ಬೇಲೂರು ಸುಷ್ಮಾರಾಣಿ ಪರ ಬಿಜೆಪಿ ಮತಯಾಚನೆ .

ಬೇಲೂರು

ಪಟ್ಟಣದ ಪುರಸಭೆಗೆ ಪ್ರಜ್ಞಾವಂತ ವಿದ್ಯಾವಂತ  ಮಹಿಳೆಯ ಅವಶ್ಯಕತೆಯಿದ್ದು ಈ ಬಾರಿ ೧೪ ನೇ ವರ‍್ಡಿನಿಂದ ಆಟೋ ಗುರುತಿಗೆ ಸ್ರ‍್ಧಿಸಿರುವ   ಶುಷ್ಮಾರಾಣಿ ಅವರನ್ನು ಚುನಾಯಿತರನ್ನಾಗಿ ಮಾಡಬೇಕು ಎಂದು ತಾಲೂಕು ಚುನಾವಣಾ ಉಸ್ತುವಾರಿ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಬೆಣ್ಣೂರು ರೇಣುಕುಮಾರ್ ಮನವಿ ಮಾಡಿದರು .

ಪಟ್ಟಣದ ೧೪ ನೇ ವರ‍್ಡಿನಿಂದ ಬಿಜೆಪಿ, ಜೆಡಿಎಸ್ ಬೆಂಬಲಿತ ಸ್ವತಂತ್ರ ಅಭ್ರ‍್ಥಿಯಾಗಿ ಆಟೋ ಗುರುತಿಗೆ  ಸ್ರ‍್ಧಿಸಿರುವ ಸುಷ್ಮಾ ರಾಣಿ ಹಯವದನರಾವ್ ಅವರ ಪರವಾಗಿ ಬಿಜೆಪಿ ಮುಖಂಡರು ಗುಣಿಕೇರಿ ಬೀದಿಯಲ್ಲಿ ಮತಯಾಚಿಸಿ ಸಂರ‍್ಭದಲ್ಲಿ ಮಾತನಾಡಿದ ಅವರು ಭಾರತೀಯ ಜನತಾ ಪಕ್ಷವು ರಾಷ್ಟ್ರೀಯತೆಗೆ ಗೌರವ ಕೊಡುವಂತೆ ಸಾಮಾಜಿಕ ಕಳಕಳಿ ಬಗ್ಗೆಯು ಚಿಂತಿಸುತ್ತದೆ ಎಂಬುದಕ್ಕೆ ಈ ಬಾರಿ ಪುರಸಭೆ ಚುನಾವಣೆಯಲ್ಲಿ  ೧೪ ನೇ ವರ‍್ಡಿನಲ್ಲಿ ಬಿಜೆಪಿ ಅಭ್ರ‍್ಥಿಯನ್ನು ಹಾಕದಿರುವುದೇ ಸಾಕ್ಷಿಯಾಗಿದೆ . ಪುರಸಭೆಯಲ್ಲಿ ವಿದ್ಯಾವಂತ ಮಹಿಳೆಯರಿಗೆ ಅವಕಾಶ ಕೊಡಬೇಕು ಎಂಬ ನಿಟ್ಟಿನಲ್ಲಿ  ಪದವೀಧರೆಯಾಗಿರುವ ಸುಷ್ಮಾ ರಾಣಿಯವರಿಗೆ ಅವಕಾಶ ಕಲ್ಪಿಸಲು ನಮ್ಮ ಪಕ್ಷದಿಂದ ಅಭ್ರ‍್ಥಿಯನ್ನು ಕಣಕ್ಕಿಳಿಸಿಲ್ಲ ಎಂದರು.

        ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಮಾತನಾಡಿ  ಜೆಡಿಎಸ್ ಹಾಗೂ ಬಿಜೆಪಿಯಿಂದ ಒಮ್ಮತದ ಅಭ್ರ‍್ಥಿಯನ್ನಾಗಿ ಸುಷ್ಮಾರಾಣಿ ಅವರನ್ನು ಕಣಕ್ಕಿಳಿಸಲಾಗಿದೆ .  ಪುರಸಭೆಯಲ್ಲಿ ಆಡಳಿತ ನಡೆಸಿರುವ ಪಕ್ಷಗಳು ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಂಪರ‍್ಣ ವಿಫಲಗೊಂಡಿವೆ . ಈ ಬಾರಿ ಬಿಜೆಪಿ  ಪುರಸಭೆಯ ಚುಕ್ಕಾಣಿ ಹಿಡಿದಲ್ಲಿ  ರಾಜ್ಯದಲ್ಲೇ ಮಾದರಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ  ಆಶಯ ಹೊಂದಿದ್ದೇವೆ ಎಂದರು .

    ೧೪ ನೇ ವರ‍್ಡಿನ  ಸ್ವತಂತ್ರ ಅಭ್ರ‍್ಥಿ ಸುಷ್ಮಾರಾಣಿ ಹಯವದನರಾವ್ ಮಾತನಾಡಿ ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷವು  ನನಗೆ ಬೆಂಬಲಿಸಿ ಸ್ವತಂತ್ರ ಅಭ್ರ‍್ಥಿಯಾಗಿ ಸ್ರ‍್ಧಿಸಲು  ಅವಕಾಶ ನೀಡಿದೆ . ದೇಗುಲಕ್ಕೆ ಸಮೀಪವಿರುವ ನಮ್ಮ ವರ‍್ಡಿನ ಸಂಪರ‍್ಣ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ತಿಳಿಸಿದರು .  

ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಡಗೂರು ಆನಂದ್, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಯಕೇಶವ , ಹಳೇಬೀಡು ಬೇಲೂರು ಪ್ರಾಧಿಕಾರದ ಸಮಿತಿ ಸದಸ್ಯ ಕೋಟೆ ಶ್ರೀನಿವಾಸ್ ,  ಮಾಜಿ ಪುರಸಭಾ ಅಧ್ಯಕ್ಷ ದಯಾನಂದ್,  ಬಿ.ಆರ್ ಹಯವದನರಾವ್, ಸುಧೀಂದ್ರ, ಮಹೇಶ್, ಸುಬ್ರಹ್ಮಣ್ಯ, ರಘುರಾಂ ನರಸಿಂಹ ರಾಜಾರಾಂ, ಸೇರಿದಂತೆ ಪ್ರಮುಖರು ಹಾಜರಿದ್ದರು .



Post a Comment

Previous Post Next Post