ವಿಜಯಪುರ: ಸಿಡಿ ಲೇಡಿಯ ತಾಯಿಗೆ ಸಕ್ಕರೆ ಕಾಯಿಲೆ ಇದ್ದುದರಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಯುವತಿ ತಾಯಿ ಕೈ-ಕಾಲು ಊದಿಕೊಂಡಿದ್ದು ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದು, ಆರೋಗ್ಯ ಏರುಪೇರಾಗಿದೆ. ಕಾರಣ ಚಿಕಿತ್ಸೆಗಾಗಿ ಕುಟುಂಬ ಸದಸ್ಯರು ಕಾರ್ ನಲ್ಲಿ ವಿಜಯಪುರ ಕರೆ ತಂದಿದ್ದಾರೆ.
ಸಿಡಿ ಲೇಡಿ ಭದ್ರತೆ ವಿಷಯ ಪ್ರಸ್ತಾಪಿಸಿದ್ದರಿಂದ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಿದ್ದು, ಯುವತಿಯ ಕಿರಿಯ ಸಹೋದರ ಹಾಗೂ ಓರ್ವ ಮಹಿಳಾ, ಓರ್ವ ಪೊಲೀಸ್ ಪೇದೆ ಭದ್ರತೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯ ಬಳಿಕ ಕಳೆದ ವಾರ ಯುವತಿಯ ಪೋಷಕರು ಬೆಳಗಾವಿ ನಗರದಿಂದ ವಿಜಯಪುರ ಜಿಲ್ಲೆ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಜ್ಜಿಯ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಯುವತಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಯುವತಿಯ ತಂದೆ, ಓರ್ವ ಸಹೋದರ ಹಾಗೂ ಅಜ್ಜಿ ಮನೆಯಲ್ಲಿ ಉಳಿದಿದ್ದಾರೆ. ಅವರಿಗೂ ಭದ್ರತೆಗೆ ಪೊಲೀಸರ ನಿಯೋಜನೆ ಮುಂದುವರೆದಿದೆ.
Tags
ಜಿಲ್ಲೆ