಾಡಿ ಸರ್ಕಾರ ಎಲ್ಲರಿಗೂ ಸಮಯ ನಿಗದಿ ಮಾಡಿದಂತೆ ಕೆಲ ಅಂಗಡಿಗಳಿಗೆ ಒಂದು ನೀತಿ ಕೆಲವರಿಗೆ ಇನ್ನೊಂದು ನೀತಿ ಅನುಸರಣೆ ಮಾಡಿದ್ದಾರೆ.ಹೊಟೇಲ್ ಉದ್ಯಮಿಗಳಿಗೆ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಿದ್ದಾರೆ.ಕೆಲ ಅಂಗಡಿಗಳು ಗಾಳಿಗೆ ತೂರಿ ವರ್ತಿಸುತ್ತಿದ್ದಾರೆ ,ತಕ್ಷಣವೇ ಇಂತಹ ವರ್ತಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
Tags
ಬೇಲೂರು