ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರ ಬಿಡುಗಡೆಯಾಗಿ ಒಂದು ದಿನ ಕಳೆಯುವ ಮುನ್ನವೆ ಕನ್ನಡ ರಾಕರ್ಸ್ ಎಂಬ ಟೆಲಿಗ್ರಾಮ್ ಗುಂಪಿನಲ್ಲಿ ಪೈರಸಿಯಾಗಿದೆ.
ಕನ್ನಡ ಚಲನಚಿತ್ರಗಳು ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಂದಿರದಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳದೆ ಪೈರಸಿ ಕಾಪಿಗಳಾಗಿ ಎಲ್ಲೆಡೆ ಹರಿದಾಡುತ್ತಿರುವುದು ನಿಜಕ್ಕೂ ವಿಷಾದನೀಯ.
ಪೈರಸಿ ಮೊದಮೊದಲು ಹೆಚ್ಚಾಗಿ ಮಾಡಲ್ಪಟ್ಟಿದ್ದು ತಮಿಳ್ ರಾಕರ್ಸ್, ತೆಲುಗು ರಾಕರ್ಸ್ ಎಂಬ ಬೇರೆ ರಾಜ್ಯಗಳ ಸಾಮಾಜಿಕ ಜಾಲತಾಣದಲ್ಲಿ. ಆದರೆ ಇಂದು ನಮ್ಮ ಕನ್ನಡ ಸಿನಿಮಾಗಳು ಪೈರಸಿ ಆಗುತ್ತಿರುವುದು ನಿಜಕ್ಕೂ ಕನ್ನಡಿಗರಿಗೆ ಅವಮಾನ ಉಂಟು ಮಾಡಿದೆ.
ಈಗಾಗಲೇ ಕಳೆದ ರಾಬರ್ಟ್, ಪೊಗರು, ರಣಂ ಎಂಬ ಕನ್ನಡ ಚಲನಚಿತ್ರಗಳು ಪೈರಸಿಯಾಗಿ ಸುಮಾರು ನಲವತ್ತಕ್ಕೂ ಹೆಚ್ಚಿನ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿದ್ದವು ಈ ಬಗ್ಗೆ ತೀವ್ರವಾದ ಕ್ರಮಕೈಗೊಂಡಿದ್ದ ನಿರ್ಮಾಪಕರು ಅವುಗಳನ್ನು ಜಾಲತಾಣದ ಲಿಂಕ್ ಗಳನ್ನು ಒದಗಿಸಿದ್ದರು. ಆದರೆ ಪೈರಸಿಯೆಂಬ ಕಾಟವು ಮತ್ತೆ ಯುವರತ್ನ ಚಿತ್ರಕ್ಕೆ ತಟ್ಟಿದೆ.
ಈ ಬಗ್ಗೆ ಸೈಬರ್ ಪೋಲಿಸ್ ಸೇರಿದಂತೆ ಸ್ಯಾಂಡಲ್ ವುಡ್ ಅತಿ ಬೇಗನೆ ತೀವ್ರವಾದ ಕ್ರಮಕೈಗೊಳ್ಳಬೇಕೆಂದು ಅನೇಕರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣವಾದಲ್ಲಿ ವ್ಯಕ್ತಪಡಿಸಿದ್ದಾರೆ.

Tags
ಸಿನಿಮಾ